ಫೇಸ್’ಬುಕ್’ಗೆ ಅಡಿಕ್ಷನ್ ಡಿಸಾರ್ಡರ್’ಗೆ ಒಳಗಾಗಿದೀರಾ? ಪರೀಕ್ಷಿಸಿಕೊಳ್ಳಿ.

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 23, Jul 2018, 12:26 PM IST
How To Recognize And Overcome Facebook Addiction disorder
Highlights

ಈಗಿನ ಜಮಾನದಲ್ಲಿ ಫೇಸ್’ಬುಕ್ ಬಳಸದವರೇ ಇಲ್ಲ ಎಂದರೆ ತಪ್ಪಾಗಲಾರದು. ಎಲ್ಲರ ಕೈಯಲ್ಲೂ ಮೊಬೈಲ್, ಎಲ್ಲರ ಕೈಯಲ್ಲೂ ಫೇಸ್’ಬುಕ್ ಇರುತ್ತೆ.  ಫೇಸ್’ಬುಕ್ ಬಳಕೆ ಎಷ್ಟು ಒಳ್ಳೆಯದೋ ಅಷ್ಟೇ ಆರೋಗ್ಯಕ್ಕೆ ಹಾನಿಕರ. ಅತಿಯಾದರೆ ಅಮೃತ್ವೂ ವಿಷವೆಂಬಂತೆ ಅತಿಯಾದ ಫೇಸ್’ಬುಕ್ ಬಳಕೆ ಮನಸ್ಸಿನ ಆರೋಗ್ಯವನ್ನು ಹಾಳು ಮಾಡಿ ಬಿಡುತ್ತದೆ. ಇದನ್ನು ಫೇಸ್’ಬುಕ್ ಅಡಿಕ್ಷನ್ ಡಿಸಾರ್ಡರ್ ಎನ್ನುತ್ತಾರೆ. 

ಬೆಂಗಳೂರು (ಜು. 23): ಫೇಸ್‌ಬುಕ್ ಅಡಿಕ್ಷನ್ ಡಿಸಾರ್ಡರ್ ಈ ಕಾಲದ ಹೊಸ ಕಾಯಿಲೆ. ಇದಕ್ಕೆ ಬಲಿ ಬೀಳುತ್ತಿರುವವರು ಲಕ್ಷಾಂತರ ಅಲ್ಲ, ಕೋಟ್ಯಾಂತರ ಜನ. ಅದರಲ್ಲೂ ಯುವ ಜನತೆಯದೇ ಮೇಲುಗೈ. ಈಗ ವಿಶ್ವದೆಲ್ಲೆಡೆ ಸುಮಾರು 220 ಕೋಟಿ ಜನ ಫೇಸ್‌ಬುಕ್ ಹಿಂಬಾಲಕರು.

ನಮ್ಮ ದೇಶದಲ್ಲಿ 2 ಕೋಟಿ 70 ಲಕ್ಷ ಮಂದಿ ಫೇಸ್‌ಬುಕ್ ಬಳಸುತ್ತಾರೆ. ಆಗೊಮ್ಮೆ  ಈಗೊಮ್ಮೆ ಫೇಸ್‌ಬುಕ್‌ಗೆ ಭೇಟಿ ಕೊಡುವವರೆಲ್ಲರಿಗೂ ಈ ಸಮಸ್ಯೆ ಇಲ್ಲ. ಆದರೆ ಅಮೆರಿಕಾದ ಮಾನಸಿಕ ತಜ್ಞರ ಸಂಘದ ವರದಿಯಂತೆ ಸುಮಾರು 3 ಕೋಟಿ 50 ಲಕ್ಷ ಜನ ಫೇಸ್‌ಬುಕ್ ಅಡಿಕ್ಷನ್ ಡಿಸಾರ್ಡರ್‌ಗೆ ತುತ್ತಾಗಿದ್ದಾರೆ. 

ಈ ಚಟ ಹತ್ತೋದು ಸುಲಭ: ಫೇಸ್‌ಬುಕ್ ಅಡಿಕ್ಷನ್ ಮಕ್ಕಳಿಂದ ವೃದ್ಧರವರೆಗೂ  ಯಾರಿಗೆ ಬೇಕಾದರೂ ಹತ್ತಬಹುದು. ಎಫ್‌ಬಿಯಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದರೆ ಕ್ಷಣಕ್ಕೊಮ್ಮೆ ಮನಸ್ಸು ಎಷ್ಟು ಜನ ಲೈಕ್ ಮಾಡಿದ್ದಾರೆ ಅಂತ ನೋಡಲು ಹವಣಿಸುತ್ತದೆ. ಎಷ್ಟು ಜನ ರೆಸ್ಪಾನ್ಸ್ ಮಾಡಿದ್ದಾರೆ ಅಂತ ತಿಳಿಯಲು ತುದಿಗಾಲಲ್ಲಿ ನಿಂತಿರುತ್ತೆ.

