Asianet Suvarna News Asianet Suvarna News

ವಯಸ್ಸು ಏರ್ತಿದ್ದಂತೆ ಹೆಚ್ಚಾಗ್ತಿದೆ ನೃತ್ಯದಲ್ಲಿ ಆಸಕ್ತಿ: ಕಾರಣವೇನು ಗೊತ್ತಾ?

ವಯಸ್ಸು ಬರಿ ಲೆಕ್ಕಕ್ಕೆ ಮಾತ್ರ. ಉತ್ಸಾಹ ಮುಖ್ಯ. ಹಾಗೆಯೇ ಜೀವನವನ್ನು ಪ್ರೀತಿಸುವ ಕಲೆ ತಿಳಿದಿರಬೇಕು. ವಯಸ್ಸಾಯ್ತು ಅಂತಾ ಮನೆಯಲ್ಲಿ ಕುಳಿತು ಒಂಟಿತನ ಅನುಭವಿಸುವ ಬದಲು ಸಂತೋಷ ಸಿಗುವ ದಾರಿ ಹುಡುಕಿಕೊಳ್ಳಬೇಕು. ಇದಕ್ಕೆ ಏಷ್ಯನ್ – ಅಮೆರಿಕನ್ಸ್ ಉತ್ತಮ ನಿದರ್ಶನ.
 

Asian Old Age People Going To Dance Class
Author
First Published Jan 27, 2023, 1:19 PM IST

ವಯಸ್ಸು 60 ಆಗ್ತಿದ್ದಂತೆ ಜನರು ಹಿರಿಯ ನಾಗರಿಕರ ಸಾಲಿಗೆ ಸೇರ್ತಾರೆ. ನಿವೃತ್ತಿ ಘೋಷಣೆಯಾಗ್ತಿದ್ದಂತೆ ಮಕ್ಕಳ ಕೈಗೆ ಜವಾಬ್ದಾರಿ ನೀಡಿ ವಿಶ್ರಾಂತಿ ಮೂಡ್ ಗೆ ಹೋಗ್ತಿದ್ದ ಕಾಲವೊಂದಿತ್ತು.  ಆದ್ರೆ ಈಗಿನ ಕಾಲ ಬದಲಾಗಿದೆ. ನಿವೃತ್ತಿ ನಂತ್ರ ಜನರು ಸುಮ್ಮನೆ ಕುಳಿತುಕೊಳ್ತಿಲ್ಲ. ಜೀವನದ ಹೊಸ ಶಕೆ ಶುರು ಮಾಡ್ತಿದ್ದಾರೆ. ಮತ್ತೆ ಯೌವ್ವನದ ಹುಮ್ಮಸ್ಸಿಗೆ ಮರಳುತ್ತಿದ್ದಾರೆ. ಯಸ್. ಮುಕ್ಕಾಲು ಭಾಗ ಜೀವನವನ್ನು ಓದು, ವೃತ್ತಿ, ಮಕ್ಕಳ ಪಾಲನೆ, ವಿದ್ಯಾಭ್ಯಾಸದಲ್ಲಿ ಕಳೆದ ಪಾಲಕರು ಈಗ ತಮಗಾಗಿ ಜೀವನ ಸಾಗಿಸಲು ಮುಂದಾಗಿದ್ದಾರೆ. ಆರೋಗ್ಯದ ಜೊತೆ ಮನರಂಜನೆಗೆ ಹಿರಿಯ ನಾಗರಿಕರು ಹೆಚ್ಚು ಆದ್ಯತೆ ನೀಡ್ತಿದ್ದಾರೆ ಎಂಬುದು ಸತ್ಯ.

