ಈಗ ತಾನೇ ಹೋಳಿ ಸಂಭ್ರಮ ಮುಗಿದಿದೆ. ಆದರೆ, ಹೋಳಿ ಆಡಲಿಕ್ಕೇ ನಮ್ಮ ದೇಶದಲ್ಲಿ ಕೆಲವು ಪ್ರಸಿದ್ಧ ತಾಣಗಳಿವೆ ಎಂಬುವುದು ನಿಮಗೆ ಗೊತ್ತಾ? ಯಾವುದಾದರೂ ಒಂದು ವರ್ಷ ಹೋಳಿಯಾಡಲು ಈ ಊರುಗಳಿಗೆ ಹೋಗಿ. ಹೋಳಿ ಸಂಭ್ರಮವನ್ನು ನಿಮ್ಮದಾಗಿಸಿಕೊಳ್ಳಿ.
ಈಗ ತಾನೇ ಹೋಳಿ ಸಂಭ್ರಮ ಮುಗಿದಿದೆ. ಆದರೆ, ಹೋಳಿ ಆಡಲಿಕ್ಕೇ ನಮ್ಮ ದೇಶದಲ್ಲಿ ಕೆಲವು ಪ್ರಸಿದ್ಧ ತಾಣಗಳಿವೆ ಎಂಬುವುದು ನಿಮಗೆ ಗೊತ್ತಾ? ಯಾವುದಾದರೂ ಒಂದು ವರ್ಷ ಹೋಳಿಯಾಡಲು ಈ ಊರುಗಳಿಗೆ ಹೋಗಿ. ಹೋಳಿ ಸಂಭ್ರಮವನ್ನು ನಿಮ್ಮದಾಗಿಸಿಕೊಳ್ಳಿ.
ಹೋಳಿ ಆಚರಣೆ ಎಂದರೆ ಏನೋ ಒಂಥರಾ ಖುಷಿ. ಈ ಸಂಭ್ರಮವನ್ನು ಯಾವಾಗಲೂ ನಮ್ಮದೇ ತಾಣದಲ್ಲಿ ಗೆಳೆಯರ ಜೊತೆ ಎಂಜಾಯ್ ಮಾಡುತ್ತೇವೆ. ಆದರೆ ವಿಭಿನ್ನವಾಗಿರಬೇಕೆಂದರೆ ಈ ಊರಿಗೂ ಭೇಟಿ ನೀಡಿ.
ಮಥುರಾ: ಕೃಷ್ಣನ ಜನ್ಮ ಸ್ಥಳ ಮಥುರಾದಲ್ಲಿ ಹೋಳಿ ಹಬ್ಬಕ್ಕೆ ತಿಂಗಳ ಮೊದಲಿನಿಂದಲೇ ಸಿದ್ಧತೆ ಆರಂಭವಾಗುತ್ತದೆ. ಲಾತ್ ಮಾರ್ ಹೋಳಿ ಇಲ್ಲಿ ಹೆಚ್ಚು ಜನಪ್ರಿಯ. ಅಂದರೆ ಇಲ್ಲಿ ಮಹಿಳೆಯರು ಪುರುಷರಿಗೆ ಕೋಲಿನಲ್ಲಿ ಹೊಡೆಯುವ ಮೂಲಕ ಹೋಳಿ ಆಚರಿಸಲಾಗುತ್ತದೆ. ಮಥುರಾ ಹೊರ ಭಾಗದಲ್ಲಿರುವ ಬರ್ಸಾಣದಲ್ಲಿ ಈ ಆಚರಣೆ ನಡೆಯುತ್ತದೆ. ಅದನ್ನು ನೋಡೋದೇ ಒಂದು ಖುಷಿ.
