ವಾಷಿಂಗ್ಟನ್ : ವಿಶ್ವ ಪ್ರಸಿದ್ಧ ಟೆನಿಸ್  ಆಟಗಾರ್ತಿ ಸೆರೆನಾ ವಿಲಿಯಮ್ ಕಳೆದ ಯುಎಸ್ ಓಪನ್ ಫೈನಲ್ಸ್ ನಲ್ಲಿ ವಿವಾದಿತ ನಡವಳಿಕೆಯಿಂದ  ಸುದ್ದಿಯಾಗಿದ್ದ ಸೆರೆನಾ ಇದೀಗ ಮತ್ತೊಮ್ಮೆ ಇಂಟರ್ನೆಟ್ ಬ್ರೇಕ್ ಮಾಡಿದ್ದಾರೆ. 

ಭಾನುವಾರ ಟಾಪ್ ಲೆಸ್ ಆಗಿ ಹಾಡು ಹಾಡುವ ಮೂಲಕ ಸೆರೆನಾ ಮತ್ತೊಮ್ಮೆ ಸಕತ್ ಸದ್ದು ಮಾಡಿದ್ದಾರೆ.  ಒಳ್ಳೆ ಉದ್ದೇಶದಿಂದ ನನ್ನ ದೇಹವನ್ನು ನಾನು ಮುಟ್ಟಿಕೊಳ್ಳುತ್ತೇನೆ ಎಂದು ಸ್ತನ ಕ್ಯಾನ್ಸರ್ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಸಲುವಾಗಿ ತಾವು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ. 

ಆಸ್ಟ್ರೇಲಿಯನ್ ಬ್ಯಾಂಡ್   ಐ ಟಚ್ ಮೈ ಸೆಲ್ಫ್  ಹಾಡಿಕೊಂಡು  ತಮ್ಮ ಎದೆಯನ್ನು ಕೈಯಿಂದ ಮುಚ್ಚಿಕೊಳ್ಳುವ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. 

ಬ್ರೆಸ್ಟ್ ಕ್ಯಾನ್ಸರ್ ಅವೇರ್ ನೆಸ್ ತಿಂಗಳು ಆಚರಣೆ ಹಿನ್ನೆಲೆಯಲ್ಲಿ ಐ ಟಚ್ ಮೈ ಸೆಲ್ಫ್  ಬ್ಯಾಂಡ್ ವಿಶ್ವದಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದ್ದು ಮಹಿಳೆಯರು ನಿರಂತರವಾಗಿ ತಮ್ಮನ್ನು ತಾವು  ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು ಎಂದು ಹೇಳಿದ್ದಾರೆ. 

ಇನ್ನು ನಾನು ನನ್ನ ಕಂಫರ್ಟ್ ಜೋನ್ ನಲ್ಲಿಯೇ ಮಾಡಿಕೊಳ್ಳಬಹುದಿತ್ತು. ಆದರೆ ವಿಶ್ವದಾದ್ಯಂತ ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾವು ಈ ರೀತಿ ಮಾಡಿದ್ದಾಗಿ ಹೇಳಿದ್ದಾರೆ.