Asianet Suvarna News Asianet Suvarna News

ಸಾಫ್ಟ್‌ ಇಡ್ಲಿ ಮಾಡೋದು ನಿಮಗೆ ಗೊತ್ತಾ? ಕತ್ರಿನಾ ಕೈಫ್‌ ಹೇಳಿಕೊಡ್ತಾರೆ ಕಲೀರಿ!

ಬಾಲಿವುಡ್‌ನ ಫಿಟ್‌ ಆಂಡ್‌ ಫೈನ್‌ ನಟಿ, ಐಟಂ ಸಾಂಗ್‌ಗಳ ಸರದಾರಿಣಿ, ಕತ್ರಿನಾ ಕೈಫ್‌ ಸಾಫ್ಟ್‌ ಸಾಫ್ಟ್‌ ಇಡ್ಲಿ ಮಾಡುವುದು ಹೇಗೆ ಅಂತ ಹೇಳಿದ್ದಾರೆ. ದಕ್ಷಿಣ ಭಾರತೀಯ ನಟಿಯರು ಇಡ್ಲಿ ಮಾಡೋದು ಹೇಗೆ ಅಂತ ಹೇಳಿದ್ರೆ ಓಕೆ, ಕತ್ರೀನಾ ಹೇಳಿದ್ದಾಳೆಂದರೆ ತುಸು ಆಶ್ಚರ್ಯವೇ ಸರಿ...

Katrin Kaif give idea to how to make soft Idly
Author
Bengaluru, First Published Jan 20, 2020, 5:35 PM IST

ಸಾಮಾನ್ಯವಾಗಿ ನಮ್ಮ ನಟಿಯರು ಫಾರಿನ್‌ ತಿಂಡಿಗಳನ್ನು ಸವಿಯುವ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಹಾಕಿಕೊಳ್ಳುತ್ತಾರೆ. ಮಾರಿಷಸ್‌ನ ಬೀಚುಗಳಲ್ಲಿ ಮಲಗಿ, ಇಟಾಲಿಯನ್‌ ಕಟ್ಲೆಟ್‌ ತಿಂದು, ಲಾಸ್‌ವೇಗಾಸ್‌ನ ಬೀದಿಗಳಲ್ಲಿ ತಿರುಗಾಡಿ, ಚೀನಾದ ಮೋಮೋ ತಿಂದು ಫೋಟೋ ಹಾಕಿಕೊಳ್ಳುತ್ತಾರೆ. ಭಾರತೀಯ ಹೆಲ್ದಿ ಫುಡ್‌ಗಳನ್ನು ಪ್ರಮೋಟ್‌ ಮಾಡುವವರು ಇಲ್ಲವೆಂದಲ್ಲ. ಆದರೆ ಕಡಿಮೆ. ನಮ್ಮ ಬಾಲಿವುಡ್‌ನ ಹೀರೋಯಿನ್, ಐಟಂ ಸಾಂಗ್‌ ಸುಂದರಿ ಕತ್ರಿನಾ ಕೈಫ್ ಈ ನಿಟ್ಟಿನಲ್ಲಿ ವಿಶಿಷ್ಟವಾಗಿರೋ ಒಂದು ಇನ್‌ಸ್ಟಗ್ರಾಂ ಫೋಟೋ ಹಾಗೂ ಸ್ಟೇಟಸ್‌ ಹಾಕಿದ್ದಾರೆ. ಅದರಲ್ಲಿ ಅವರು ಹೊಗಳಿರೋದು ನಮ್ಮ ಇಡ್ಲಿಯನ್ನು.

