Asianet Suvarna News Asianet Suvarna News

ಸಂಜೆ 5.30ರೊಳಗೆ ರಾತ್ರಿಯ ಊಟ: ಮಗು ಹೆತ್ತು ಆರು ತಿಂಗಳಲ್ಲಿ ಮತ್ತೆ ಬಳುಕೋ ಬಳ್ಳಿಯಂತಾದ ಅನುಷ್ಕಾ ಶರ್ಮಾ

ರಾತ್ರಿ ಬೇಗ ಊಟ ಮಾಡಿ ಬೇಗ ಮಲಗಿ ಎಂಬುದನ್ನು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಬಹುತೇಕರು ಇದನ್ನು ಫಾಲೋ ಮಾಡುವುದಿಲ್ಲ. ಆದರೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದನ್ನು ಫಾಲೋ ಮಾಡ್ತಿದ್ದು, ಇದರಿಂದ ಅವರಿಗೆ ಒಳ್ಳೆಯ ಪ್ರಯೋಜನವಾಗ್ತಿದೆ ಎಂದು ಹೇಳಿಕೊಂಡಿದ್ದಾರೆ. ಆ ಬಗ್ಗೆ ಒಂದು ಸ್ಟೋರಿ

Bollywood Actress Anushka sharma reveals benifits of eating dinner before 5.30 Pm akb
Author
First Published Sep 6, 2024, 10:11 AM IST | Last Updated Sep 6, 2024, 11:05 AM IST

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಲಂಡನ್‌ನಲ್ಲಿ ನೆಲೆಸಿದ್ದು, ಇತ್ತೀಚೆಗೆ ಅನುಷ್ಕಾ ವಿರಾಟ್ ಕೊಹ್ಲಿ ಹಾಗೂ ಮಕ್ಕಳನ್ನು ಅಲ್ಲಿಯೇ ಬಿಟ್ಟು ಮುಂಬೈಗೆ ಬಂದಿದ್ದರು. ಆದರೆ ಆರು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿರುವ ಅವರು ಮತ್ತೆ ಫಿಟ್ & ಫೈನ್ ಆಗಿ ಕಾಣಿಸುತ್ತಿರುವುದು ಅನೇಕರನ್ನು ಅಚ್ಚರಿಗೊಳಿಸಿದೆ.  ಗರ್ಭಿಣಿಯಾದಾಗ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದು ಮತ್ತೆ ಸಹಜ ಸ್ಥಿತಿಗೆ ಬರುವುದಕ್ಕೆ ಹಲವು ವರ್ಷಗಳೇ ಬೇಕು. ಕೆಲವರು ಮಗುವಾಗುವ ಮೊದಲಿದ್ದ ಸೌಂದರ್ಯ ಮರಳುವುದೇ ಇಲ್ಲ ಎಂದು ಬೇಸರಿಸುವುದನ್ನು ನೀವು ಕೇಳಿರಬಹುದು. ಆದರೆ ಅನುಷ್ಕಾ ಶರ್ಮಾ ಮಾತ್ರ  ಕೇವಲ ಆರು ತಿಂಗಳಲ್ಲಿ ಬಳುಕೋ ಬಳ್ಳಿಯಂತಾಗಿದ್ದಾರೆ. ಹಾಗಿದ್ದರೆ ಇದರ ಸಿಕ್ರೇಟ್ ಏನಿರಬಹುದು? 

