Asianet Suvarna News Asianet Suvarna News

ಇಟಲಿಯಲ್ಲಿ ನೀಲಿ ಬಿಕಿನಿ ರಾಧಿಕಾ: ವೈರಲ್ ಆದ ವಿಡಿಯೊ

ಅಂದಹಾಗೆ ಆಕೆ ಹೋಗಿದ್ದು ಇಟಲಿಯ ತುಸ್ಸೆನಿಗೆ. ಪ್ರವಾಸ ಅನುಭವ ಚೆನ್ನಾಗಿತ್ತು ಅಂತ ಬರೆದುಕೊಂಡಿರುವ ಆಕೆ ಇನ್ನಷ್ಟುಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟು ಪಡ್ಡೆಗಳ ಪೇಚಾಟವನ್ನು ನೋಡಿ ಆನಂದಿಸಿದ್ದಾರೆ.

Radhika Apte raises the temperature in her blue bikini
  • Facebook
  • Twitter
  • Whatsapp

ಇತ್ತೀಚೆಗೆ ಬಾಲಿವುಡ್‌ ಹೀರೋಯಿನ್‌ಗಳು ಟೂರ್‌ ಹೋಗೋದು ಜಾಸ್ತಿ ಆಗಿದೆಯಾ ಅಥವಾ ಅದನ್ನು ಪೋಸ್ಟ್‌ ಮಾಡುವುದು ಜಾಸ್ತಿ ಆಗಿದೆಯಾ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಪ್ರವಾಸ ಪಡ್ಡೆಗಳ ಕಣ್ಣನ್ನಂತೂ ತಂಪಾಗಿ ಇಡುತ್ತಿವೆ. ಇನ್‌ಸ್ಟಾಗ್ರಾಂ ಎಂಬ ಭೂಲೋಕದ ಸ್ವರ್ಗದಲ್ಲಿ ಇಂಥ ಫೋಟೋಗಳು ಶೇರ್‌ ಆಗುತ್ತಲೇ ಇವೆ. ಇದೀಗ ರಾಧಿಕಾ ಆಪ್ಟೆಸರದಿ. ತನ್ನ ರಸಿಕತೆಯಿಂದ ಸೆಳೆದಿರುವ ರಾಧಿಕಾ ಸಿನಿಮಾದಲ್ಲಲ್ಲ ನಿಜ ಜೀವದಲ್ಲಿ ಪ್ರವಾಸಕ್ಕೆ ಹೋಗಿ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ. ಎತ್ತರದಿಂದ ನೀರಿಗೆ ಹಾರುವ ಆಕೆಯನ್ನು ನೋಡಿದ ಪಡ್ಡೆಗಳು ಉಟ್ಟತುಂಡು ಬಟ್ಟೆಗೆ ಮರುಳಾದರೋ, ದೇಹಸಿರಿಗೆ ಮರುಳಾದರೋ- ಹೇಳುವುದು ಕಷ್ಟವೇ! ಆ ಗೊಂದಲದಲ್ಲೇ ಆ ವೀಡಿಯೋ ವೀಕ್ಷಣೆ ಮೂರು ಲಕ್ಷ ಮುಟ್ಟಿದೆ.
ಅಂದಹಾಗೆ ಆಕೆ ಹೋಗಿದ್ದು ಇಟಲಿಯ ತುಸ್ಸೆನಿಗೆ. ಪ್ರವಾಸ ಅನುಭವ ಚೆನ್ನಾಗಿತ್ತು ಅಂತ ಬರೆದುಕೊಂಡಿರುವ ಆಕೆ ಇನ್ನಷ್ಟುಫೋಟೋಗಳನ್ನು ಇನ್‌ ಸ್ಟಾಗ್ರಾಂನಲ್ಲಿ ಹರಿಬಿಟ್ಟು ಪಡ್ಡೆಗಳ ಪೇಚಾಟವನ್ನು ನೋಡಿ ಆನಂದಿಸಿದ್ದಾರೆ. ಅಂದಹಾಗೆ ಸದ್ಯ ಆಕೆ ಮತ್ತೊಮ್ಮೆ ನಿರ್ದೇಶಕ ಶ್ರೀರಾಮ್‌ ರಾಘವನ್‌ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ‘ಬದ್ಲಾಪುರ್‌'ನಲ್ಲಿ ವರುಣ್‌ ಧವನ್‌ ಜೊತೆ ಅಭಿನಯಿಸಿದ್ದರು. ಇದೀಗ ‘ವಿಕಿ ಡೋನರ್‌' ಹುಡುಗ ಆಯುಶ್ಮಾನ್‌ ಖುರಾನಾ ಜೊತೆ ಅಭಿನಯಿಸುತ್ತಿದ್ದಾಳೆ. ಜೊತೆಗೆ ತಬು ಕೂಡ ಇರುತ್ತಾರೆ. 

Follow Us:
Download App:
  • android
  • ios