ಜಗತ್ತಿನಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ಕೈನಲ್ಲಿ ಹಣವಿದ್ರೂ ಅದನ್ನು ಬಿಚ್ಚದವರು ಕೆಲವರಾದ್ರೆ ಮತ್ತೆ ಕೆಲವರ ಕೈನಲ್ಲಿ ಹಣವಿಲ್ಲವೆಂದ್ರೂ ಶ್ರೀಮಂತಿಕೆ ಫೋಸ್ ಕೊಡ್ತಾರೆ. ಕುಟುಂಬಸ್ಥರಿಗೆ ಸುಳ್ಳು ಹೇಳಿ, ಅದನ್ನು ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬ ಒಪ್ಪಿಕೊಂಡಿದ್ದಾನೆ.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಪಾಲಕರು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಮಕ್ಕಳು ಓದಿ, ಕೆಲಸ ಹಿಡಿಯುತ್ತಿದ್ದಂತೆ ಪಾಲಕರು ನಿಟ್ಟುಸಿರು ಬಿಡ್ತಾರೆ. ಮಕ್ಕಳಿಂದ ಸ್ವಲ್ಪ ಆರ್ಥಿಕ ಸಹಾಯವಾಗುತ್ತೆ ಎಂದು ಬಯಸ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಿದ ಸಾಲವನ್ನೆಲ್ಲ ತೀರಿಸಿ, ಆರಾಮವಾಗಿರಬಹುದೆಂದು ಭಾವಿಸ್ತಾರೆ. ಪಾಲಕರಾಗಿ ಇದನ್ನೆಲ್ಲ ಆಸೆಪಡೋದು ಸಹಜ. ಆದರೆ ಮಕ್ಕಳ ದೃಷ್ಟಿಯಲ್ಲಿ ಇದು ತಪ್ಪು. ಕೆಲ ಮಕ್ಕಳು ತಾವು ಕಷ್ಟಪಟ್ಟು ಓದಿ, ಈಗಷ್ಟೆ ಜಾಬ್ ಹಿಡಿದಿದ್ದೇವೆ. ಈಗ್ಲೇ ಮನೆ ಜವಾಬ್ದಾರಿ, ಸಾಲದ ಹೊಣೆ ಮೈಮೇಲೆ ಬಂದ್ರೆ ಹೇಗೆ, ಸ್ವಲ್ಪ ದಿನ ನಾವು ಲೈಫ್ ಎಂಜಾಯ್ ಮಾಡೋದು ಬೇಡ್ವಾ ಎಂದು ಪ್ರಶ್ನೆ ಮಾಡ್ತಾರೆ. ಇವರಲ್ಲಿ ಯಾರದ್ದೂ ತಪ್ಪಿಲ್ಲ. ಆದ್ರೆ ಇಬ್ಬರ ಆಸೆಯೂ ಅತಿಯಾದ್ರೆ ಯಡವಟ್ಟಾಗುತ್ತದೆ. ಪಾಲಕರಿಗೆ ತಮ್ಮ ಕರ್ತವ್ಯ ಗೊತ್ತಿರಬೇಕು, ಮಕ್ಕಳಿಗೆ ತಮ್ಮ ಜವಾಬ್ದಾರಿಯ ಅರಿವಿರಬೇಕು. ಇಲ್ಲವೆಂದ್ರೆ ಈ ವ್ಯಕ್ತಿಯಂತಾಗಬೇಕಾಗುತ್ತದೆ.
