Asianet Suvarna News Asianet Suvarna News

ಟಾಯ್ಲೆಟ್ ಸೀಟ್ ಮುಖಾಂತರ ಲೈಂಗಿಕ ಕಾಯಿಲೆಗಳು ಹರಡುತ್ತಾ?

ಸಾರ್ವಜನಿಕ ಶೌಚಾಲಯಗಳ ಟಾಯ್ಲೆಟ್ ಸೀಟೆಂದರೆ ಅವು ಸ್ವಚ್ಛವಾಗಿರುವುದು ಎಲ್ಲೋ ಸಾವಿರಕ್ಕೊಂದು. ಮತ್ತೆ ಕೆಲವು ಸ್ವಚ್ಛವಾಗಿ ಕಂಡರೂ ಕಾಣಿಸದ ಕೀಟಾಣುಗಳನ್ನು ಮೈತುಂಬಾ ಇಟ್ಟುಕೊಂಡು ಕುಳಿತಿರುತ್ತವೆ. ಹಾಗಾಗಿ, ಇಂಥ ಟಾಯ್ಲೆಟ್ ಬಳಸಲೇ ಬಹುತೇಕರಿಗೆ ಭಯ. ಯಾವ ಕಾಯಿಲೆಗಳು ಅಂಟುತ್ತವೋ ಏನೋ ಎಂದು. 

Can toilet seat spread STD
Author
Bangalore, First Published Sep 26, 2019, 3:38 PM IST

ಸಾರ್ವಜನಿಕ ಶೌಚಾಲಯ ಬಳಸಬೇಕೆಂದರೆ ನೂರೆಂಟು ಯೋಚನೆಗಳು ತಲೆಗೆ ಬರುತ್ತವೆ. ಹೇಗೆ ಕ್ಲೀನ್ ಮಾಡಿರುತ್ತಾರೋ ಏನೋ, ಮುಂಚೆ ಬಳಸಿದವರು ಸರಿಯಾಗಿ ನೀರು ಹಾಕಿಲ್ಲವಾದರೆ... ಅವರಿಗಿದ್ದ ಕಾಯಿಲೆಗಳ ಬ್ಯಾಕ್ಟೀರಿಯಾಗಳೆಲ್ಲ ಅಲ್ಲೇ ನನಗಾಗಿ ಕಾಯುತ್ತಾ ಕುಳಿತಿದ್ದರೆ...

ಲೈಂಗಿಕವಾಗಿ ಹರಡುವ ಕಾಯಿಲೆಗಳು ಈ ಮೂಲಕ ಹಬ್ಬುತ್ತವೆಯೇ? ಸಾರ್ವಜನಿಕ ಟಾಯ್ಲೆಟ್ ಬಳಸಿ ಏಡ್ಸ್ ಬಂದುಬಿಟ್ಟರೆ... ಹೀಗೆ ಭಯಗೊಂದಲಗಳು ಒಂದೆರಡಲ್ಲ. ಅದಕ್ಕಾಗಿಯೇ ಹಲವರು ಎಷ್ಟೇ ಅರ್ಜೆಂಟ್ ಆದರೂ ಸಾರ್ವಜನಿಕ ಶೌಚಾಲಯ ಬಳಸದೆ ಒದ್ದಾಡುತ್ತಾರೆ. ಹೌದು, ಅಲ್ಲಿ ಕೋಟಿಗಟ್ಟಲೆ ಕಾಯಿಲೆ ಹರಡುವ ಬ್ಯಾಕ್ಟೀರಿಯಾಗಳಿರುತ್ತವೆ. ಆದರೆ, ಏಡ್ಸ್‌ನಂಥ ಲೈಂಗಿಕ ಕಾಯಿಲೆಗಳು ಟಾಯ್ಲೆಟ್ ಸೀಟ್‌ನಿಂದಾಗಿ ಹರಡುವುದಿಲ್ಲ. ಹಾಗಿದ್ದರೆ ಸರ್ಪಸುತ್ತು, ಚರ್ಮರೋಗಗಳು ಮುಂತಾದವು ಟಾಯ್ಲೆಟ್ ಸೀಟ್ ಮುಖಾಂತರ ಹಬ್ಬುತ್ತವೆಯೇ? ತಿಳಿದುಕೊಳ್ಳೋಕೆ ಮುಂದೆ ಓದಿ. 

ಪಬ್ಲಿಕ್ ಟಾಯ್ಲೆಟ್‌ಗಿಂತಲೂ ATM ಗಲೀಜು!

