ಗದಗ(ಫೆ. 01)  ಒಂದೇ ಜಾತಿಯ, ಒಂದೇ ವೃತ್ತಿಯ, ಶೈಕ್ಷಣಿಕ ಅರ್ಹತೆ ಆಧಾರ ಹೀಗೆ ಹೇಗೆ ಬೇಕೋ ಹಾಗೆ ಹುಡುಕುವ ಸಾಧ್ಯತೆಗಳು ತೆರೆದುಕೊಂಡಿವೆ.  ಇದೆಲ್ಲವನ್ನು ಮೀರಿದ ಒಂದು ಸ್ಟೋರಿ ನಿಮಗೆ  ಹೇಳುತ್ತೇವೆ ಕೇಳಿ.

ರಸ್ತೆ ಸರಿ ಇಲ್ಲ, ನೀರು ಬರ್ತಿಲ್ಲ ಎಂದು ಗ್ರಾಮ ಪಂಚಾಯಿತಿಗೋ ಅಥವಾ ಸಂಬಂಧಿಸಿದ ಅಧಿಕಾರಿಗೋ ಅರ್ಜಿ ಹಾಕುವುದು ಒಂದು ಪ್ರಕ್ರಿಯೆ. ಆದರೆ ಇಲ್ಲೊಬ್ಬ ಭೂಪ ಮದುವೆಯಾಗಲು ಕನ್ಯೆ ಹುಡುಕಿಕೊಡಿ ಎಂದು ಗ್ರಾಮ ಪಂಚಾಯಿತಿ ಮೊರೆ ಹೋಗಿದ್ದಾರೆ!

ಮದುವೆ ದಿನವೆ ವಧು-ವರರ ತಂದೆ-ತಾಯಿ ಜೊತೆಯಾಗಿ ಎಸ್ಕೇಪ್

ಹೌದು, ಗದಗ ಜಿಲ್ಲೆಯ ನರೆಗಲ್ಲಗ್ರಾಮದ 63 ವರ್ಷದ ವ್ಯಕ್ತಿಯೊಬ್ಬರು ಕನ್ಯೆ ಹುಡುಕಿ ಮದುವೆ ಮಾಡಿಸುವಂತೆ ಗ್ರಾ.ಪಂ. ಪಿಡಿಒ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ದ್ಯಾಮಣ್ಣ ಚನ್ನಬಸಪ್ಪ ಕಮ್ಮಾರ ಎಂಬುವರು ಗ್ರಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಅರ್ಜಿ ಬರೆದು ಹೆಣ್ಣು ಹುಡುಕಿಕೊಡಿ ಎಂದು ಕೇಳಿಕೊಂಡಿದ್ದಾರೆ.  ದ್ಯಾಮಣ್ಣ ಸದ್ಯ ಗ್ರಾಮದಲ್ಲಿ ದ್ಯಾಮವ್ವನ ಗುಡಿ ಪೂಜಾರಿಯಾಗಿ ಕೆಲಸ ಮಾಡಿಕೊಂಡು ಬರ್ತಿದ್ದಾರೆ.

'ಮದುವೆ ಆಗಲು ಎಷ್ಟೇ ಹುಡುಕಾಡಿದರೂ ಕನ್ಯೆ ಸಿಗುತ್ತಿಲ್ಲ. ನನಗೆ ಅಡುಗೆ ಮಾಡಲು ಯಾರೂ ಇಲ್ಲದ ಕಾರಣ ಮದುವೆ ಆಗುವ ಆಸೆ ಆಗಿದ್ದು, ನನಗೊಂದು ಬೇಗನೆ ಕನ್ಯೆ ಹುಡುಕಿ ಕೊಡಿ ಎಂದು ಅರ್ಜಿಯಲ್ಲಿ ಬರೆದಿದ್ದಾರೆ.  ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒಗೆ ಸಲ್ಲಿಸಿದ ಅರ್ಜಿ ಸ್ವೀಕೃತಿ ಸಹಪಡೆದುಕೊಂಡಿದ್ದು ಈ ವಿಚಾರ ಮತ್ತು ಸಲ್ಲಿಸಿದ ಅರ್ಜಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಓಡಾಡುತ್ತಿದೆ.