Asianet Suvarna News Asianet Suvarna News

ಚಳಿಗಾಲದಲ್ಲಿ ತ್ವಚೆ ಸೌಂದರ್ಯ ಕಾಪಾಡಿಕೊಳ್ಳೋದು ಹೇಗೆ?

ಅಬ್ಬಾ ಎಂಥಾ ಚಳಿ ಅನ್ನೋ ಸೀಸನ್‌  ಹೋಯ್ತು, ನಸು ಬೆಚ್ಚನೆಯ ಸೀಸನ್‌ ಆನ್‌ ದಿ ವೇ ಇದೆ. ಇದು ನಿಮ್ಮ ಸ್ಕಿನ್‌ಅನ್ನು ಮುಟ್ಟಿ ನೋಡ್ಕೊಳ್ಳೋ ಟೈಮು. ಅಲ್ಲಲ್ಲಿ ನವೆ, ಒಣ ಒಣ ಅನಿಸೋ ಚರ್ಮಕ್ಕೆ ಬೆಸ್ಟ್‌ ಆರೈಕೆ ಹೇಗೆ ಮಾಡ್ಬಹುದು?

How to protect your skin in winter
Author
Bengaluru, First Published Jan 10, 2020, 7:08 PM IST

ಚಳಿಗಾಲ ಶುರುವಾದಾಗ ಗಮನಿಸಿ, ಚರ್ಮದಲ್ಲಿ ಬದಲಾವಣೆ ಗೋಚರಿಸುತ್ತೆ. ಒಂದಿಷ್ಟು ದಿನಗಳಾದ ಮೇಲೆ ಚರ್ಮ ಆ ಸೀಸನ್‌ಗೆ ಸೆಟ್‌ ಆಗುತ್ತೆ. ಈಗ ನಿಧಾನಕ್ಕೆ ಚಳಿಗಾಲವೂ ಬಾಯ್‌ ಬಾಯ್‌ ಮಾಡುತ್ತಿದೆ. ವಾತಾವರಣ ನಿಧಾನಕ್ಕೆ ಬೆಚ್ಚಗಾಗುತ್ತಿದೆ. ಇಂಥ ಟೈಮ್‌ನಲ್ಲಿ ಸ್ಕಿನ್‌ ಸರಿಯಾಯ್ತು ಅಂತ ನೆಮ್ಮದಿಯಾಗಿರೋ ಹಾಗಿಲ್ಲ. ಚರ್ಮದಲ್ಲಿ ಒಂದು ಬಗೆಯ ನವೆ ಶುರುವಾಗುತ್ತೆ. ತುರಿಕೆ ಬಂದರೂ ಪಬ್ಲಿಕ್‌ನಲ್ಲಿ ತುರಿಸಲಾಗದೇ ಒದ್ದಾಡುತ್ತೀವಿ. ಇಲ್ಲೀವರೆಗೂ ಒಂದು ಬಗೆಯಲ್ಲಿದ್ದ ಚರ್ಮ ಇದ್ದಕ್ಕಿದ್ದ ಹಾಗೆ ಡ್ರೈ ಅಂತ ಅನಿಸೋಕೆ ಶುರುವಾಗುತ್ತೆ. ಬಿಸಲಲ್ಲಿ ನಿಂತರೆ ಅಲ್ಲಲ್ಲಿ ಪಸೆ ಕಳೆದುಕೊಂಡು ಬಿಳಿ ಬಿಳಿ..ಇದ್ಯಾಕೆ ಹೀಗೆ ಅಂತ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇದು ಸೀಸನಲ್‌ ಬದಲಾವಣೆಗೆ ಚರ್ಮ ರಿಯಾಕ್ಟ್ ಮಾಡುವ ಬಗೆ ಅಷ್ಟೇ. ಇದನ್ನು ಮನೆಯಲ್ಲಿ ಸರಳವಾಗಿ ನಿವಾರಿಸಬಹುದು.

