ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಗಾದೆ ಇದೆ. ದೇಶ ಸುತ್ತಿದರೆ ನಮ್ಮ ಜ್ಞಾನದೊಂದಿಗೆ ಜೀವನಾನುಭವವೂ ಹೆಚ್ಚುತ್ತದೆ. ಇಂಥ ಅನುಭವವನ್ನು ಸೈಕಲ್‌ನಲ್ಲಿಯೇ ಸುತ್ತಿ ಹೆಚ್ಚಿಸಿಕೊಂಡಿದ್ದಾನೆ ಈ ಯುವಕ. ಯಾರಿವನು?
18 ವರ್ಷದ ಚಾರ್ಲಿ ಕ್ಯಾಂಡೆನ್ ಸೈಕಲ್‌ನಲ್ಲಿ 9 ತಿಂಗಳಲ್ಲಿ 29 ಸಾವಿರ ಕಿ.ಮೀ. ಪ್ರಪಂಚ ಪರ್ಯಟನೆ ಮಾಡಿ, ಸುಮಾರು 20 ದೇಶಗಳನ್ನ ಸುತ್ತಿದ್ದಾರೆ. ಇಂಥ ದಾಖಲೆ ಮಾಡಿದ ಅತ್ಯಂತ ಕಿರಿಯ ಪರ್ಯಟಕ ಇವನು. ಇದಕ್ಕೂ ಮೊದಲು ಲಂಡನ್‌ನ 19 ವರ್ಷದ ಟಾಮ್ ಡೇವಿಸ್ ಈ ದಾಖಲೆ ಮಾಡಿದ್ದರು.
ಲಂಡನ್‌ನ ಚಾರ್ಲಿ 6 ಜುಲೈ 2018ರಲ್ಲಿ ತನ್ನ ಪ್ರವಾಸವನ್ನು ಆರಂಭಿಸಿದರು. ಏಷ್ಯಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದ ಸುಮಾರು 20 ದೇಶಗಳನ್ನು ಆಗಲೇ ಸುತ್ತಿದ್ದಾರೆ.
ಆರಂಭದಲ್ಲಿ ಚಾರ್ಲಿ ಕೇವಲ ಯುರೋಪಿನಲ್ಲಿ ಸಾವಿರ ಕಿ.ಮೀ. ಯಾತ್ರೆ ಮಾಡಿದ್ದರು. ಕೊನೆಗೆ 29 ಸಾವಿರ ಕಿ.ಮೀ ಟೂರ್ ಮಾಡಿ ಮುಗಿಸಿದ್ದಾರೆ. ಅಂದರೆ 26 ಬಾರಿ ಮೌಂಟ್ ಎವರೆಸ್ಟ್ ಹತ್ತಿ ಇಳಿದಷ್ಟಾಗುತ್ತದೆ.
ಆಸ್ಟ್ರೇಲಿಯಾದಲ್ಲಿ ಅವರ ಸೈಕಲ್ ಮತ್ತು ಸಾಮಾನು ಕಳ್ಳತನವಾಗಿ ಚಾರ್ಲಿ ಅಕ್ಟೋಬರ್ 2018ರಲ್ಲಿ ಸುದ್ದಿಯಾಗಿದ್ದರು. ಸೈಕಲಿನಲ್ಲಿಟ್ಟಿದ್ದ ಬ್ಯಾಗಿನಲ್ಲಿ ಪಾಸ್‌ಪೋರ್ಟ್ ಸೇರಿ ಹಲವು ಸಾಮಗ್ರಿಗಳು ಕಳ್ಳತನವಾಗಿದ್ದವು. ಅವು ಸುಮಾರು ಮೂರೂವರೆ ಲಕ್ಷಕ್ಕಿಂತ ಹೆಚ್ಚು ಬೆಲೆಯುಳ್ಳದ್ದಾಗಿತ್ತು.
ಸೈಕಲ್ ಮತ್ತು ಬ್ಯಾಗ್ ಕಳೆದು ಹೋಗಿರುವುದು ಸ್ಥಳೀಯರಿಗೆ ತಿಳಿದಾಗ, ಅವರೇ ಹೊಸ ಸೈಕಲ್, ಬಟ್ಟೆ ಮತ್ತು ಇತರೆ ಅಗತ್ಯ ವಸ್ತುಗಳನ್ನು ನೀಡಿದರಂತೆ. ಜೊತೆಗೆ ಜನರೆಲ್ಲಾ ಸೇರಿ ಹಣ ಸಂಗ್ರಹಿಸಿ ತಮಗೆ ನೀಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ, ಚಾರ್ಲಿ. ಆ ಹಣದಿಂದಲೇ ಮತ್ತೆ ಯಾತ್ರೆ ಮುಂದುವರಿಸಿದರಂತೆ. ಇದೀಗ 20 ದೇಶಗಳನ್ನು ಸುತ್ತಿ ಮುಗಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 17, 2019, 4:36 PM IST