Asianet Suvarna News Asianet Suvarna News

ಮಕ್ಕಳ ಲಂಚ್ ಬಾಕ್ಸ್‌ಗೇನಿಡೋದು?

ಮಕ್ಕಳ ಬಾಕ್ಸ್ ರೆಡಿ ಮಾಡುವುದು ಎಂದರೆ ಅಮ್ಮನಿಗೆ ಎಲ್ಲಿಲ್ಲದ ತಲೆಬಿಸಿ. ಮಕ್ಕಳಿಗೆ ಖುಷಿ ನೀಡುವಂಥ ಆಹಾರ ನೀಡುವುದೆಂದರೆ ತಾಯಂದಿರಿಗೊಂದು ದೊಡ್ಡ ಚಾಲೆಂಜ್. ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್... 

How lunch can be kept attractive for kids
Author
Bengaluru, First Published Jul 26, 2018, 2:15 PM IST

ಮಕ್ಕಳ ಬಾಕ್ಸ್ ರೆಡಿ ಮಾಡುವುದು ಎಂದರೆ ಅಮ್ಮನಿಗೆ ಎಲ್ಲಿಲ್ಲದ ತಲೆಬಿಸಿ. ಮಕ್ಕಳಿಗೆ ಖುಷಿ ನೀಡುವಂಥ ಆಹಾರ ನೀಡುವುದೆಂದರೆ ತಾಯಂದಿರಿಗೊಂದು ದೊಡ್ಡ ಚಾಲೆಂಜ್. ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್... 

- ಮಕ್ಕಳಿಗೆ ಖುಷಿ ಎನಿಸುವಂಥ ಲಂಚ್ ಬಾಕ್ಸ್ ಕೊಂಡು ಕೊಳ್ಳಿ. ಅದನ್ನು ನೋಡಿಯೇ ಮಕ್ಕಳು ತಿನ್ನಲು ಮನಸ್ಸು ಮಾಡುವಂತಿರಬೇಕು. ಆದರಿದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಲ್ಲ ಪ್ಲಾಸ್ಟಿಕ್‌ನದ್ದಾಗಿರಬಾರದು. 
- ಬಾಕ್ಸ್‌ನಲ್ಲಿ ಬಾಳೆಹಣ್ಣು ಮತ್ತು ಖರ್ಜೂರ ಹಾಕಿ ನೀಡಿ ಇದು ಮಕ್ಕಳ ಆರೋಗ್ಯಕ್ಕೂ ಉತ್ತಮ. ಮಕ್ಕಳಿಗೆ ಇಷ್ಟವಾಗದ ಹಣ್ಣುಗಳಿದ್ದರೆ, ವಿಧ ವಿಧವಾದ ಆಕಾರದಲ್ಲಿ ಕಟ್ ಮಾಡಿಟ್ಟು ನೋಡಿ. 
- ರಾತ್ರಿಯೇ ಬೆಳಗ್ಗೆ ಮಾಡಬೇಕಾದ ಲಂಚ್ ತಯಾರಿಟ್ಟುಕೊಳ್ಳಿ. ಸ್ಯಾಂಡ್‌ವಿಚ್ ಫಿಲ್ಲಿಂಗ್, ರೋಲ್ ಫಿಲ್ಲಿಂಗ್ ಮಾಡಿ ಫ್ರಿಡ್ಜ್‌ನಲ್ಲಿಡಿ. ಇದರಿಂದ ಬೆಳಗ್ಗೆ ಬೇಗ ಬೇಗನೆ ಅಡುಗೆ ತಯಾರಿ ಮಾಡಬಹುದು. 
- ಮಕ್ಕಳಿಗೆ ಆಹಾರದ ಜೊತೆಗೆ ಅವರಿಗೆ ಇಷ್ಟವಾದ ಜ್ಯೂಸು, ಸ್ಮೂದಿ ಮಾಡಿ ಬಾಟಲ್‌‌ನಲ್ಲಿ ಹಾಕಿ ನೀಡಿ. 
- ತರಕಾರಿಗಳನ್ನು ಕಿಚನ್ ಪೇಪರ್‌ನಲ್ಲಿ ಸುತ್ತಿಡಿ. 
- ನಿಮ್ಮ ಮಗುವಿನ ಮೇಲೆ ಪ್ರೀತಿ ಇನ್ನು ಹೆಚ್ಚಾಗಲು ಟಿಫಿನ್‌ನಲ್ಲಿ ನೋಟ್, ಸ್ಟಿಕ್ಕರ್ ಅಥವಾ ಒಂದು ಸಣ್ಣ ಚಾಕಲೇಟ್ ಇಟ್ಟರೆ ಮಕ್ಕಳು ಖುಷಿಯಾಗಿ ಅದನ್ನು ಸೇವಿಸುತ್ತಾರೆ. 

ಮಹಿಳೆ: ಮತ್ತಷ್ಟು ಲೇಖನಗಳಿಗೆ ಇಲ್ಲಿ ಓದಿ

ಸಹೋದ್ಯೋಗಿಯಿಂದ ಕಿರಿ ಕಿರಿ ತಪ್ಪಿಸಿಕೊಳ್ಳಲು ಇಲ್ಲಿವೆ ಟಿಪ್ಸ್

ಕಾಲುಂಗರ ಧರಿಸುವುದರ ಮಹತ್ವವೇನು?

ಆದರೇನಂತೆ ನಡುವಯಸ್ಸು, ಮನಸ್ಸು ಮುದುಡದಿರಲಿ

ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ

ಶಬರಿಮಲೆಗೆ ಎಲ್ಲ ಮಹಿಳೆಯರಿಗೂ ಪ್ರವೇಶ
 

Follow Us:
Download App:
  • android
  • ios