1. ಕೊಬ್ಬರಿ ಎಣ್ಣೆ ದಿ ಬೆಸ್ಟ್‌
ನಮ್ಮ ಹಿತ್ತಲ ಮದ್ದು ಇದು. ನಾವು ತಲೆಗೆ ಹಚ್ಚಿಕೊಳ್ಳುವ ಎಣ್ಣೆಗಿಂತಲೂ ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆಗ ಸತ್ವ ಹೆಚ್ಚು. ಸಾಧ್ಯವಾದರೆ ಮಿಲ್‌ ಮಾಡಿದ ಕೊಬ್ಬರಿ ಎಣ್ಣೆ ಬಳಸಿ. ರಾತ್ರಿ ಕೈ ಕಾಲು ತೊಳೆದು ಕೈ ಕಾಲು, ಮುಖಕ್ಕೆಲ್ಲ ಕೊಬ್ಬರಿ ಎಣ್ಣೆ ಪಸೆ ಮಾಡಿ ಮಲಗಿ. ಬೆಳಗ್ಗೆ ಏಳುವಾಗ ನಿಮ್ಮ ಚರ್ಮದಲ್ಲಿರುವ ಆದ್ರ್ರತೆ ನಿಮಗೇ ಅಚ್ಚರಿ ತರಿಸುತ್ತೆ. ಟೈಮ್‌ ಇದ್ದಾಗ ಮೈ ಕೈಗೆಲ್ಲ ಕೊಬ್ಬರಿ ಎಣ್ಣೆ ಮಸಾಜ್‌ ಮಾಡೋದೂ ಬೆಸ್ಟ್‌. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿ ಮಸಾಜ್‌ ಮಾಡಿದರೆ ಚರ್ಮ ಮಾತ್ರವಲ್ಲ, ಮೈ ಕೈ ನೋವೂ ಮಾಯವಾಗುತ್ತೆ. ಮೈ ಮನಸ್ಸು ಫ್ರೆಶ್‌ ಆಗುತ್ತೆ.

ಹೀಗೆ ವರ್ಕ್ ಔಟ್ ಮಾಡಿ

 2. ತೆಂಗಿನ ಹಾಲು
ಇದಕ್ಕೆ ವರ್ಜಿನ್‌ ಆಯಿಲ್‌ ಅಂತಾರೆ. ತುಸು ದುಬಾರಿ. ಆದರೆ  ಇದರಲ್ಲಿರುವ ಗುಣಕ್ಕೆ ಹೋಲಿಸಿದರೆ ಈ ಬೆಲೆ ಅಂಥಾ ದುಬಾರಿ ಅನಿಸಲ್ಲ. ಕಷ್ಟ ಅನಿಸಿದರೆ ಒಂಚೂರು ಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆದು ಮುಖಕ್ಕೆ ಹಚ್ಚಿ. ಇದಕ್ಕೆ ಜೇನುತುಪ್ಪ ಬೆರೆಸಿದರೆ ಇನ್ನೂ ಉತ್ತಮ. ಮುಖದ ಶುಷ್ಕತೆ ನಿವಾರಣೆಯಾಗಿ ಮುಖ ಫಳ ಫಳ ಹೊಳೆಯೋದು ನಿಮಗೇ ಅಚ್ಚರಿ ತರಿಸಬಹುದು. ಇದನ್ನು ಮೈಯಲ್ಲಿ ನವೆಯಾಗುವ ಜಾಗಕ್ಕೂ ಹಚ್ಚಬಹುದು.