ಸರ್ಪಸುತ್ತು

ವರ್ಷಗಳ ಕಾಲ ಹರ್ಪಿಸ್ ಇದ್ದರೂ ತಿಳಿಯದೇ ಹೋಗುವ ಸಾಧ್ಯತೆಗಳಿವೆ. ಇದು ಲೈಂಗಿಕವಾಗಿ ಹರಡುವ ಕಾಯಿಲೆಯಾಗಿದೆ. ದೈಹಿಕ ಸಂಬಂಧದಿಂದ ಮಾತ್ರ ಜೈನೈಟಲ್ ಹರ್ಪಿಸ್ ಹರಡುತ್ತದೆ. ಬಾಯಿ ಅಥವಾ ಕೆಳಗಿನ ಭಾಗಗಳ ಮೂಲಕ ವೈರಸ್ ಹರಡುತ್ತದೆ. ಕಣ್ಣೀರ ಮೂಲಕವೂ ಹರಡಬಹುದು. ಹರ್ಪಿಸ್ ಇದ್ದಾಗ ಹಸಿಯಾದ, ಒಡೆದ ಕೆಂಪು ಬಣ್ಣವನ್ನು ಜೆನೈಟಲ್ ಮೇಲೆ ಕಾಣಬಹುದು. ಅದು ಯಾವ ನೋವನ್ನೂ ಹೊಂದಿರುವುದಿಲ್ಲ. ಆದರೆ ಸ್ವಲ್ಪ ತುರಿಕೆ ಬರಬಹುದು. ಈ ವೈರಸ್‌ಗಳು ದೇಹದಿಂದ ಹೊರಗೆ ಬದುಕಲಾರವು. ಹಾಗಾಗಿ, ಟಾಯ್ಲೆಟ್ ಸೀಟ್‌ನಿಂದ ಸರ್ಪಸುತ್ತು ಬರುವ ಸಂಭವಗಳಿಲ್ಲ.

ಎಚ್‌ಪಿವಿ ಸೋಂಕು

ಇದೂ ಕೂಡಾ ಲೈಂಗಿಕವಾಗಿ ಹರಡುವ ಚರ್ಮದ ಕಾಯಿಲೆ. ಗರ್ಭಿಣಿ ತಾಯಿಯಿಂದ ಮಗುವಿಗೂ ಬರಬಹುದು. ಒಬ್ಬರ ದೇಹದೊಳಕ್ಕೆ ತಾಕಿಸಿದ ಮೆಡಿಕಲ್ ಟೂಲ್ಸ್‌ಗಳಿಂದಲೂ ಇವು ಮತ್ತೊಬ್ಬರಿಗೆ ಹರಡಬಹುದು. ಏಕೆಂದರೆ, ಈ ವೈರಸ್‌ಗಳನ್ನು ಡಿಸ್‌ಇನ್ಪೆಕ್ಟೆಂಟ್ ಬಳಸಿ ಸಾಯಿಸಲಾಗದು. ಆದರೆ, ಟಾಯ್ಲೆಟ್ ಸೀಟ್‌ನಿಂದ ಇವು ಬರಲಾರವು. 

ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಕೆಯಿಂದ ಮೂಲವ್ಯಾಧಿ ಕಾಯಿಲೆ ಬರುತ್ತಂತೆ!

ಕ್ಲಮೈಡಿಯಾ

ಕ್ಲಮೈಡಿಯಾ ಗರ್ಭಿಣಿಯರಲ್ಲಿದ್ದರೆ ಹುಟ್ಟುವ ಮಗುವಿಗೆ ಅದು ಪಾಸ್ ಆಗಬಹುದು. ಆದರೆ, ಇದು ಟಾಯ್ಲೆಟ್ ಸೀಟ್ನಿಂದಾಗಲೀ, ಬೆಡ್ ಸ್ಪ್ರೆಡ್‌ಗಳಿಂದಾಗಲೀ, ಮುತ್ತು, ಟಬ್, ಸ್ವಿಮ್ಮಿಂಗ್ ಪೂಲ್, ಬಟ್ಟೆಗಳಿಂದಾಗಲೀ ಹರಡುವುದಿಲ್ಲ. ಇದು ಕುರುಡುತನ, ಉರಿಮೂತ್ರ, ಯೋನಿ, ಗರ್ಭಕೋಶದ ಉರಿಯೂತ ಕಾಯಿಲೆಗಳನ್ನು ತರಬಹುದು. ಈ ಕ್ಲಮೈಡಿಯಾವು ಪರಾವಲಂಬಿ ಬ್ಯಾಕ್ಟೀರಿಯಾವಾಗಿದ್ದು, ಇದು ಬದುಕಲು, ದ್ವಿಗುಣಗೊಳ್ಳಲು ಜೀವಕೋಶಗಳ ಅಗತ್ಯವಿದೆ. ಲೈಂಗಿಕ ಸಂಪರ್ಕದಿಂದ ಇದು ಹರಡಬಹುದು. ಆದರೆ ನಿರೋಧ್ ಬಳಕೆಯಿಂದ ಈ ಕಾಯಿಲೆಯನ್ನು ಬಹುತೇಕ ದೂರವಿಡಬಹುದು.

