ಜಗತ್ತಿನ ಬಹುತೇಕ ಹೆಣ್ಣು ಮಕ್ಕಳು ಆರೋಗ್ಯವಾಗಿರಲು (healthy) ಕಾರಣ ಮುಟ್ಟಾಗುವುದರಿಂದ (menstrual). ತಿಂಗಳಲ್ಲಿ ಐದು ದಿನ ಸ್ವಲ್ಪ ಇರಿಸುಮುರಿಸಾದರೂ (uncomfortable) ಆರೋಗ್ಯಕರ ಜೀವನ ಸಾಗಿಸಬಹುದು. ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಆಹಾರ(food), ಸ್ವಚ್ಛತೆ(clean) ಬಹಳ ಮುಖ್ಯ. ಹಾಗೆಯೇ ಯಾವೆಲ್ಲ ತಪ್ಪುಗಳನ್ನು ಈ ಸಮಯದಲ್ಲಿ ಮಾಡಬಾರದು ಎಂಬುದರ ಮಾಹಿತಿ ಇಲ್ಲಿದೆ.
ಋತು ಚಕ್ರ (menstruations) ಇದು ನೈಸರ್ಗಿಕವಾಗಿ (natural process) ಹೆಣ್ಣುಮಕ್ಕಳಿಗೆ ಬಂದಿರುವ ವರದಾನ ಎನ್ನಬಹುದು. ಪ್ರತಿ ವರ್ಷ ಮೇ 28ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನವೆಂದು (Menstrual Hygiene Day) ಆಚರಿಸಲಾಗುತ್ತದೆ. ಯುವತಿಯೊಬ್ಬಳು ಗರ್ಭಧರಿಸಲು ಸಿದ್ಧವಾದ ದಿನವನ್ನು ಋತುಮತಿಯಾದ ದಿನ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಹೆಣ್ಣು ತನ್ನ 14 ವರ್ಷಕ್ಕೆಲ್ಲ ಮೊದಲ ಬಾರಿ ಮುಟ್ಟಾಗುತ್ತಾಳೆ. ಸಾಮಾನ್ಯವಾಗಿ ಮಾಸಿಕ ಋತು ಚಕ್ರವು (monthly period) 21 ರಿಂದ 35 ದಿನಗಳವರೆಗೆ ಬದಲಾಗುತ್ತೆ. ಐದು ದಿನಗಳ ಕಾಲ ರಕ್ತಸ್ರಾವವಾಗುತ್ತೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಲವು ಸಮಸ್ಯೆಗಳನ್ನು ಅನುಭವಿಸುತ್ತಾಳೆ.
ಮುಟ್ಟಾದ ಸಂದರ್ಭದಲ್ಲಿ ಸ್ವಚ್ಛತೆ (clean & hygiene) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ನಮ್ಮ ದೇಶದಲ್ಲಿ ಈಗಲೂ ಕೆಲ ಅಂಧ ಆಚರಣೆಗಳಿವೆ. ಋತುಮತಿಯಾದಳೆಂದು ಎಷ್ಟು ಹಣ್ಣು ಮಕ್ಕಳನ್ನು ಇಂದಿಗೂ ಶಿಕ್ಷಣದಿಂದ (education) ದೂರ ಇಡುತ್ತಿದ್ದಾರೆ. ಅಲ್ಲದೆ ಮಡಿ ಮೈಲಿಗೆ, ಕೀಳಾಗಿ ನೋಡುವುದು ಇಂದಿಗೂ ನಡೆಯುತ್ತಿದೆ. ಇದನ್ನು ಹೋಗಲಾಡಿಸಲು ಜಾಗೃತಿ ಮೂಡಿಸುವುದು ಬಹಳ ಮುಖ್ಯ.
ಪೀರಿಯಡ್ಸ್ ಆದಾಗ ಬಳಸುವ ಸ್ಯಾನಿಟರಿ ಪ್ಯಾಡ್‌ನಿಂದ (sanitary pad) ಹಿಡಿದು ಸೇವಿಸುವ ಆಹಾರ, ಈ ಸಂದರ್ಭದಲ್ಲಿ ಮಾಡಬೇಕಾದ ವ್ಯಾಯಾಮ(exercise), ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದಿರಬೇಕು.