 3. ಅಲೊವೆರಾ
ಇದು ಕೇವಲ ನಿಮ್ಮ ಡ್ರೈ ಸ್ಕಿನ್‌ ನಿವಾರಿಸೋದು ಮಾತ್ರ ಅಲ್ಲ, ಮುಖದಲ್ಲಿರುವ ಕಲೆಗಳನ್ನು ಕಳೆದುಹಾಕುತ್ತೆ. ಕೈ ಕಾಲಲ್ಲಿ ಗಾಯವಾಗಿದ್ದರೆ ಅದಕ್ಕೆ ಅಲೊವೆರಾ ಹಚ್ಚಿನೋಡಿ. ನಿಮ್ಮ ಆಯಿಂಟ್‌ಮೆಂಟ್‌ಗಿಂತ ಬೇಗ ವಾಸಿಯಾಗುತ್ತೆ. ಅದರಲ್ಲೂ ಬೆಂಕಿಗೆ ಕೈ ಸುಟ್ಟಾಗ ಇದು ರಾಮಬಾಣ. ಈ ಅಲೆವೆರಾ ತಲೆಯ ಡ್ರೈನೆಸ್‌ಅನ್ನೂ ನಿವಾರಿಸುತ್ತೆ. ಮುಖಕ್ಕೆ ಹೊಳಪು ನೀಡುತ್ತೆ. ಸಾಧ್ಯ ಆದ್ರೆ ಖಾಲಿಹೊಟ್ಟೆಗೆ ಅಲೊವೆರಾದ ತಿರುಳನ್ನು ಕುಡಿಯಿರಿ. ಹೊಟ್ಟೆ ತಂಪಾಗುತ್ತೆ.

 4. ಕಡಲೆ ಹಿಟ್ಟು
ಹೆಚ್ಚಿನ ಸೋಪುಗಳು ದೇಹವನ್ನು ಡ್ರೈ ಮಾಡುತ್ತವೆ. ಮುಖದ ಕಾಂತಿ ಕುಂದುವ ಹಾಗೆ ಮಾಡುತ್ತವೆ. ಸ್ವಲ್ಪ ದಿನ ಸೋಪ್‌ ಬಳಸಬೇಡಿ. ಕಡಲೆ ಹಿಟ್ಟು ಬಳಸಿ. ಸ್ನಾನ ಬಳಿಕ ನೋಡಿದರೆ ನಿಮಗೆ ಚರ್ಮ ಸಾಫ್ಟ್‌ ಆಗಿರೋದು ಅನುಭವಕ್ಕೆ ಬರುತ್ತೆ. ನಿತ್ಯ ಮುಖವನ್ನು  ಕಡಲೆಹಿಟ್ಟಿನಲ್ಲೇ ತೊಳೆಯೋದು ಬೆಸ್ಟ್‌.

ಯಂಗ್ ಆಗಿ ಕಾಣಲು ಹೀಗ್ ಮಾಡಿ

5. ಉಗುರು ಬೆಚ್ಚಗಿನ ನೀರಲ್ಲಿ ಸ್ನಾನಳಿ ಇನ್ನೂ ಸ್ವಲ್ಪ ಇರುವ ಕಾರಣ ತಣ್ಣೀರಲ್ಲಿ ಸ್ನಾನ ಮಾಡೋದು ಕಷ್ಟ. ಹಾಗಾಗಿ ನಿಮ್ಮ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ. ನೀರಿನ ತಾಪ ಹೆಚ್ಚಾದಷ್ಟೂ ನಿಮ್ಮ ಚರ್ಮದ ಡ್ರೈನೆಸ್‌ ಹೆಚ್ಚಾಗುತ್ತಾ ಹೋಗುತ್ತೆ. ತಣ್ಣೀರು ನಿಮ್ಮ ದೇಹದ ಜಿಡ್ಡಿನಂಶವನ್ನು ಹಾಗೇ ಉಳಿಸಿಕೊಂಡು ಕೊಳೆ ತೊಳೆಯುತ್ತೆ. ಹದ ಬಿಸಿ ನೀರಿಗೆ ಸ್ವಲ್ಪ ರೋಸ್‌ ವಾಟರ್‌ ಹಾಕಿದ್ರೆ ಹಿತವಾದ ಸ್ನಾನ. ಮೈಗೂ ಹಾಯೆನಿಸುವ ಫೀಲ್‌.


 

Follow Us:
Download App:
  • android
  • ios