ಕುಟುಂಬ (Family) ಅದ್ರಲ್ಲೂ ಅಪ್ಪ – ಅಮ್ಮನಿಗೆ ಮಕ್ಕಳು ಯಾವ ಕೆಲಸ ಮಾಡ್ತಿದ್ದಾರೆ, ಎಷ್ಟು ದುಡಿಯುತ್ತಿದ್ದಾರೆ ಎಂಬುದನ್ನು ಅರಿಯುವ ಅರ್ಹತೆಯಿದೆ. ಮಕ್ಕಳಿಗೆ ಹೆಚ್ಚು ಸ್ಯಾಲರಿ (Salary) ಬರ್ತಿದೆ ಎಂಬುದು ಗೊತ್ತಿರುತ್ತದೆ. ಸಂಬಳ ಹೆಚ್ಚು ಬರ್ತಿದೆ ಅಂದಾಗ, ಅದು, ಇದು ಕೊಡಿಸು ಅಂತಾ ರಗಳೆ ಮಾಡಿದ್ರೆ ಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಈ ಮಗನಿಗೂ ಅದೇ ಆಗಿದೆ. ಹಾಗಾಗಿ ಸಂಬಳ ಹೆಚ್ಚಿಗೆ ಬಂದ್ರೂ ಮುಚ್ಚಿಟ್ಟಿದ್ದಾನೆ. ಈ ವಿಷ್ಯವನ್ನು ಸಾಮಾಜಿಕ ಜಾಲತಾಣ (Social Network) ದಲ್ಲಿ ಹಂಚಿಕೊಂಡಿದ್ದಾನೆ.
ನಿಮ್ಮ ಹೆಂಡ್ತಿಯಲ್ಲಿದ್ಯಾ ಈ ಗುಣ? ಹಾಗಾದ್ರೆ ಒಳ್ಳೇಯವಳು ಎಂದರ್ಥ!
ರೆಡ್ಡಿಟ್ (Reddit) ನಲ್ಲಿ ವ್ಯಕ್ತಿ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾನೆ. ನಾನು ತುಂಬಾ ಶ್ರೀಮಂತ (Rich). ಆದ್ರೂ ನನ್ನ ಕುಟುಂಬಸ್ಥರಿಗೆ ಉದ್ದೇಶಪೂರ್ವಕವಾಗಿ ನಾನು ಬಡವ ಎಂದು ಹೇಳಿದ್ದೇನೆ ಎಂದು ಬರೆದುಕೊಂಡಿದ್ದಾನೆ. ನಾನು ಕೋಟ್ಯಾಧಿಪತಿ. ಮನೆಯವರು ನನ್ನ ಭೇಟಿಗೆ ಬಂದಾಗ ನಾನು ಸಣ್ಣದೊಂದು ಅಪಾರ್ಟ್ಮೆಂಟ್ (Apartment) ಬಾಡಿಗೆಗೆ ತೆಗೆದುಕೊಂಡು ಅದ್ರಲ್ಲಿ ವಾಸ ಮಾಡ್ತೇನೆ. ನಾನು ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡ್ತೇನೆ ಎಂದು ಅವರು ಭಾವಿಸ್ತಾರೆ.
ವಿದೇಶದಲ್ಲಿ ಓದಿದ ನಂತ್ರ ನನಗೆ ಕೆಲಸ ಸಿಕ್ಕಿತ್ತು. ನಮ್ಮ ಅಮ್ಮ ಕೆಲಸ ಸಿಗ್ತಿದ್ದಂತೆ ಸಂಬಳ ಎಷ್ಟು ಅಂತ ಕೇಳಿದ್ರು. ನಾನು ಹೆಚ್ಚು ಸಂಬಳ ಪಡೆಯುತ್ತಿದ್ದೇನೆ ಎಂದು ಅವರು ಭಾವಿಸಿದ್ದರು. ವಾಸ್ತವವಾಗಿ ಹಣ (money) ಸಂಪಾದಿಸುತ್ತಿರುವ ದೇಶದಲ್ಲಿ ಕರೆನ್ಸಿ ಪ್ರಕಾರ ಸಂಬಳ ತೀರಾ ಕಡಿಮೆ ಇತ್ತು.