World Menstrual hygiene day : ಈ ದಿನದ ಮಹತ್ವ ಹಾಗೂ ಪ್ರಾಮುಖ್ಯತೆ ಏನು ಗೊತ್ತಾ?
ಮುಟ್ಟಿನ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಮಾಹಿತಿ ಇಲ್ಲಿದೆ.
1. ಮುಟ್ಟಾದಾಗ ಮುಖ್ಯವಾಗಿ ಮಾಡಬೇಕಾದ ಕೆಲಸ ಉತ್ತಮವಾದ ಸ್ಯಾನಿಟರಿ ಪ್ಯಾಡ್ (sanitary pad) ಆರಿಸಿಕೊಳ್ಳುವುದು. ಮಾರ್ಕೆಟ್‌ನಲ್ಲಿ ಹಲವು ರೀತಿಯ ಸ್ಯಾನಿಟರಿ ಪ್ಯಾಡ್‌ಗಳು, ಮೆಂಷುರಲ್ ಕಪ್ (menstrul cup), ಟ್ಯಾಂಪೋಸ್‌ಗಳು(tampons) ಬಂದಿವೆ. ಆದರೆ ನಮ್ಮ ದೇಹಕ್ಕೆ ಕಂಫರ್ಟ್(comfort) ನೀಡುವ ಒಂದೇ ವಿಧವನ್ನು ಮೊದಲಿನಿಂದ ಬಳಸಬೇಕು.
2. ಪೀರಿಯಡ್ಸ್ ಬಗ್ಗೆ ಏನಾದರೂ ಸಮಸ್ಯೆ ಇದ್ದಲ್ಲಿ, ಅನುಮಾನಗಳಿದ್ದಲ್ಲಿ ಯಾರಿಗೆ ಕೇಳುವುದೆಂದು ಹಿಂಜರಿಕೆ ಬೇಡ. ಹಿರಿಯರ ಬಳಿ ಅಥವಾ ನುರಿತ ತಜ್ಞರ(Gynecologist) ಬಳಿ ಕೇಳಿ ತಿಳಿದುಕೊಳ್ಳಬೇಕು.
3. ಸಾಮಾನ್ಯವಾಗಿ ಮುಟ್ಟಾದಾಗ ಬಹುತೇಕ ಹೆಣ್ಣು ಮಕ್ಕಳು ದೈಹಿಕ(physically) ಹಾಗೂ ಮಾನಸಿಕವಾಗಿ(mentally) ಕುಗ್ಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಹಾಗಾಗಿ ಮುಟ್ಟಾದಾಗ ಉತ್ತಮ ಹಾಗೂ ಪೌಷ್ಠಿಕಾಂಶವಿರುವ(neautrion) ಆಹಾರವನ್ನು ಆಗಾಗ್ಗೆ ಸೇವಿಸಬೇಕು. ಜೊತೆಗೆ ಈ ಸಂದರ್ಭದಲ್ಲಿ ಕೆಲ ವ್ಯಾಯಾಮಗಳು(exercise) ಮಾಡಬೇಕಾಗುತ್ತೆ. ಇದರಿಂದ ನಮ್ಮನ್ನು ನಾವು ಆರೋಗ್ಯವಾಗಿ, ಆಯಕ್ಟಿವ್(active) ಆಗಿ ಇರಲು ಸಾಧ್ಯ.
