Asianet Suvarna News Asianet Suvarna News

ಮೈಗ್ರೇನ್‌ಗೆ ರಿಲೀಫ್ ನೀಡುತ್ತೆ ಕಾಫಿ!

ಸಣ್ಣಗೆ ತೆಲೆ ನೋಯುತ್ತಿರುತ್ತೆ. ಮನಸ್ಸು ಬೇಜಾರಲ್ಲಿರುತ್ತೆ. ಆಗ ಮನಸ್ಸು ಬಯಸೋದು ಒಂದು ಕಪ್ ಕಾಫಿ. ಅದನ್ನು ಕುಡಿದಾದ ಮೇಲೆ ಒಮ್ಮೆ ಹಾಯೆನಿಸುವ ಅನುಭೂತಿ. ಇದಕ್ಕೆ ಕಾರಣ ಕಾಫಿಯಲ್ಲಿರುವ  ಕೆಫೇನ್. ಇದು ಆರೋಗ್ಯಕ್ಕೆ ಒಳ್ಳೆಯದಾ, ಕಟ್ಟದಾ......

Health Benefits of caffeine
Author
Bangalore, First Published Jun 10, 2019, 1:26 PM IST

 

ಬೆಳ್ಳಂಬೆಳಗ್ಗೆ ಎದ್ದು ಒಂದು ಕಪ್ ಕಾಫಿ ಕುಡಿಯಬೇಕು. ನಿದ್ದೆ, ಜಡ, ಆಲಸ್ಯ ಎಲ್ಲ ಸದ್ದಿಲ್ಲದೇ ಬೈ ಮಾಡಿ ಹೊರಟುಹೋಗುತ್ತವೆ. ಫ್ರೆಶ್ ಆಗಿ ದಿನದ ಆರಂಭವಾಗುತ್ತದೆ. ಆದರೆ ಕಾಫಿ ಅಷ್ಟು ಫ್ರೆಶ್ ಫೀಲ್ ಕೊಡೋದಕ್ಕೆ ಕಾರಣ ಏನು ಗೊತ್ತಾ, ಅದರಲ್ಲಿರುವ ಕೆಫೇನ್. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲ್ವಾ ಅನ್ನುವ ಪ್ರಶ್ನೆ. ಒಂದು ಲಿಮಿಟ್‌ಗಿಂತ ಹೆಚ್ಚಿನ ಪ್ರಮಾಣದ ಕಾಫಿ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಿದೆ. ಇಷ್ಟಾಗಿ ಒಂದೊಳ್ಳೆ ವಿಷ್ಯ- ಒಬ್ಬ ವ್ಯಕ್ತಿ ದಿನವೊಂದಕ್ಕೆ 500 ಎಂಜಿಯಷ್ಟು ಕೆಫೇನ್ನ್ನು ಯಾವುದೇ ತೊಂದರೆ ಇಲ್ಲದೆ ಸೇವಿಸಬಹುದು.

ಕಾಫಿಯಲ್ಲಿ ಎಷ್ಟು ಪ್ರಮಾಣದ ಕೆಫಿನ್ ಇದೆ

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

ಒಂದು ಕಪ್ ಕಾಫಿನಲ್ಲಿ ಸುಮಾರು 80 ರಿಂದ 175 ಮಿಲಿ ಗ್ರಾಮ್‌ನಷ್ಟು ಕೆಫೇನ್ ಇರುತ್ತದೆ. ಕಾಫಿಯ ಗುಣಮಟ್ಟ ಮತ್ತು ಕಾಫಿ ಮಾಡುವ ವಿಧಾನ, ಹಾಲಿನ ಬಳಕೆ, ಕಾಫಿಯನ್ನು ಮಾಡಲು ಬಳಸಿದ ಬೀಜಗಳ ಗುಣಮಟ್ಟವನ್ನು ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿ ದಿನವೊಂದಕ್ಕೆ 5   ರಿಂದ 10 ಕಪ್ ಕಾಫಿ ಅಥವಾ ಇನ್ನಾವುದೇ ಕೆಫೇನ್‌ಯುಕ್ತ ಪಾನೀಯ ಸೇವನೆ ಮಾಡಬಹುದು.
ಅಮೇರಿಕಾದ ಆಹಾರ ಮತ್ತು ಔಷಧಿ ಇಲಾಖೆ ದಿನವೊಂದಕ್ಕೆ 100ಗ್ರಾಂ ಕೆಫೇನ್ ಮಾರಾಣಾಂತಿಕ ಎಂದು ಶಿಫಾರಸು ಮಾಡಿದೆ. 100 ಗ್ರಾಂ ಎಂದರೆ ಸುಮಾರು 80 ರಿಂದ 100 ಕಪ್ಗಳಷ್ಟು ಕಾಫಿ ದಿನವೊಂದಕ್ಕೆ ಸೇವನೆ ಮಾರಣಾಂತಿಕ ಎಂದರ್ಥ. ಆದರೆ ಅಷ್ಟು ಕಾಫಿ ಅಥವಾ ಚಹಾ ಸೇವನೆ ದಿನವೊಂದಕ್ಕೆ ಮಾಡುವುದು ಕಷ್ಟ. ಆದರೆ ಗರ್ಭಿಣಿ ದಿನದಲ್ಲಿ 200 ರಿಂದ 300 ಮಿಲಿ ಗ್ರಾಂ
ಅಂದರೆ 2ರಿಂದ 3 ಕಪ್‌ಗಿಂತ ಜಾಸ್ತಿ ಕಾಫಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕರ ಎಂದು ವಿಶ್ವ ಸಂಸ್ಥೆಯ ವೈಜ್ಞಾನಿಕ ವರದಿ ತಿಳಿಸಿದೆ. ಜೊತೆಗೆ ಟೀ, ಕೋಲಾ ಪಾನೀಯಗಳಲ್ಲೂ ಕೆಫೇನ್ ಹೇರಳವಾಗಿರುವ ಕಾರಣ ಇವನ್ನು ಹೆಚ್ಚೆಚ್ಚು ಕುಡಿಯುವುದೂ ಹಾನಿಕರ.