18 ವರ್ಷಗಳ ಹಿಂದೆ ಪತಿ ಬರೆದಿದ್ದ ಲವ್‌ಲೆಟರ್ ಶೇರ್ ಮಾಡಿದ ಮಹಿಳೆ, ವಾರೆವ್ಹಾ ಎಂದ ನೆಟ್ಟಿಗರು
ಅವರು ನನ್ನನ್ನು ಭೇಟಿಯಾಗಲು ಬಂದಾಗ ಅವರ ಎಲ್ಲಾ ಖರ್ಚುಗಳನ್ನು ತಾವೇ ಭರಿಸಬೇಕಾಗಿತ್ತು. ಅಕ್ಕ-ತಂಗಿಯರ ಶಾಲೆಯ ಫೀಸು ಇತ್ಯಾದಿಗಳನ್ನೂ ತಾವೇ ನೋಡಿಕೊಳ್ಳಬೇಕಾಗಿತ್ತು. ಪ್ರತಿ ಬಾರಿ ಉಡುಗೊರೆಗಳನ್ನು ಕೇಳ್ತಿದ್ದರು. ಅವರು ಎಲ್ಲಿ ಹೋದ್ರೂ ಬಿಲ್ ಕಟ್ಟಬೇಕಿತ್ತು. ರಜೆಯಲ್ಲೆಲ್ಲ ನಮ್ಮ ಮನೆಗೆ ಬರ್ತಿದ್ದ ಅವರು, ನನ್ನನ್ನು ಎಟಿಎಂ ಎಂದು ಪರಿಗಣಿಸಲು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ ಕುಟುಂಬದ ಇತರ ಸದಸ್ಯರಿಗೆ ನನ್ನ ಬಳಿ ಹೋಗಿ ಎಂಜಾಯ್ ಮಾಡುವಂತೆ ಹೇಳುತ್ತಿದ್ದರು. ಒಟ್ಟಿನಲ್ಲಿ ಮನೆಯವರಿಗೆ ತನ್ನ ಬಗ್ಗೆ ಕಾಳಜಿ ಇರಲಿಲ್ಲ. ನನ್ನ ಮನೆಯನ್ನು ವಿಹಾರ ತಾಣವಾಗಿ ಮಾಡಿಕೊಂಡಿದ್ದರು ಎಂದು ಬರೆದಿದ್ದಾರೆ.
ಕೊರೊನಾ ಸಮಯದಲ್ಲಿ ನಾನು ಸ್ವಂತ ವ್ಯವಹಾರ ಶುರು ಮಾಡಿದ್ದೆ. ಅದ್ರಲ್ಲಿ ಉತ್ತಮ ಆದಾಯ ಬರ್ತಾಯಿತ್ತು. ಆದ್ರೆ ಮನೆಯವರಿಗೆ ಕೊರೊನಾ ಸಮಯದಲ್ಲಿ ಕೆಲಸ ಹೋಗಿದೆ ಎಂದು ಹೇಳಿದ್ದೆ. ಜೊತೆಗೆ ಸಿಕ್ಕಿರುವ ಹೊಸ ಕೆಲಸದಲ್ಲಿ ಕಡಿಮೆ ಸಂಬಳ ಎಂದಿದ್ದೆ. ನಂತ್ರ ಮನೆಯವರು ನನ್ನ ಜೊತೆ ಮಾತನಾಡೋದನ್ನು ಕಡಿಮೆ ಮಾಡಿದ್ದಾರೆ. ನನ್ನನ್ನು ಭೇಟಿಯಾಗೋದು ಕಡಿಮೆಯಾಗಿದೆ. ಸಿಕ್ಕಾಗಲೂ ಅವರ ಖರ್ಚನ್ನು ಅವರೇ ಬರಿಸಿಕೊಳ್ತಾರೆ ಎಂದು ವ್ಯಕ್ತಿ ತನ್ನ ಕಥೆ ಬರೆದಿದ್ದಾನೆ.