ವೃಂದಾವನ: ಇದೂ ಕೃಷ್ಣ ಆಡಿ ಬೆಳೆದ ತಾಣ. ರಾಧೆ ಜೊತೆ ರಾಸಲೀಲಾ ನಡೆದ ತಾಣ. ಇಲ್ಲಿ ಸಡಗರ ಸಂಭ್ರಮದ ಹಾಗೂ ಕಲರ್‌ಫುಲ್ ಹೋಳಿಯನ್ನು ಸಾಂಪ್ರದಾಯಿಕವಾಗಿ ಎಂಜಾಯ್ ಮಾಡಬಹುದು. ವಿದೇಶಿಯರೂ ಬಂದು ಹೋಳಿ ಅಡುತ್ತಾರೆ. ಇಲ್ಲಿನ ಬಣ್ಣಗಳ ಹಬ್ಬ ಬಣ್ಣಗಳ ಲೋಕಕ್ಕೇ ನಿಮ್ಮನ್ನು ಕರೆದೊಯ್ಯುತ್ತದೆ.
ಪುರುಲಿಯಾ: ಜನಪದ ಶೈಲಿಯಲ್ಲಿ ಇಲ್ಲಿ ಹೋಳಿ ಆಚರಿಸುತ್ತಾರೆ. ಚಾಹು ಡ್ಯಾನ್ಸ್, ದರ್ಬಾಲಿ ಜುಮುರ್, ನಟುವಾ ಡ್ಯಾನ್ಸ್ ಮತ್ತು ವೆಸ್ಟ್ ಬೆಂಗಾಲ್‌ನ ಜನಪದ ಹಾಡುಗಳನ್ನು ಹಾಡುವ ಮೂಲಕ ಇಲ್ಲಿ ಹೋಳಿಯಾಡಲಾಗುತ್ತದೆ.
ಶಾಂತಿನಿಕೇತನ: ರವೀಂದ್ರನಾಥ್ ಠಾಗೋರ್ ಬಸಂತ್ ಉತ್ಸವ ಆರಂಭಿಸಿದರು. ಅವರು ಸ್ಥಾಪಿಸಿದ ಶಾಂತಿನಿಕೇತನದಲ್ಲಿ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿನ ಹೋಳಿ ಹಬ್ಬ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ.
ಆನಂದ್‌ಪುರ್ ಸಾಹೀಬ್ ಪಂಜಾಬ್: ಹೋಳಿ ಸಂದರ್ಭದಲ್ಲಿ ಇಲ್ಲಿ ವ್ರೆಸ್ಲಿಂಗ್, ಕುಸ್ತಿ, ಮಾರ್ಶಲ್ ಆರ್ಟ್, ಕತ್ತಿವರಸೆ ಎಲ್ಲವೂ ನಡೆಯುತ್ತದೆ, ನೋಡುಗರ ಎದೆಯನ್ನು ಝಲ್ಲೆನ್ನುವಂತೆ ಮಾಡುತ್ತದೆ ಇಲ್ಲಿನ ಹೋಳಿ.
ಉದಯಪುರ: ರಾಜಸ್ಥಾನ ಎಂದರೆ ಅಲ್ಲಿನ ರಾಯಲ್ ಲುಕ್ ನೆನಪಿಗೆ ಬರುತ್ತದೆ. ಇನ್ನು ಹೋಳಿ ಹಬ್ಬ ಎಂದರೆ ಕೇಳಬೇಕಾ? ಲಕ್ಸುರಿಯಾಗಿ ಹೋಳಿಯ ಸಂಭ್ರಮಾಚರಣೆಯಲ್ಲಿ ಭಾಗಿಯಾಗಬೇಕೆಂದರೆ ಉದಯಪುರಕ್ಕೆ ತೆರಳಬೇಕು. ಮೇವರ್ ರಾಜಮನೆತನದ ಕುಟುಂಬವಿಲ್ಲಿ ಸಂಭ್ರಮದಿಂದ ಹೋಳಿ ಆಚರಿಸುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 31, 2019, 3:32 PM IST