ಭಾರತ (India) ದಲ್ಲಿಯೇ ನಾವು ಈ ಬದಲಾವಣೆಯನ್ನು ನಿಧಾನವಾಗಿ ಕಾಣ್ತಿದ್ದೇವೆ. ಹಿಂದಿಗಿಂತ ಈಗ ಪಾರ್ಕ್ (Park) ಗಳಲ್ಲಿ ನೀವು 60 ವರ್ಷ ಮೇಲ್ಪಟ್ಟ ಜನರನ್ನು ನೋಡ್ಬಹುದು. ಹಾಗೆಯೇ ಮನರಂಜನಾ ಕಾರ್ಯಕ್ರಮಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇವರು ಪಾಲ್ಗೊಳ್ಳುತ್ತಿದ್ದಾರೆ. ಇದ್ರಲ್ಲಿ ಅಮೆರಿಕಾ ಮುಂದಿದೆ. ಅಮೆರಿಕಾದಲ್ಲಿರುವ ವೃದ್ಧ ಏಷ್ಯನ್ – ಅಮೆರಿಕನ್ ದಂಪತಿ, ಮಕ್ಕಳು ಹುಬ್ಬೇರಿಸುವಂತೆ ಮಾಡಿದ್ದಾರೆ. 

ಅಮೆರಿಕದ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಬಾಲ್ (Ball) ರೂಂ ನೃತ್ಯ (Dance) ತರಗತಿಗಳಲ್ಲಿ ಯುವಕರಿಗಿಂತ ವೃದ್ಧ ದಂಪತಿಯನ್ನು ಹೆಚ್ಚು ಕಾಣಬಹುದು. ಎಲ್ಲ ಚಿಂತೆ ಮರೆತು ಒಟ್ಟಿಗೆ ಬಾಲ್ ರೂಮಿನಲ್ಲಿ  ಕುಣಿಯುವ ಪಾಲಕರನ್ನು ನೋಡಿ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಅಪರಿಚಿತ ದೇಶಕ್ಕೆ ಬಂದು ಅಲ್ಲಿ ನೆಲೆ ನಿಲ್ಲಲು ಜೀವನ ಪರ್ಯಂತ ಹೋರಾಟ ನಡೆಸಿದ್ದ, ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಹೋರಾಟ ನಡೆಸಿ ತಮ್ಮ ಜೀವನದ ಸಂತೋಷ ತ್ಯಾಗ ಮಾಡಿದ್ದ ಏಷ್ಯನ್ – ಅಮೆರಿಕನ್ ದಂಪತಿ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಅಮೆರಿಕನ್ನರು ಪಾರ್ಟಿ, ಪ್ರವಾಸ ಮಾಡ್ತಿದ್ದ ಸಮಯದಲ್ಲಿ ಏಷ್ಯನ್ನರು ನೆಲೆ ನಿಲ್ಲುವ ಹೋರಾಟದಲ್ಲಿ ನಿರತರಾಗಿದ್ದರು. ಆದರೆ ಈಗ ಮಕ್ಕಳು ವೃತ್ತಿ ಶುರು ಮಾಡಿದ್ದು, ಇವರಿಗೆ ಕುಣಿದು ಕುಪ್ಪಳಿಸಲು ಅವಕಾಶ ಸಿಲ್ಲಿದೆ. ವರದಿಯೊಂದರ ಪ್ರಕಾರ, ಅಮೆರಿಕದ ಬಾಲ್ ರೂಂ ನೃತ್ಯ ತರಗತಿಗಳು ಏಷ್ಯನ್ – ಅಮೆರಿಕನ್ನರ್ ಸಂಖ್ಯೆ ಹೆಚ್ಚಿದೆ. ಈ ನೃತ್ಯ ತರಗತಿ ವೃದ್ಧರ ಒಂಟಿತನವನ್ನು ದೂರ ಮಾಡ್ತಿದೆ.