ಆರೋಗ್ಯಕರ ಜೀವನ ಇರೋದು ನಾವು ಹೇಗೆ ಸೇವಿಸ್ತೀವಿ ಅನ್ನೋದರ ಮೇಲೆ, ಏನೆಲ್ಲ ರಿಚ್‌ ಫುಡ್‌ ತಗೋತೀವಿ ಅಂತಲ್ಲ ಅಂತ ಕತ್ರಿನಾ ಕೈಫ್ ಅವರ ತಾಯಿ ಯಾವಾಗಲೂ ಹೇಳೋರಂತೆ. ಕತ್ರಿನಾ ಅದನ್ನು ಪಾಲಿಸ್ತಿದ್ದಾರೆ. ಅವರು ಹೆಚ್ಚು ತಿನ್ನೋಲ್ಲ. ಆದರೆ ಸೊಗಸಾದ ದಕ್ಷಿಣ ಭಾರತೀಯ ಇಡ್ಲಿ ಸಿಕ್ಕಿದ್ರೆ ಬಿಡೋಲ್ಲ. ತಾನು ಸೇವಿಸೋ ಇಡ್ಲಿ ಗಟ್ಟಿಯಾಗಿರಬಾರದು, ಮೃದುವಾಗಿ ಫ್ಲಫಿಯಾಗಿರಬೇಕು ಅನ್ನೋದು ಕತ್ರಿನಾ ಆಸೆ. ಇಡ್ಲಿ ಹಾಗೆ ಬರಬೇಕಾದರೆ ಆಕೆ ಇಡ್ಲಿ ಹಿಟ್ಟಿಗೆ ಸ್ವಲ್ಪ ಮೊಸರು ಸೇರಿಸ್ತಾರಂತೆ. ಹಿಂದಿನ ದಿನ ಮೊಸರು ಸೇರಿಸಿಟ್ಟ ಇಡ್ಲಿ ಹಿಟ್ಟು ಮರುದಿನ ಮುಂಜಾನೆಗೆ ಸೊಗಸಾಗಿ ಹುದುಗಿ, ಎರೆದಾಗ ಬಿಸಿಬಿಸಿ ಮೃದುವಾದ, ಫ್ಲಪಿ ಇಡ್ಲಿ ಸವಿಯಲು ಸಿದ್ಧವಾಗಿರುತ್ತೆ. ಜಾಸ್ತಿ ಉರಿಯಲ್ಲಿ ಬೇಯಿಸಬಾರದು. ಹದವಾದ ಉರಿಯಲ್ಲಿ ಬೇಯಿಸಬೇಕು ಎನ್ನುವುದು ಕೂಡ ಆಕೆಯ ಸೂತ್ರ.

 

ಇನ್ನು, ಇಡ್ಲಿ ಸೇವಿಸುವಾಗ, ಸೈಡ್ಸ್ ಅದ್ಭುತವಾಗಿರಬೇಕು. ಸಾಮಾನ್ಯವಾಗಿ ಕತ್ರಿನಾ ಮೂರು ಬಗೆಯ ಚಟ್ನಿಗಳನ್ನು ಇಡ್ಲಿ ಜತೆಗೆ ಸೇವಿಸುತ್ತಾರೆ. ಶುದ್ಧ ತೆಂಗಿನಕಾಯಿ ಚಟ್ನಿ, ಬಸಳೆ ಚಟ್ನಿ ಹಾಗೂ ಟೊಮ್ಯಾಟೋ- ಬೀಟ್‌ರೂಟ್‌ ಚಟ್ನಿ. ಇವಿಷ್ಟಿದ್ದರೆ ಈ ಜಗತ್ತಿನಲ್ಲಿ ಇನ್ಯಾವ ಅದ್ಭುತ ಫುಡ್‌ ಕೊಟ್ರೂ ಬೇಡ ಅಂದುಬಿಡ್ತೀನಿ ಅನ್ನುತ್ತಾರೆ. ಜತೆಗೆ, ಸಾಂಬಾರ್‌ ಅಥವಾ ರಸಂ ಇದ್ದರಂತೂ ಕೇಳುವುದೇ ಬೇಡ. ಆದರೆ ಇದು ಮೂಡಿಗೆ ತಕ್ಕಂತೆ ಮಾತ್ರ. ತೆಂಗಿನಕಾಯಿ ಚಟ್ನಿಯ ಮುಂದೆ ಇನ್ಯಾವುದೂ ಇಲ್ಲವಂತೆ.

 

ಇದೇನು ಟ್ರೆಂಡಾ? 1.81ಲಕ್ಷ ಡ್ರೆಸ್‌ ಅಂದ್ರೆ ಸುಮ್ನೆನಾ! 
 

