Asianet Suvarna News Asianet Suvarna News

ಸಾಮಾನ್ಯನ ಮದುವೆಯಾಗಲು 9.5 ಕೋಟಿ ರಾಯಲ್ಟಿ ತ್ಯಜಿಸಿದ ರಾಜಕುಮಾರಿ!

* ಪ್ರೀತಿಗಾಗಿ ರಾಯಲ್ಟಿ ಬಿಟ್ಟ ರಾಜಕುಮಾರಿ
* ರಾಜಮನೆತನದ ಗೌರವ ಬೇಡ..ಪ್ರೀತಿಸಿದ  ಗೆಳೆಯ ಬೇಕು
* ಜಪಾನ್ ರಾಜಕುಮಾರಿಯ ಲವ್ ಸ್ಟೋರಿ

Japanese Princess Turns Down Rs 9.5 Crore Royal Pay Out So She Can Marry A Commoner mah
Author
Bengaluru, First Published Sep 28, 2021, 11:16 PM IST
  • Facebook
  • Twitter
  • Whatsapp

ಟೋಕಿಯೋ(ಸೆ. 28)  ಪ್ರೀತಿ ಮಧುರ, ತ್ಯಾಗ ಅಮರ..ಸೂಪರ್ ಹಿಟ್ ಮುಂಗಾರುಮಳೆಯ ಸಾಲುಗಳು.  ಜಪಾನ್ ದಿಂದ ಅಂಥದ್ದೇ ಒಂದು ಕತೆ ಬಂದಿದೆ. ಜಪಾನ್‌ನ(Japan) ರಾಜಕುಮಾರಿ ಮಕೊ ತನ್ನ ಸಹಪಾಠಿಯನ್ನು ಮದುವೆಯಾಗಲು ತನ್ನ  ರಾಜಮನೆತನದ ಸ್ಥಾನಮಾನವನ್ನು ಬಿಟ್ಟುಕೊಡುವುದಾಗಿ ಹೇಳಿದ್ದಾರೆ. ಸುಮಾರು  9.5 ಕೋಟಿ ಬಿಟ್ಟುಕೊಡಲು ಮುಂದಾಗಿದ್ದಾರೆ.

ಈ ಮದುವೆಗೆ ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಕೇಳಿ ಬಂದಿದ್ದರೂ ರಾಜಕುಮಾರಿ ಮಾತ್ರ ಹಿಂದೆ ಸರಿದಿಲ್ಲ.  ಗೆಳೆಯನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ. 
ಈಗ ಆ ಮದುವೆಗೆ(Marriage) ಒಪ್ಪಿಗೆ ಸಿಕ್ಕಂತಾಗಿದೆ ಎಂದೂ ವರದಿಯಾಗಿದೆ.

ಜಪಾನ್‌ನ ಅಂದಿನ ಚಕ್ರವರ್ತಿ ಅಕಿಹಿಟೊ ರವರ 29 ವರ್ಷದ ಮರಿ ಮೊಮ್ಮಗಳಾದ ಮಕೊ ಮತ್ತು ಆಕೆಯ ಕಾಲೇಜಿನ ಸಹಪಾಠಿಯಾಗಿದ್ದ ಕೆಯಿ ಕೊಮುರೊ 2017ರಲ್ಲಿ ತಾವು ಎಂಗೇಜ್‌ಮೆಂಟ್‌  ಮಾಡಿಕೊಂಡಿದ್ದೇವೆ ಎಂದಿದ್ದರು.  ಕೊಮುರೊ ಅವರ ತಾಯಿ ಮತ್ತು ಆಕೆಯ ಮಾಜಿ ಪ್ರಿಯತಮನ  ನಡುವಿನ ಹಣಕಾಸಿನ ವಿವಾದದ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿಕೊಂಡು ಬರಲಾಗಿತ್ತು.

ಸಲ್ಮಾನ್ ಖಾನ್ ಮದುವೆ ಕ್ಯಾನ್ಸಲ್ ಆದ ಕತೆ

ರಾಜಕುಮಾರಿ ಸಾಮಾನ್ಯ ವರ್ಗದ ಯುವಕನ ಮದುವೆಯಾಗಲು ಮುಂದಾಗಿರುವುದಕ್ಕೆ ಸ್ಥಾನ ಮಾನ ತ್ಯಜಿಸಬೇಕಾಗಿ ಬಂದಿದೆ. ಅದನ್ನು ರಾಜಕುಮಾರಿ ಸಹ ಒಪ್ಪಿಕೊಂಡಿದ್ದಾಳೆ. ಈಗ ಮದುವೆಗೆ ಒಪ್ಪಿಗೆ ದೊರೆತಿರುವುದರಿಂದ ಅಕ್ಬೋಬರ್‌ನಲ್ಲಿ ಮದುವೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.

ಜೋಡಿ ಈಗ ಅಮೆರಿಕಕ್ಕೆ ಹಾರಿದ್ದಾರೆ  ಎಂಬ ಮಾಹಿತಿಯೂ ಇದೆ. ಸಾರ್ವಜನಿಕ ವಿವಾದಗಳು ಮತ್ತು ಮದುವೆಯ ವಿಳಂಬದ  ಪರಿಹಾರಕ್ಕಾಗಿ ದೇಶದಿಂದ ಹೊರಗೆ ತೆರಳುವುದೇ ಉತ್ತಮ ಎಂದು ಭಾವಿಸಿದ್ದಾರೆ.

ಯುವರಾಜ ಆಕಿಶಿನೋ ಕಳೆದ ವರ್ಷ, ತಾನು ಮಗಳ ಮದುವೆಯನ್ನು ಬೆಂಬಲಿಸುತ್ತೇನೆ , ಆದರೆ  ಆಕೆ ಯಾವ  ರೀತಿಯಲ್ಲಾದರೂ ಜನರ ಪ್ರೀತಿ ಪಡೆದುಕೊಂಡರೆ  ಒಳ್ಳೆಯದು ಎಂದು ಹೇಳಿದ್ದಾರೆ. 

ರಾಜಕುಮಾರಿ ಮಾಕೋ ಬೇರೆಯೇ ದಾರಿ ಆರಿಸಿಕೊಂಡಿದ್ದಾರೆ. ಆದೇನೆಂದರೆ, ರಾಜಮನೆತನದ ಮದುವೆ ಪದ್ಧತಿ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳು ಇಲ್ಲದೆ ಮದುವೆಯಾಗಲು ನಿರ್ಧರಿಸಿದ್ದಾರೆ.  ರಾಜ ಕುಟುಂಬದ ಹೊರಗಿನವರನ್ನು ಮದುವೆಯಾಗುವ ರಾಜ ಕುಟುಂಬದ ಸ್ತ್ರೀಯರಿಗೆ ರಾಜಮನೆತನದಿಂದ ನೀಡಲಾಗುವ ರಾಯಲ್ಟಿ ನೀಡಲಾಗುವುದಿಲ್ಲ. ಹಾಗಾಗಿ ಬಳುವಳಿಯಾಗಿ ಬರುತ್ತಿದ್ದ ಎಲ್ಲ ಹಣವನ್ನು ತ್ಯಜಿಸಿ ಪ್ರೀತಿಗೆ ಜೈ ಎಂದಿದ್ದಾರೆ.

Follow Us:
Download App:
  • android
  • ios