ಸ್ಲರ್ಪ್‌ ಫರ್ಮಾದ (Slurrp Farm)ಮುಂಬೈಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಅನುಷ್ಕಾ ಶರ್ಮಾ, ತಮ್ಮ ಲೈಫ್‌ಸ್ಟೈಲ್ ಮಕ್ಕಳ ಪಾಲನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಆ ವೀಡಿಯೋಗಳು ಈಗ ವೈರಲ್ ಆಗ್ತಿವೆ. ಮಕ್ಕಳಾದ ಮೇಲೆ ಅನುಷ್ಕಾ ಶರ್ಮಾ ಹಾಗೂ ಅವರ ಕುಟುಂಬದ ಜೀವನಶೈಲಿ ಬದಲಾಗಿದ್ದು, ಅವರು ಮಗಳು ವಾಮಿಕಾ ಜೊತೆ ಸಂಜೆ 5. 30ಕ್ಕೆಲ್ಲಾ ರಾತ್ರಿಯ ಊಟವನ್ನು ಮುಗಿಸಿ ಬಿಡುತ್ತಾರಂತೆ ಇದರಿಂದ ಒಳ್ಳೆಯ ಪ್ರಯೋಜನಗಳು ಸಿಗಲು ಆರಂಭವಾಗಿವೆ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ. 

ವಿರಾಟ್-ಅನುಷ್ಕಾ, ರಣವೀರ್-ದೀಪಿಕಾ, ಸೆಲೆಬ್ರಿಟಿಗಳು ವಿದೇಶದಲ್ಲಿ ಜನ್ಮ ನೀಡಲು ಬಯಸೋದ್ಯಾಕೆ, ಸೌಲಭ್ಯಗಳೇನು?

ಮಗಳು ವಾಮಿಕಾಗೆ ಸಂಜೆ 5 .30ಕ್ಕೆಲ್ಲಾ ಹಸಿವಾಗಲು ಆರಂಭವಾಗುತ್ತದೆ. ಅದೇ ಸಮಯದಲ್ಲಿ ಮನೆಯಲ್ಲಿ ತಾನು ಏಕಾಂಗಿಯಾಗಿರುವ ಕಾರಣ ನಾನು ಅದೇ ಸಮಯದಲ್ಲಿ ಅವಳ ಜೊತೆಯೇ ಊಟ ಮಾಡಲು ಶುರು ಮಾಡಿದೆ. ಅದರೆ ಇದುವೇ ನಂತರದಲ್ಲಿ ನಮ್ಮ ರಾತ್ರಿಯ ಊಟದ ಸಮಯವಾಯ್ತು. ಇದು ವಾಮಿಕಾಳಿಂದ ಆರಂಭವಾಗಿತ್ತು. ಆ ಸಮಯದಲ್ಲಿ ನಾನು ಮತ್ತು ವಾಮಿಕಾ ಇಬ್ಬರೇ ಮನೆಯಲ್ಲಿರುತ್ತಿದ್ದೆವು. ಹೀಗಾಗಿ ಏನು ಮಾಡುವುದಕ್ಕಿದೆ ಎಂದು ಯೋಚಿಸಿ ಊಟ ಮಾಡಿ ಸ್ವಲ್ಪ ಹೊತ್ತಿನ ನಂತರ ಇಬ್ಬರು ನಿದ್ದೆ ಮಾಡುತ್ತಿದ್ದೆವು ಎಂದು ಅನುಷ್ಕಾ ಶರ್ಮಾ ಹೇಳಿಕೊಂಡಿದ್ದಾರೆ. ಆದರೆ ಈ ಬೇಗ ಊಟ ಮಾಡಿ ಮಲಗುವುದರಿಂದ ಇವರಿಗೆ ಹಲವು ಪ್ರಯೋಜನಗಳು ಸಿಗಲು ಆರಂಭವಾಯ್ತು ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ. ಉತ್ತಮವಾದ ನಿದ್ದೆಯ ಜೊತೆ ಉತ್ತಮವಾದ ಮಾನಸಿಕ ಆರೋಗ್ಯ, ಮುಂಜಾನೆಯ ಸಮಯದಲ್ಲಿ ಪ್ರೆಶ್ ಆಗಿರುವಂತಹ ಅನುಭವವಾಗುತ್ತಿದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. 