ಸಾಮಾನ್ಯವಾಗಿ ರೈಸ್‌ ಫುಡ್‌ ಅಂದರೆ ನಟಿಯರು ಹೆದರುತ್ತಾರೆ. ಅದು ರಿಚ್‌ ಕಾರ್ಬೊಹೈಡ್ರೇಟ್‌ ಆಗಿರುವುದರಿಂದ, ತಾವು ದಪ್ಪಗಾಗಬಹುದು ಎಂಬ ಭಯ ಅವರಿಗೆ. ಆದರೆ ಕತ್ರಿನಾ ಅಂಥ ಭಯ ಇಟ್ಟುಕೊಳ್ಳಬೇಕಾಗಿಲ್ಲ ಅನ್ನುತ್ತಾರೆ. ಪ್ರತಿದಿನ ಅಲ್ಲದಿದ್ದರೂ ಎರಡು ದಿನಕ್ಕೊಮ್ಮೆ ಇಡ್ಲಿ ತಿನ್ನುವುದರಲ್ಲಿ ಯಾವ ಆತಂಕವೂ ಇಲ್ಲ ಅನ್ನುತ್ತಾರೆ. ಜತೆಗೆ ನಟಿಯರಿಗೆ ತೆಂಗಿನಕಾಯಿ ಐಟಂಗಳ ಬಗ್ಗೆಯೂ ಭಯ ಇರುತ್ತೆ. ಅದರಲ್ಲಿ ಕೊಲೆಸ್ಟ್ರಾಲ್‌ ಇರುತ್ತೆ ಎಂಬ ಆತಂಕ. ಆದರೆ ಇದು ಕೂಡ ತೆಂಗಿನಕಾಯಿ ಚಟ್ನಿ ಸೇವಿಸದಂತೆ ಕತ್ರಿನಾ ಅವರನ್ನು ತಡೆದಿಲ್ಲ ಎಂಬುದು ಕುತೂಹಲಕರ. ಅಕ್ಕಿ ಸೇವಿಸೋಕೆ ಹೆದರಬೇಡಿ, ಚೆನ್ನಾಗಿ ಸೇವಿಸಿ ಎಂದು ಕತ್ರಿನಾ ಅವರಿಗೆ ಮುಂಬಯಿಯ ಫಿಟ್‌ನೆಸ್‌ ಡಾಕ್ಟರ್ ಜೆವೆಲ್‌ ಗಮಾಡಿಯಾ ಎಂಬವರು ಹೇಳಿದ್ದಾರಂತೆ.

 

ಬೀಚ್‌ನಲ್ಲಿ ‘ಬ್ಲೂ’ ಬಿಕಿನಿ ಮೋಡಿ ಮಾಡಿದ  ಕತ್ರಿನಾ ಕೈಫ್ 

 

ಇದರ ಜೊತೆಗೆ ವರ್ಕೌಟ್‌ ವಿಚಾರಗಳನ್ನು ಕತ್ರಿನಾ ಜೋಡಿಸಿಲ್ಲ. ಇಡ್ಲಿಯನ್ನು ತಿನ್ನುವುದು ಬಹಳ ಆರೋಗ್ಯಕರ. ಆದರೆ ಅದನ್ನು ಅಕ್ಕಿ ಹಾಗೂ ಉದ್ದು ಜೊತೆಯಾಗಿ ಕಡೆದು ಮಾಡಿದ ಹಿಟ್ಟನಿಂದ ಮಾಡುತ್ತಾರೆ. ಉತ್ತರ ಭಾರತೀಯರಿಗೆ ಈ ಎರಡೂ ಸ್ವಲ್ಪ ದೂರದ ಐಟಂಗಳೇ. ಅವರು ಚಪಾತಿ, ಗೋಧಿ ಅಥವಾ ಜೋಳ ಪ್ರಿಫರ್‌ ಮಾಡುತ್ತಾರೆ. ಹಬೆಯಲ್ಲಿ ಬೇಯಿಸಿದ ಇಡ್ಲಿಯಲ್ಲಿ ನಮ್ಮ ಭಾರತೀಯ ಹವಾಮಾನಕ್ಕೆ ಹಾಗೂ ದೇಹಕ್ಕೆ ಅನುಗುಣವಾದ ಸಾಕಷ್ಟು ಆರೋಗ್ಯಕಾರಿ ಪೋಷಕಾಂಶಗಳು ಇರುತ್ತವೆ ಎಂಬುದನ್ನು ವೈದ್ಯರು ಹೇಳುತ್ತಾರೆ. ಇದರ ಜೊತೆಗೆ ವ್ಯಾಯಾಮವನ್ನೂ ಸೇರಿಸಿಕೊಂಡರೆ ಆರೋಗ್ಯಕರ ಜೀವನದ ಬಗ್ಗೆ ಬೇರೆ ಗ್ಯಾರಂಟಿ ಬೇಡ.

Follow Us:
Download App:
  • android
  • ios