ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ದಿನವೊಂದಕ್ಕೆ ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಸಾಯುವವರು 30 ಲಕ್ಷಕ್ಕೂ ಹೆಚ್ಚು ಮಂದಿ! ಕೆಟ್ಟ ಜೀವನಶೈಲಿ ಹಾಗೂ ವಿಷಾನಿಲ ಸೇವನೆ ಇದಕ್ಕೆ ಪ್ರಮುಖ ಕಾರಣ. ಇದರಿಂದ ಉಸಿರಾಟ ಸಮಸ್ಯೆ ಹಾಗೂ ಹಲವಾರು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ.

ಕ್ಯಾನ್ಸರ್‌ಗೆ ಕೀಮೋಥೆರಪಿಗಿಂತ ಶುಂಠಿ ಟೀ ಬೆಸ್ಟ್?!

ಹಾಗಾಗಿ ನಾವು ಯಾವಾಗಲೂ ಅಲರ್ಟ್ ಆಗಿಯೇ ಇದ್ದು ಶ್ವಾಸಕೋಶಗಳ ಆರೋಗ್ಯ ಕಾಪಾಡುವಂಥ ಆಹಾರಗಳನ್ನು ನಮ್ಮ ಡಯಟ್‌ನಲ್ಲಿ ಹೆಚ್ಚಾಗಿ ಸೇವಿಸಬೇಕು ಹಾಗೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಇದರಿಂದ ಶಸ್ತ್ರಕ್ರಿಯೆ ಜೊತೆಗೆ ವೈದ್ಯರ ಖರ್ಚನ್ನೂ ಉಳಿಸಬಹುದು! 

ಹಾಗಿದ್ದರೆ ಶ್ವಾಸಕೋಶದ ಆರೋಗ್ಯ ಕಾಪಾಡುವ ಆಹಾರಗಳ್ಯಾವುವು ಗೊತ್ತಾ?

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ಅಲ್ಲಿಸಿನ್ ಎಂಬ ಫೈಟೋನ್ಯೂಟ್ರಿಯೆಂಟ್ ನಮಗೆ ಹಲವಾರು ಆರೋಗ್ಯ ಲಾಭಗಳನ್ನು ತಂದುಕೊಡುತ್ತದೆ. ಇದರಲ್ಲಿ ಕ್ರಿಮಿನಾಶಕ, ಕ್ಯಾನ್ಸರ್‌ವಿರೋಧಿ ಹಾಗೂ ಬಿಪಿ ತಗ್ಗಿಸುವ ಗುಣಗಳಿವೆ. ಶ್ವಾಸಕೋಶದ ಸಮಸ್ಯೆ ಹಾಗೂ ಲಂಗ್ ಕ್ಯಾನ್ಸರ್ ಇರುವ ರೋಗಿಗಳಲ್ಲಿ ಬೆಳ್ಳುಳ್ಳಿ ಅಧಿಕ ಸೇವನೆಯಿಂದಾಗಿ ಪಾಸಿಟಿವ್ ಬದಲಾವಣೆಗಳು ಬಂದಿದ್ದನ್ನು ಚೀನಾದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆಹಾರದ ಮೂಲಕ ದಿನಕ್ಕೆ 2-3 ಬೆಳ್ಳುಳ್ಳಿ ಎಸುಳುಗಳ ಸೇವನೆ ಅಭ್ಯಾಸ ಮಾಡಿಕೊಳ್ಳಿ. 

ಪಾಲಕ್

ಪಾಲಕ್ ಹಾಗೂ ಇತರೆ ಗಾಢ ಹಸಿರು ಬಣ್ಣದ ಸೊಪ್ಪು ಮತ್ತು ತರಕಾರಿಗಳು ವಿಟಮಿನ್ ಹಾಗೂ ಮಿನರಲ್‌ಗಳ ಆಗರ. ಇದರಲ್ಲಿರುವ ಫೈಟೋಕೆಮಿಕಲ್‌ಗಳು ಉರಿಯೂತ ಕಡಿಮೆ ಮಾಡಿ, ಆಕ್ಸಿಡೇಟಿವ್ ಹಾನಿ ತಪ್ಪಿಸಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ. ದಿನಕ್ಕೊಂದು ಕಪ್ ಪಾಲಕ್ ಸೇವನೆ ಶ್ವಾಸಕೋಶದ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

 ಲಿವರ್ ಸ್ವಚ್ಛತೆಗೆ ಲಿಕ್ವಿಡ್ ಫಾರ್ಮುಲಾ!

ಸೇಬುಹಣ್ಣು

ಸೇಬುವಿನಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹಾಗೂ ಕ್ಯಾಟೆಚಿನ್, ಕ್ಲೋರೋಜೆನಿಕ್ ಆ್ಯಸಿಡ್, ಫೋರಿಡ್ಜಿನ್‌ನಂಥ ಫೈಟೋಕೆಮಿಕಲ್‌ಗಳು ಅದಿಕವಾಗಿವೆ. ಇವು ಅಸ್ತಮಾ, ಕ್ಯಾನ್ಸರ್, ಉಸಿರಾಟ ಸಮಸ್ಯೆಗಳು ಹಾಗೂ ಹೃದಯ ರೋಗಗಳು ಬರದಂತೆ ತಡೆವಲ್ಲಿ ಸಾಕಷ್ಟು ಪರಿಣಾಮಕಾರಿ. ದಿನಕ್ಕೊಂದು ಸೇಬು ತಿನ್ನುವುದು ರೂಢಿಸಿಕೊಳ್ಳಿ. 