ಹಾಗಿದ್ದರೆ ಟಾಯ್ಲೆಟ್ ಸೀಟ್‌ನಿಂದ ಬರುವ ಇನ್ಫೆಕ್ಷನ್‌ಗಳಾವುವು?

ಈ ಮೇಲಿನ ಲೈಂಗಿಕವಾಗಿ ಹರಡುವ ಯಾವ ಕಾಯಿಲೆಗಳೂ ಟಾಯ್ಲೆಟ್ ಸೀಟ್‌ನಿಂದ ಹರಡುವುದಿಲ್ಲವಾದರೂ, ಇತರೆ ಹಲವು ಇನ್ಫೆಕ್ಷನ್‌ಗಳು ಈ ಮೂಲಕ ಬರಬಹುದು. ನಿಜವೆಂದರೆ, ಬಹುತೇಕ ಕಾಯಿಲೆ ಹರಡುವ ಕೀಟಾಣುಗಳು ಟಾಯ್ಲೆಟ್ ಸೀಟ್ ಮೇಲೆ ಸ್ವಲ್ಪ ಹೊತ್ತು ಮಾತ್ರ  ಜೀವ ಹಿಡಿದಿಟ್ಟುಕೊಳ್ಳಬಲ್ಲವು. ಅವು ಇನ್ಫೆಕ್ಷನ್ ಹರಡಲು ಮನುಷ್ಯನ ಜೀವಕೋಶಗಳಿಗೆ ಜೆನೈಟಲ್ ಅಥವಾ ಮೂತ್ರನಾಳ, ಗಾಯಗಳು ಮುಂತಾದ ಸ್ಥಳಗಳಿಂದ ಸೇರಬೇಕು. ಹಾಗೆ ಹರಡಬಹುದಾದವೆಂದರೆ,

- ಇ.ಕೊಲಿ. ಇದು ಮಲದಲ್ಲಿ ಇರುತ್ತದೆ. ಇದರ ಬೆಳವಣಿಗೆಗೆ ಟಾಯ್ಲೆಟ್‌ಗಿಂತ ಉತ್ತಮ ಸ್ಥಳ ಇನ್ಯಾವುದಿದೆ? ಇ ಕೊಲಿ ಸಾಮಾನ್ಯವಾಗಿ ನಮ್ಮ ಕರುಳಿನಲ್ಲಿರುತ್ತದೆ. ಆದರೆ, ಮಲಿನವಾದ ನೀರು, ಆಹಾರ, ಗಬ್ಬಾದ ಟಾಯ್ಲೆಟ್ ಸೀಟ್‌ಗಳ ಮೂಲಕ ಇದು ಹರಡಬಹುದು. ಆಗ ಬೇಧಿ, ಹೊಟ್ಟೆನೋವು, ವಾಂತಿ ಕಾಣಿಸಿಕೊಳ್ಳಬಹುದು.

- ನೋರೋವೈರಸ್ ಕೂಡಾ ಇ ಕೊಲಿಯಂತೆಯೇ ಹರಡುತ್ತದೆ. ಟಾಯ್ಲೆಟ್ ಸೀಟ್ ಸ್ವಚ್ಛಗೊಳಿಸಿದ ಮೇಲೂ ಅಲ್ಲಿ ಎರಡು ವಾರಗಳ ಕಾಲ ಇದು ಇರಬಲ್ಲದು. ಇದು ಕೂಡಾ ಹೊಟ್ಟೆ ನೋವು, ಅಜೀರ್ಣ ಮುಂತಾದವಕ್ಕೆ ಕಾರಣವಾಗುತ್ತದೆ.