ಕೆಫೇನ್‌ನಿಂದ ಹೇಗೆ ಆರೋಗ್ಯಕ್ಕೆ ಹಾನಿಯಾಗುತ್ತೆ

ಕಾಫಿ ಮಾಡುತ್ತೆ ಕೂದಲನ್ನು ಸ್ಟ್ರಾಂಗ್...

ಕೇಂದ್ರೀಯ ನರಮಂಡಲದಲ್ಲಿರುವ ರಾಸಾಯನಿಕ ಅಡೆನೋಸಿನ್ ಎಂಬ ವಸ್ತು ನಮ್ಮನ್ನು ಹೆಚ್ಚು ಮತ್ತು ಬರುವಂತೆ ಮಾಡುತ್ತದೆ. ಈ ಕೇಫೇನ್ ಅಡೆನೋಸಿನ್‌ನ ಕಾರ‌್ಯಕ್ಷಮತೆಗೆ ಅಡ್ಡಿಪಡಿಸಿ, ನರಮಂಡಲ ಮತ್ತಷ್ಟು ಕ್ರೀಯಾಶೀಲವಾಗಿರುವಂತೆ ಮಾಡುತ್ತದೆ. ಆದರೆ ಈ ಕೆಲಸ ತಾತ್ಕಾಲಿಕವಾಗಿದ್ದು ಕೆಲವೊಂದು ಗಂಟೆಗಳ ಕಾಲ ಮಾತ್ರ ಇರುತ್ತದೆ. ಈ ಕಾರಣದಿಂದಲೇ ನಮಗೆ ಆಯಾಸವಾಗಿ, ನಿದ್ರೆ ಬಂದಾಗ ಅಥವಾ ಮನಸ್ಸು ಉದಾಸೀನತೆಯಿಂದ ಅಥವಾ ಖಿನ್ನತೆ ಉಂಟಾದಾಗ ಕೆಫೇನ್‌ಯುಕ್ತ ಪಾನೀಯ ಸೇವಿಸಲು ಮನಸ್ಸು ಬಯಸುತ್ತದೆ. ಅಲ್ಲದೆ ಕೇಂದ್ರಿಯ ನರಮಂಡಲ ಹೊರತಾಗಿ, ಸ್ವಯಂ ನಿಯಂತ್ರಿತ ನರಮಂಡಲದ ಮೇಲೂ ಪರಿಣಾಮ ಬೀರಿ ವ್ಯಕ್ತಿ ಉಲ್ಲಸಿತರಾಗುವಂತೆ ಮಾಡುತ್ತದೆ.

ಹೆಚ್ಚಾಗುವ ಎದೆಬಡಿತ, ವಾಂತಿ, ವಾಕರಿಕೆ, ಅತಿಯಾದ ಮೂತ್ರ, ಉದ್ವೇಗ, ಒತ್ತಡ, ನಡುಕ, ನಿದ್ರಾಹೀನತೆ ಖಿನ್ನತೆ ಮತ್ತು ಚಡಪಡಿಕೆ ಇತ್ಯಾದಿ ಸಮಸ್ಯೆಗಳಾಗಬಹುದು. ಕೆಫೇನ್
ರಾಸಾಯನಿಕ ತನ್ನ ಜೊತೆ ನೀರನ್ನೂ ಸೆಳೆಯುವುದರಿಂದ ಅತಿಯಾದ ಮೂತ್ರ ಸೋರುವಂತೆ ಮಾಡಿ ದೇಹಕ್ಕೆ ನಿರ್ಜಲೀಕರಣವಾಗುವಂತೆ ಮಾಡುತ್ತದೆ. ಕಾಫಿ ಹೆಚ್ಚು ಕುಡಿದಾಗ ನೀರೂ ಹೆಚ್ಚು ಕುಡೀಬೇಕು. ಅತಿಯಾಗಿ ಕೆಫೇನ್‌ಯುಕ್ತ ಪಾನೀಯಗಳಾದ ಕೋಲಾ, ಎನರ್ಜಿ ಡ್ರಿಂಕ್ ಇತ್ಯಾದಿ ಸೇವಿಸಿ ಅತಿಯಾದ ದೈಹಿಕ ಚಟುವಟಿಕೆ ಮಾಡಿ ಕಡಮೆ ನೀರು ಸೇವಿಸಿದಲ್ಲಿ ನಿರ್ಜಲೀಕರಣ ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕೆ ಬೇಸಗೆಯಲ್ಲಿ ಅತಿಯಾದ ಕೆಫೇನ್‌ಯುಕ್ತ ಸೇವನೆ ಒಳ್ಳೆಯದಲ್ಲ. ಒಂದು ಕ್ಷಣ ತಾತ್ಕಾಲಿಕವಾಗಿ ಬಾಯಾರಿಕೆ ನೀಗಿಸಿದರು ದೇಹದಲ್ಲಿನ
ನೀರನ್ನು ಇಂಗಿಸಿ, ಮತ್ತಷ್ಟು ಬಾಯಾರಿಕೆಯಾಗುವಂತೆ ಮಾಡುವ ತಾಕತ್ತು ಕೆಫೇನ್‌ಗೆ ಇದೆ. 

Follow Us:
Download App:
  • android
  • ios