ಬೇರೆಯವರ ಪೋಸ್ಟ್‌ಗಳಿಗೆ ಕಮೆಂಟ್ ಹಾಕೋದು, ಅದಕ್ಕೆಂಥಾ  ರೆಸ್ಪಾನ್ಸ್ ಬರುತ್ತೆ ಅಂತ ನಿರೀಕ್ಷಿಸೋದು. ಯಾವುದೋ ವಿಷಯದ ಬಗ್ಗೆ ಪರ, ವಿರೋಧದ ಚರ್ಚೆ ಮಾಡೋದು. ಇನ್ಯಾರ ಜೊತೆಗೂ ಚಾಟ್ ಮಾಡೋದು.. ಎಫ್‌ಬಿ ಚಟ ಹತ್ತಿಕೊಳ್ಳಲು ಎಷ್ಟು ಹೊತ್ತು ಬೇಕು..

ಫೇಸ್‌ಬುಕ್ ಅಡಿಕ್ಷನ್ ನಿಮಗಿದೆಯಾ ಪರೀಕ್ಷಿಸಿ ಇಲ್ಲಿ ಆರು ಲಕ್ಷಣಗಳಿವೆ. ಇವುಗಳಲ್ಲಿ ಮೂರಕ್ಕಿಂತ ಹೆಚ್ಚು ಲಕ್ಷಣಗಳನ್ನು ನೀವು ಹೊಂದಿದ್ದಲ್ಲಿ ನಿಮಗೆ ಎಫ್‌ಬಿ ಅಡಿಕ್ಷನ್ ಡಿಸಾರ್ಡರ್ ಇದೆ ಎಂದರ್ಥ.

1.  ವ್ಯಕ್ತಿ ಫೇಸ್‌ಬುಕ್ ಬಳಸಲೇಬೇಕು ಎಂಬ ಅನಿವಾರ‌್ಯತೆ ಇರುತ್ತದೆ. ಬಳಸದಿದ್ದಲ್ಲಿ ಮಾನಸಿಕ ತುಮುಲ, ದುಗುಡ, ಉದ್ವೇಗಕ್ಕೆ ಒಳಗಾಗಿ ತಾಳ್ಮೆ ಕಳೆದುಕೊಳ್ಳುತ್ತೀರಿ. ಇಂಟರ್‌ನೆಟ್ ಸಮಸ್ಯೆಯಾಗಿ ಮುಖಪುಸ್ತಕವನ್ನು ಬಳಸದಂತಹ ಸಂದರ್ಭ ಬಂದಾಗ ಸ್ಥಿಮಿತ ಕಳೆದುಕೊಳ್ಳುವಂತಾಗುತ್ತೆ. ಒಬ್ಬರೇ ಮಾತನಾಡುವುದು, ಏಕಾಂಗಿಯಾಗಿ ಪರಿತಪಿಸುತ್ತೀರಿ.

2.  ದಿನವೊಂದರಲ್ಲಿ 6 ರಿಂದ 8 ಗಂಟೆಗಳಿಗಿಂತ ಜಾಸ್ತಿ ಮುಖ ಪುಸ್ತಕ ಬಳಸುತ್ತಿದ್ದಲ್ಲಿ ಖಂಡಿತವಾಗಿಯೂ ಆತ ಫೇಸ್‌ಬುಕ್ ಅಡಿಕ್ಷನ್ ಡಿಸಾರ್ಡರ್‌ನಿಂದ ಬಳಲುತ್ತಿದ್ದೀರಿ ಎಂದರ್ಥ.

3.  ನಿಮ್ಮ ಸ್ನೇಹಿತರ ಜೊತೆ, ಹೆತ್ತವರ ಜೊತೆ, ಆಪ್ತರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುತ್ತೀರಿ. ಬದಲಾಗಿ ಫೇಸ್‌ಬುಕ್‌ನಲ್ಲಿ  ಹೆಚ್ಚು ತಲ್ಲೀನರಾಗಿರುತ್ತೀರಿ. ಸ್ನೇಹಿತರ ಜೊತೆ ಕಾಫಿ ಕುಡಿಯುವುದರ ಬದಲು, ಮುಖಪುಸ್ತಕದಲ್ಲಿ ಚಾಟ್ ಮಾಡುವುದರಲ್ಲಿ ಹೆಚ್ಚು ಉಲ್ಲಸಿರಾಗಿರುತ್ತೀರಿ. ಹೆತ್ತವರ ಫೋನ್‌ಗಳಿಗೂ ಉತ್ತರ ನೀಡದೆ, ಮುಖಪುಸ್ತಕದ ಮುಖಾಂತರವೇ ಹೆತ್ತವರನ್ನು ಸಂಪರ್ಕಿಸಲು ಕೋರುತ್ತೀರಿ.

