ಸೆಲ್ಫಿ ಕ್ರೇಜ್  ಯಾರನ್ನು ಬಿಟ್ಟಿಲ್ಲ. ಆದರೆ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವ ಶಕ್ತಿ ಇಲ್ಲದವರು ಏನು ಮಾಡಬೇಕು? ಅದಕ್ಕೆ ಈ ಮಕ್ಕಳು ಮಾರ್ಮಿಕವಾದ ಉತ್ತರವೊಂದನ್ನು ನೀಡಿದ್ದಾರೆ. ಅದೇ ಕಾರಣಕ್ಕೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 ಜನ ಮಕ್ಕಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಮ್ಮನ್ನು ತಾವು ಮರೆತಿದ್ದಾರೆ. ಈ ಪೋಟೋ ಹೇಳುತ್ತಿರುವ ಅಗಾಧ ಮಾಹಿತಿಗೆ, ಸಂದೇಶಕ್ಕೆ ಅಕ್ಷರಗಳಲ್ಲಿ ರೂಪ ಕೊಡಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಆದಿಯಾಗಿ ಸಾವಿರಾರು ಜನ ಈ ಫೋಟೋ ಹಂಚಿಕೊಂಡಿದ್ದಾರೆ.

ಮೋದಿ ಜೊತೆ ಬಾಲಿವುಡ್ ಸೆಲಬ್ರಿಟಿಗಳ ಸೆಲ್ಫಿ ಪೋಸ್!

ಫೋಟೋ ಹಂಚಿಕೊಂಡಿರುವುದು ಮಾತ್ರ ಅಲ್ಲ. ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಯಾವ ಊರಿನದು ಗೊತ್ತಿಲ್ಲ. ಆದರೆ ಬಡ ಮಕ್ಕಳ ಬಾಲ್ಯವನ್ನು ಸ್ಫುಟವಾಗಿ ತೆರೆದಿಡುವ ಫೋಟೋ ನೋಡಿದರೆ ಲೈಕ್ ಮಾಡದೇ ಮುಂದೆ ಹೋಗಲು ಸಾಧ್ಯವೇ ಇಲ್ಲ.