4. ಸ್ವಚ್ಛತೆ ಈ ಸಂದರ್ಭದಲ್ಲಿ ಬಹಳ ಮುಖ್ಯ. ದಿನಕ್ಕೆರಡು ಬಾರಿ ಕ್ಲೀನಾಗಿ ಸ್ನಾನ(clean bath) ಮಾಡುವುದರಿಂದ ಆರೋಗ್ಯ ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು. ಪ್ಯಾಡ್‌ಗಳನ್ನು ಆಗಾಗ್ಗೆ ಬದಲಾಯಿಸುವುದು. ಬಳಸಿದ ಬಳಿಕೆ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
5. ಪೀರಿಯಡ್ಸ್ ವಿಷಯದಲ್ಲಿ ಗಮನಿಸಬೇಕಾದ ಪ್ರಮುಖ ಕೆಲಸ ಕ್ಯಾಲೆಂಡರ್ ಮೇಂಟೇನ್(calender maintenance) ಮಾಡುವುದು. ಮುಟ್ಟಾಗುವುದರಲ್ಲಿ ಡೇಟ್ಸ್ಗಳು ಹೆಚ್ಚು ಕಡಿಮೆಯಾಗುತ್ತಿರುತ್ತೆ. ಹಾಗಾಗಿ ಕ್ಯಾಲೆಂಡರ್ ಮೇಂಟೇನ್ ಮಾಡಬೇಕಾಗುತ್ತದೆ. ಇದರಿಂದ ಫ್ಯಾಮಿಲಿ ಪ್ಲಾನಿಂಗ್‌ಗೂ(family planning) ಸಹಾಯವಾಗುತ್ತೆ.
ಭಾರತದಲ್ಲಿ ಕೇವಲ ಶೇ.36ರಷ್ಟು ಮಹಿಳೆಯರು ಮಾತ್ರ ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸ್ತಾರೆ !
ಪೀರಿಯಡ್ಸ್ ಟೈಂನಲ್ಲಿ ಈ ತಪ್ಪು ಮಾಡಬೇಡಿ
1. ಮುಟ್ಟಾದಾಗ ಸುಗಂಧ(perfume) ಭರಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬಾರದು. ಇದರಿಂದ ಸಮಸ್ಯೆಗಳು ಎದುರಾಗಬಹುದು ಎಂಬುದು ತಜ್ಞರು ಅಭಿಪ್ರಾಯ.
2. ದೀರ್ಘ ಕಾಲದವರೆಗೆ ಒಂದೇ ಪ್ಯಾಡ್ ಬಳಸುವುದು ಒಳ್ಳೆಯದಲ್ಲ. ನಮ್ಮ ದೇಹದಲ್ಲಿನ ಕೆಟ್ಟ ರಕ್ತ(unwanted blood) ಪೀರಿಯಡ್ಸ್ ರೂಪದಲ್ಲಿ ಹೊರಬೀಳುತ್ತದೆ. ಹಾಗಾಗಿ ಆಗಾಗ್ಗೆ ಬದಲಾಯಿಸುತ್ತಿರಿಬೇಕು. ಇದರಿಂದ ಇನ್ಫೆಕ್ಷನ್(infection) ಆಗುವುದನ್ನು ತಡೆಯಬಹುದು.
3. ಅತಿಯಾದ ಸೆಳೆತ, ಅಸ್ವಸ್ಥರಾದಲ್ಲಿ ತಡ ಮಾಡದೆ ತಜ್ಞರ ಸಲಹೆ ಪಡೆದು ಮೆಡಿಸಿನ್(medicine) ತೆಗೆದುಕೊಳ್ಳುವುದು ಒಳ್ಳೆಯದು.
4. ಬಳಸಿದ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಬಳಸಿದ ನಂತರ ಅದನ್ನು ತೊಳೆದು ಒಂದು ಕವರ್‌ನಲ್ಲಿ ಕಟ್ಟಿ ವಿಲೇವಾರಿ(dustbin) ಮಾಡುವುದು ಒಳ್ಳೆಯದು.
5. ಮುಂದಿನ ಪೀರಿಯಡ್ಸ್ ದಿನಕ್ಕೆ ಮೊದಲೇ ತಯಾರಿ ಮಾಡಿಟ್ಟುಕೊಳ್ಳಿ. ಅದಕ್ಕೆ ಸಂಬAಧಿಸಿದ ವಸ್ತುಗಳು ಎಲ್ಲವೂ ಕೈಗೆಟಕುವಂತಿದ್ದರೆ ಒಳ್ಳೆಯದು.
6.ಕೆಲ ಅಂಧ ಆಚರಣೆ, ಸುಳ್ಳು ಮಾಹಿತಿಗಳಿಗೆ ಕಿವಿಗೊಡಬೇಡಿ.
