Asianet Suvarna News Asianet Suvarna News

    ಜಂಕ್ ಫುಡ್ ಬ್ಯಾಡ್ರಿ , ಆರೋಗ್ಯದ ಬಗ್ಗೆ ಗಮನ ಕೊಡ್ರಿ

    Oct 1, 2018, 3:08 PM IST

    ಇಂದು ಅಕ್ಟೋಬರ್ 1. ವಿಶ್ವ ವೃದ್ಧರ ದಿನ.  ಬಾಳ ಸಂಜೆಯಲ್ಲಿರುವ, ಮಾಗಿದ ಮನಸ್ಸುಗಳ ಕಷ್ಟಸುಖ ವಿಚಾರಿಸುವ ಸಮಯ.  ಅಂಥ 10 ಮಂದಿ ಹಿರಿಯ ಜೀವಗಳೊಂದಿಗೆ ನಮ್ಮ ವರದಿಗಾರರು ಮಾತುಕತೆ ನಡಿಸಿದ್ದಾರೆ.  ಬನ್ನಿ, ವಯೋವೃದ್ಧರ ಮನದಾಳದ ಮಾತುಗಳನ್ನು ಕೇಳಿ - ಸಂಪಾದಕ

    - ಸಿಂಡಿಕೇಟ್ ಬ್ಯಾಂಕ್'ನಲ್ಲಿ 30ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿರುವ ಬೆಂಗಳೂರಿನ ನಾಗರಬಾವಿ ವಾಸಿ ಮೋಹನ್ ಕುಮಾರ್ ಇಂದಿಗೂ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ವಿಶ್ವ ವೃದ್ಧರ ದಿನದ ಅಂಗವಾಗಿ ಯುವಕರಿಗೆ ತಮ್ಮ ಸಲಹೆ ನೀಡಿರುವ ಅವರು, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಗುರಿಯ ಜೊತೆಗೆ ಆರೋಗ್ಯದ ಕಾಳಜಿಯು ಮುಖ್ಯ. ಸಾಧ್ಯವಾದಷ್ಟು ಮನೆಯ ಆಹಾರವನ್ನೇ ಸೇವಿಸಿ. ಜಂಕ್ ಫುಡ್ ಸೇವನೆ ಬಿಟ್ಟುಬಿಡಿ. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದಿದ್ದಾರೆ.