ರೆಡ್ ಮೀಟ್ ತಿಂದ್ರೆ ಕಿಡ್ನಿಯಲ್ಲಿ ಕಲ್ಲುಂಟಾಗುತ್ತಾ?

- ಶಿಗೆಲ್ಲ ಎಂಬ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲದು. ಅದರಲ್ಲೂ ಕೈ ಸರಿಯಾಗಿ ತೊಳೆಯದಿದ್ದರೆ ಹಸ್ತಲಾಘವ ಸಾಕು, ಇದು ಒಬ್ಬರಿಂದ ಮತ್ತೊಬ್ಬರ ಮೇಲೆ ಲಾಗ ಹಾಕಲು. ಟಾಯ್ಲೆಟ್ ಸೀಟ್ಸ್, ಹ್ಯಾಂಡಲ್ಸ್, ಮುಚ್ಚಳಗಳು ಯಾವುದನ್ನು ಮುಟ್ಟಿದಾಗ ಬೇಕಾದರೂ ಶಿಗೆಲ್ಲ ಅಂಟಬಹುದು. ಇದು ಕೂಡಾ ವಾಂತಿ, ಬೇಧಿ, ಹೊಟ್ಟೆನೋವಿಗೆ ಕಾರಣವಾಗುತ್ತದೆ.

- ಸ್ಟ್ರೆಪ್ಟೋಕಾಕಸ್ ಬ್ಯಾಕ್ಟೀರಿಯಾ ಕೂಡಾ ಟಾಯ್ಲೆಟ್ ಸೀಟ್‌ನಿಂದ ಹರಡಬಹುದು. ಇದು ಗಂಟಲು ಹಾಗೂ ಶ್ವಾಸಕೋಶದಲ್ಲಿ ನ್ಯುಮೋನಿಯಾ ಹರಡುತ್ತದೆ. 
ಹಾಗಾದರೆ, ಪಬ್ಲಿಕ್ ಟಾಯ್ಲೆಟ್‌ನಿಂದ ಈ ಬ್ಯಾಕ್ಟೀರಿಯಾಗಳು ಅಂಟದಂತೆ ನೋಡಿಕೊಳ್ಳುವುದು ಹೇಗೆ?

- ನಿಮ್ಮ ಫೋನ್ ಸೇರಿದಂತೆ ಯಾವುದೇ ವಸ್ತುಗಳನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗಬೇಡಿ. ಶೇ.20ರಷ್ಟು ಫೋನ್‌ಗಳು ಟಾಯ್ಲೆಟ್ ಸೀಟ್‌ಗಿಂತ ಹೆಚ್ಚು ಗಬ್ಬಾಗಿರುತ್ತವೆ. 

- ನಿಮ್ಮ ಪರ್ಸ್ ಅಥವಾ ಯಾವುದೇ ವಸ್ತುವನ್ನು ಟಾಯ್ಲೆಟ್ ಫ್ಲೋರ್ ಮೇಲೆ ಇಡಬೇಡಿ. 

ಅರ್ಧದಷ್ಟು ಮಹಿಳೆಯರಿಗೆ ಅವರ ಗುಪ್ತಾಂಗವೆಲ್ಲಿದೆ ಎಂಬುವುದೇ ಗೊತ್ತಿಲ್ಲ!

- ಒಂದು ಅಧ್ಯಯನದ ಪ್ರಕಾರ, ಟಾಯ್ಲೆಟ್‌ನಲ್ಲಿ 77,990 ರೀತಿಯ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಇರುತ್ತವೆ. ಹೀಗಾಗಿ, ಟಾಯ್ಲೆಟ್ ಬಳಕೆ ಬಳಿಕೆ ಕೈಯ್ಯನ್ನು ಸ್ವಚ್ಛವಾಗಿ ತೊಳೆಯುವುದರಿಂದ ಬಹುತೇಕವನ್ನು ನಿಮ್ಮೊಂದಿಗೆ ತರದಂತೆ ನೋಡಿಕೊಳ್ಳಬಹುದು.

- ಬ್ಲೋ ಡ್ರೈಯರ್ಸ್‌ಗಿಂತಲೂ ಪೇಪರ್ ಟವೆಲ್ ಬಳಸುವುದು ಉತ್ತಮ. ಟಾಯ್ಲೆಟ್ ಬಾಗಿಲನ್ನು ಕೂಡಾ ಟಿಶ್ಯೂ ಬಳಸಿಯೇ ಹಾಕಿ ತೆಗೆಯಿರಿ. 

Follow Us:
Download App:
  • android
  • ios