4.  ತನ್ನ ಪ್ರಿಯತಮೆ ಅಥವಾ ಪ್ರಿಯತಮನ ಜೊತೆ ಚಲನಚಿತ್ರ ನೋಡುವುದು, ಹೊರಗೆ ಊಟ ಮಾಡುವುದರ ಬದಲಾಗಿ ಮುಖಪುಸ್ತಕದಲ್ಲಿ ಸಂಭಾಷಣೆ ಮಾಡಲು ಇಚ್ಛಿಸುತ್ತೀರಿ. ತಂದೆ ತಾಯಂದಿರ ಜೊತೆ ಪಿಕ್‌ನಿಕ್‌ಗೆ ಹೋಗುವುದರ ಬದಲಾಗಿ ಮನೆಯೊಳಗೆ ಬಂಧಿಯಾಗಿ ಮುಖಪುಸ್ತಕದ ಸ್ನೇಹಿತರ ಜೊತೆ ಸಂಭಾಷಿಸಲು ಇಷ್ಟಪಡುತ್ತೀರಿ.

5.  ಮುಖ ಪುಸ್ತಕದ ಸ್ನೇಹಿತರಲ್ಲಿ ಹೆಚ್ಚು ಅಪರಿಚಿತ ಮಿತ್ರರೇ ಹೆಚ್ಚು ಇರುತ್ತಾರೆ. 10 ರಲ್ಲಿ 8 ಮಂದಿ ಅಪರಿಚಿತ ಮಿತ್ರರು ಅಥವಾ ನಕಲಿ ಮುಖಪುಸ್ತಕ ಸ್ನೇಹಿತರೇ ಅಗಿರುತ್ತಾರೆ.

6.  ಹೊಸ ವ್ಯಕ್ತಿಗಳನ್ನು ಬೇಟಿಯಾದಾಗ, ಫೇಸ್‌ಬುಕ್ ವಿಚಾರದ ಬಗ್ಗೆ ಮಾತನಾಡುತ್ತೀರಿ. ಅಪರಿಚಿತ ವ್ಯಕ್ತಿಗಳಿಗೆ ಸ್ನೇಹಿತರಾಗಲು ಕೋರಿಕೆ ಸಲ್ಲಿಸುತ್ತೀರಿ, ಅವರು ಮುಖ ಪುಸ್ತಕಕ್ಕೆ ಹಾಕಿದ ವಿಚಾರಗಳ ಬಗ್ಗೆ ಹೆಚ್ಚಿನ ಲೈಕ್‌ಗಳು ಬಂದಲ್ಲಿ ಅಥವಾ ಹೊಸ ಸ್ನೇಹಿತರ ಕೋರಿಕೆ ಬಂದಲ್ಲಿ ಮಾದಕ ವ್ಯಸನಿಗಳು ಅನುಭವಿಸುವಂಥ ವಿಚಿತ್ರ ಖುಷಿಯ ಅನುಭವವಾಗುತ್ತೆ.

ಇದರಿಂದ ಹೊರ ಬರುವುದು ಹೇಗೆ? 

ಎಫ್‌ಬಿ ಅಡಿಕ್ಷನ್ ಡಿಸಾರ್ಡರ್‌ಗೆಂದೇ ಚಿಕಿತ್ಸೆ ಇಲ್ಲ. ಆದರೆ ಇದರಿಂದ ಉದ್ಭವಿಸುವ ಉದ್ವೇಗ, ಖಿನ್ನತೆ ಮೊದಲಾದ ಸಮಸ್ಯೆಗಳಿಗೆ ಮನಃಶಾಸ್ತ್ರದಲ್ಲಿ  ಪರಿಹಾರ ಇದೆ. ಆಪ್ತ ಸಮಾಲೋಚನೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು. ಫೇಸ್‌ಬುಕ್ ನಿಮ್ಮ ಬದುಕಿನೊಳಗೆ ಪ್ರವೇಶ ಪಡೆಯುತ್ತದೆ ಅಂತ ಗೊತ್ತಾದಾಗ ಅದರಿಂದ ಹೊರಬರಲು ಪ್ರಯತ್ನ ನಡೆಸಿ. ಫೇಸ್ ಬುಕ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿ.

ಕ್ರಮೇಣ ಅದರಿಂದ ಹೊರಬನ್ನಿ. ಒಂಟಿಯಾಗಿರುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಪರಿಸರದ ಜೊತೆಗೆ, ಸಮಾಜದ ಜೊತೆಗೆ ಬೆರೆಯಲು ಪ್ರಯತ್ನಿಸಿ. ಎಲ್ಲಕಿಂತ ಮುಖ್ಯವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನಿಮಗೇ ಹೊಳೆಯುತ್ತದೆ. ಅದನ್ನು ಕಂಡುಕೊಳ್ಳಲು ಪ್ರಯತ್ನಿಸಿ. 

loader