ಸಂತೋಷ ವ್ಯಕ್ತಪಡಿಸಿದ ಮಕ್ಕಳು : ಪಾಲಕರು ಕರೆ ಮಾಡಿ ನೃತ್ಯ ಶಾಲೆಗೆ ಸೇರಿರುವ ವಿಷ್ಯ ಹೇಳ್ತಿದ್ದಂತೆ ಮಕ್ಕಳು ಖುಷಿಯಾಗಿದ್ದಾರಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವ್ಯಕ್ತಿಯೊಬ್ಬ, ತಂದೆ – ತಾಯಿ ನೃತ್ಯ ಮಾಡಿದ್ದನ್ನು ನಾನು ಹೆಚ್ಚಾಗಿ ನೋಡಿರಲಿಲ್ಲ. ಈಗ ನೃತ್ಯ ತರಬೇತಿಗೆ ಸೇರಿರೋದು ಖುಷಿ ತಂದಿದೆ. ಕೌಂಟಿಯಲ್ಲಿ ವಾಸಿಸುವ ಪಾಲಕರು ಮಾತ್ರವಲ್ಲ ಟೆಕ್ಸಾಸ್‌ನಲ್ಲಿ ವಾಸಿಸುವ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೂಡ ಬಾಲ್ ರೂಂ ನೃತ್ಯ ತರಗತಿ ತೆಗೆದುಕೊಳ್ತಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಗಿದೆ ಎನ್ನುತ್ತಾನೆ.

Relationship Tips: ನಾನ್ಯಾಕೆ ಒಂಟಿ? ಈ ಪ್ರಶ್ನೆ ಕಾಡ್ತಿದ್ರೆ ಇದನ್ನೋದಿ

ಬದಲಾದ ಪೋಷಕರು : ಈಗಿನ ಯುವ ಜನರು ಮಾತ್ರವಲ್ಲ ಪೋಷಕರ ಪೀಳಿಗೆಯೂ ಬದಲಾಗುತ್ತಿದೆ. ಅವರ ಆತ್ಮವಿಶ್ವಾಸ ಹೆಚ್ಚಿದೆ. ಅವರು ಹೆಚ್ಚು ಆರಾಮದಾಯಗವಾಗಿ ಕಾಲ ಕಳೆಯುತ್ತಿದ್ದಾರೆ. ನಮ್ಮ ಬಗ್ಗೆ ಜನರು ಏನು ಯೋಚಿಸಬಹುದು ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಿಲ್ಲ. ಮುಂದಿನ ಜೀವನವನ್ನು ಸಂತೋಷವಾಗಿ ಕಳೆಯುವ ದೃಢ ಸಂಕಲ್ಪ ಮಾಡಿದಂತಿದೆ. ಜೀವನವನ್ನು ಪ್ರೀತಿಸುವ ಕಲೆ ತಿಳಿಯುತ್ತಿದ್ದಾರೆ. 

ಚಳಿಗಾಲದಲ್ಲಿ ಮಂಡಿನೋವು, ಕೀಲುನೋವಿಂದ ಪಾರಾಗೋದು ಹೇಗೆ?

ಬಾಲ್ ರೂಂ ನೃತ್ಯವೆಂದರೇನು? : ಯುರೋಪ್ ನಲ್ಲಿ ಹುಟ್ಟಿಕೊಂಡು ಒಂದು ರೀತಿಯ ನೃತ್ಯ ಶೈಲಿ ಬಾಲ್ ರೂಂ ನೃತ್ಯವಾಗಿದೆ. ವೃತ್ತಿಪರರಲ್ಲದ ಜೋಡಿ ಇದ್ರಲ್ಲಿ ನೃತ್ಯ ಮಾಡ್ತಾರೆ. ಶಾಸ್ತ್ರೀಯ ಸಂಗೀತಕ್ಕೆ ಇಲ್ಲಿ ಪ್ರಾಮುಖ್ಯತೆಯಿದೆ. ಆದ್ರೆ ಈಗ ಈ ಬಾಲ್ ರೂಂ ನೃತ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

Follow Us:
Download App:
  • android
  • ios