ಅಲ್ಲದೇ ಈಗ ಪತಿ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಕುಟುಂಬ ನಮ್ಮ ಈ ದಿನಚರಿಯನ್ನು ಅನುಕರಿಸಲು ಆರಂಭಿಸಿದೆ,  ಇದು ಕೆಲವೊಮ್ಮೆ ಅನುಕೂಲಕರ ಎಂದು ಅನಿಸದೇ ಇದ್ದರೂ ಕೂಡ ಈ ರುಟಿನ್‌ಗೆ ಈಗ ಎಲ್ಲರೂ ಹೊಂದಿಕೊಂಡಿದ್ದಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ಅಲ್ಲದೇ ತಂದೆ ಸೇನೆಯಲ್ಲಿದ್ದರಿಂದ ತಾವು ಶಿಸ್ತಿನ ಸೇನಾ ಕುಟುಂಬದಲ್ಲಿ ಬೆಳೆದು ಬಂದಿದ್ದರಿಂದ ಅದನ್ನು ತನ್ನ ಮಕ್ಕಳ ಮೇಲೂ ಹೇರುವುದಕ್ಕೆ ಅನುಷ್ಕಾ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ತಮ್ಮ ಬಾಲ್ಯವನ್ನು ನೆನೆದ ಅನುಷ್ಕಾ ಶರ್ಮಾ,  ತಮ್ಮ ಊಟದ ಸಮಯವನ್ನು ಪೋಷಕರು ಹೇಗೆ ಹ್ಯಾಂಡಲ್ ಮಾಡ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ನಾವು ಊಟ ಮಾಡಲು ಇಷ್ಟವಿಲ್ಲದೇ ಮುದುಡಿ ಕುಳಿತಿದ್ದಾಗ ಅಪ್ಪ ನಮ್ಮನ್ನು ಜೋರಾಗಿ ಬೈಯುತ್ತಿರಲಿಲ್ಲ, ಊಟ ಬೇಡ್ವೇ ಸರಿ ಎದ್ದು ಹೋಗಿ, ಆದರೆ ನಿಮಗೆ ಹಸಿವಾದರೆ ಬೇರೆ ಏನನ್ನೂ ಕೊಡುವುದಿಲ್ಲ, ಈಗ ಏನಿದೆಯೋ ಅದನ್ನೇ ತಿನ್ನಬೇಕು ಎಂದು ಅವರು ಕೂಲ್ ಆಗಿ ಹೇಳುತ್ತಿದ್ದರು.  ಇದು ತುಂಬಾ ಮಹತ್ವದ ವಿಚಾರ. ಇದರಿಂದ ನಮಗೆ ನಮ್ಮ ಪೋಷಕರು ನಮಗಾಗಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ನಾವು ಬೆಲೆ ಕೊಡುವಂತಾಗುತ್ತಿತ್ತು. 

Anushka Sharma: ಒಂದೇ ಆಹಾರ, ಅದ್ಭುತ ಪ್ರಯೋಜನ: ಅನುಷ್ಕಾ ಶರ್ಮಾಳ ಮೋನೋ ಡಯಟ್‌ನ ಗುಟ್ಟೇನು?

ಇದೇ ರೀತಿಯ ಜೀವನ ಮೌಲ್ಯವನ್ನು ನಾನು ನನ್ನ ಮಕ್ಕಳಾದ ವಮಿಕಾ ಹಾಗೂ ಅಕಾಯ್‌ಗೆ ಕಲಿಸಲು ಮುಂದಾಗಿದ್ದೇನೆ.  ಶಿಸ್ತು ಹಾಗೂ ಕೃತಜ್ಞತೆಯನ್ನು ಅವರಲ್ಲಿ ಬೆಳೆಸಲು ಮುಂದಾಗಿದ್ದೇನೆ. ನಮ್ಮ ಹೆಚ್ಚು ಪ್ರಯಾಣದಿಂದಲೇ ಕೂಡಿರುವ ಲೈಫ್‌ಸ್ಟೈಲ್‌ನಿಂದ ಆಗುತ್ತಿರುವ ನಿರಂತರ ಬದಲಾವಣೆಗೆ ಮಕ್ಕಳು ಹೊಂದಿಕೊಳ್ಳಲು ಈ ಬೇಗ ಊಟ ಹಾಗೂ ಬೇಗ ನಿದ್ದೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. 

 

 

Latest Videos
Follow Us:
Download App:
  • android
  • ios