Asianet Suvarna News Asianet Suvarna News

ಎವೆಲಿನ್ ಶರ್ಮಾ ಫಿಟ್ ನೆಸ್ ಮರ್ಮ

ಜರ್ಮನ್ ಮೂಲದ ಮಾಡೆಲ್ ಕಂ ನಟಿ ಎವೆಲಿನ್ ಶರ್ಮಾ. ಅಮೆರಿಕನ್ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ. ಮುಂದೆ ಬಾಲಿವುಡ್‌ನಲ್ಲಿ ಒಂದಿಷ್ಟು ಸಿನಿಮಾ ಮಾಡಿದ್ದಾರೆ. ಅಮೆರಿಕಾದ ಅಧ್ಯಕ್ಷರೊಂದಿಗೆ ವೈಟ್‌ಹೌಸ್‌ನಲ್ಲಿ ಉಪಹಾರ ಸೇವಿಸಿದ್ದು ಈಕೆಯ ಜನಪ್ರಿಯತೆಗೆ ಸಾಕ್ಷಿ. ಸೂಪರ್ ಹಾಟ್ ಫಿಟ್ ಅಂತ ಕರೆಸಿಕೊಂಡ ಎವೆಲಿನ್ ಆ ಚೆಲುವಿನ ರಹಸ್ಯವನ್ನಿಲ್ಲಿ ಬಿಚ್ಚಿಟ್ಟಿದ್ದಾರೆ.

Evelyn sharma fitness secret
Author
Bengaluru, First Published Sep 24, 2018, 12:29 PM IST

ಎತ್ತರ: 5'7 ತೂಕ: 53 ಸುತ್ತಳತೆ: 34-27-35

ಜರ್ಮನ್ ಫುಡ್‌ನ ಪಾಗಲ್ ಪ್ರೇಮಿ

ಎವೆಲಿನ್ ತಾಯಿ ಜರ್ಮನಿಯವರು. ತಂದೆ ಪಂಜಾಬಿ. ಅಮ್ಮನ ಮಗಳು ಎವೆಲಿನ್‌ಗೆ ಅವರ ಅಡುಗೆಯೇ ಜಗತ್ತಿನ ಬೆಸ್ಟ್ ಡಿಶ್. ಸ್ಟ್ರಿಕ್ಟ್ ಡಯೆಟ್ ವಿಷಯಕ್ಕೆ ಬಂದರೆ ಇದೇ ವೀಕ್‌ನೆಸ್ .‘ಅಮ್ಮ ಮಾಡೋ ಜರ್ಮನ್ ಅಡುಗೆ ತಿನ್ತಿದ್ರೆ ಬ್ರೇಕ್ ಹಾಕಕ್ಕಾಗಲ್ಲ. ಆಮೇಲೆ ಪಾಪಪ್ರಜ್ಞೆ ಕಾಡಲು ಶುರು. ಮತ್ತೆ ಡಬ್ಬಲ್‌ಡಬ್ಬಲ್ ವರ್ಕೌಟ್ ಪೇಚಾಟ’ ಅಂತ ತಮ್ಮ ವೀಕ್‌ನೆಸ್ ಬಗ್ಗೆ ಹೇಳ್ತಾರೆ. ಬೆಳಗ್ಗೆದ್ದು ಓಟ್ಸ್, ಡ್ರೈಫ್ರುಟ್ಸ್, ನಟ್ಸ್ ಮಿಶ್ರಿತ ಗ್ರಾನೋಲ ಕುಡೀತೀನಿ. ಆಮೇಲೆ ಹಣ್ಣುಗಳನ್ನು ತಿನ್ನೋದು. ಒಂಚೂರು ಹೊತ್ತು ಬಿಟ್ಟು ವರ್ಕೌಟ್ ಎಲ್ಲ ಮುಗಿದ ಮೇಲೆ ಬ್ರೆಡ್, ಬ್ರೂ ಕಾಫಿ. ನಾನು ಟ್ರಾವೆಲಿಂಗ್‌ನಲ್ಲಿರೋದೇ ಹೆಚ್ಚು. ಅದರ ನಡು ನಡುವೆಯೇ ಊಟ, ತಿಂಡಿ, ಕೆಲವೊಮ್ಮೆ ನಿದ್ದೆನೂ ಆಗಿ ಬಿಡುತ್ತೆ ಅಂತಾರೆ. 

ಫಿಟ್ ಆಗಿರಲೇ ಬೇಕಲ್ಲಾ!

‘ಸಿನಿಮಾದಂಥಾ ಕ್ಷೇತ್ರದಲ್ಲಿ ಫಿಟ್‌ನೆಸ್‌ಗೆ ಆದ್ಯತೆ ನೀಡಲೇ ಬೇಕು. ಆದರೆ ನಿತ್ಯ ಟ್ರಾವೆಲ್ ಮಾಡೋ ನನಗೆ ಇದು ಸವಾಲು. ಏನೇ ಆದ್ರೂ ದಿನದಲ್ಲಿ ಒಂದು ಗಂಟೆ ವರ್ಕೌಟ್ ತಪ್ಪಿಸಲ್ಲ. ನನಗೊಬ್ಬ ಅದ್ಭುತ ಪಿಲಾಟೆಸ್ ಟ್ರೈನರ್ ಸಿಕ್ಕಿದ್ದಾರೆ. ಎಂಥಾ ಒತ್ತಡದಲ್ಲೂ ಪಿಲಾಟೆಸ್ ಮಿಸ್ ಮಾಡದ ಹಾಗೆ ನೋಡ್ಕೊಳ್ತಾರೆ. ಒಮ್ಮೊಮ್ಮೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುತ್ತೀನಿ’ ಅಂತ ತಮ್ಮ ವರ್ಕೌಟ್ ಬಗ್ಗೆ ವಿವರಿಸುತ್ತಾರೆ. ಆಗಾಗ ಬಾಲಿವುಡ್ ನಂಬರ್‌ಗೆ ಹೆಜ್ಜೆ ಹಾಕೋದೂ ಇದೆ.

Follow Us:
Download App:
  • android
  • ios