ಶುಂಠಿ

ಶೀತ ಹಾಗೂ ಕೆಮ್ಮಿನ ಉಪಶಮನಕ್ಕೆ ಶುಂಠಿ ಬಳಕೆ ಮಾಡುವುದು ನಿಮಗೆ ಗೊತ್ತೇ ಇದೆ. ಇದರಲ್ಲಿರುವ ಬಯೋಆ್ಯಕ್ಟಿವ್ ಕಾಂಪೌಂಡ್ ಜಿಂಜೆರಾಲ್ ಇದರ ಖಾರಕ್ಕೆ ಕಾರಣ. ಇದು ಅಸ್ತಮಾ, ಕೋಲ್ಡ್, ಮೈಗ್ರೇನ್ ಹಾಗೂ ಹೈಪರ್‌ಟೆನ್ಷನ್ ತಡೆಯಬಲ್ಲದು. ಇದನ್ನು ಬೆಳಗ್ಗೆದ್ದ ಕೂಡಲೇ ಜಜ್ಜಿ ನೀರಿಗೆ ರಸ ಹಿಂಡಿಕೊಂಡು ಕುಡಿಯುವುದರಿಂದ ಡಿಟಾಕ್ಸ್ ವಾಟರ್ ಕೂಡಾ ರೆಡಿ, ಶುಂಠಿಯ ಸೇವನೆಯೂ ಆದಂತಾಗುತ್ತದೆ. 

ರೆಡ್ ಮೀಟ್ ತಿಂದ್ರೆ ಕಿಡ್ನಿಯಲ್ಲಿ ಕಲ್ಲುಂಟಾಗುತ್ತಾ?

ಏಪ್ರಿಕಾಟ್

ಸಿಹಿಯಾದ ಏಪ್ರಿಕಾಟ್‌ಗಳು ರುಚಿಯಷ್ಟೇ ಅಲ್ಲ, ಶ್ವಾಸಕೋಶದ ರಕ್ಷಕರು ಕೂಡಾ. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ, ಇ, ಬೀಟಾ ಕ್ಯಾರೋಟಿನ್ ಹಾಗೂ ಲೈಕೋಪೀನ್‌ಗಳಿದ್ದು ಇವೆಲ್ಲವೂ ಅಪಾಯಕಾರಿ ಫ್ರೀ ಆಕ್ಸಿಜನ್ ರ್ಯಾಡಿಕಲ್ಸ್‌ನಿಂದ ರಕ್ಷಿಸುತ್ತವೆ. ಏಪ್ರಿಕಾಟ್ ಆ್ಯಂಟಿ ಅಲರ್ಜಿಕ್, ಆ್ಯಂಟಿ ಮೈಕ್ರೋಬಿಯಲ್ ಕೂಡಾ ಆಗಿದ್ದು ಅಲರ್ಜಿ ಕೆಮ್ಮು, ಉಸಿರಾಟದ ಸಮಸ್ಯೆಗಳನ್ನು ತಡೆಯುತ್ತದೆ. ಸ್ಮೂತಿ ಅಥವಾ ಸಲಾಡ್‌ನಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. 

ಬ್ರೊಕೋಲಿ

ಇದನ್ನು ಎಲ್ಲ ಆಹಾರಗಳ ರಾಜ ಎಂದೇ ಕರೆಯಬಹುದು. ಇದರಲ್ಲಿ ಸಲ್ಫೋರಾಫೇನ್ ಇದ್ದು ಅದು ಉತ್ತಮ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಇನ್ಫ್ಲಮೇಟರಿ, ಆ್ಯಂಟಿಕ್ಯಾನ್ಸರ್, ಆ್ಯಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿದೆ. ಇದು ಶ್ವಾಸಕೋಶ ಹೊಟ್ಟೆ ಹಾಗೂ ಸ್ತನ ಕ್ಯಾನ್ಸರ್ ತಡೆಯುತ್ತದೆ. ಪ್ರತಿ ಎರಡು ದಿನಗಳಿಗೊಮ್ಮೆ ಬ್ರೊಕೊಲಿ ಸಲಾಡ್ ಸೇವಿಸಿ. 

ದ್ರಾಕ್ಷಿಹಣ್ಣು

ತೂಕ ಇಳಿಸುವ ಮ್ಯಾಜಿಕ್‌ ಗುಣಕ್ಕೆ ದ್ರಾಕ್ಷಿ ಹಣ್ಣು ಹೆಸರುವಾಸಿ. ಅದಲ್ಲದೆಯೂ ಈ ಲೋ ಕ್ಯಾಲೋರಿ ಹಣ್ಣು ಹಲವಾರು ಆರೋಗ್ಯ ಲಾಭಗಳನ್ನು ತಂದುಕೊಡಬಲ್ಲದು. ಇದರಲ್ಲಿ ವಿಟಮಿನ್ ಸಿ, ಬಿ6, ಥೈಮಿನ್, ಫೋಲಿಕ್ ಆ್ಯಸಿಡ್, ಮೆಗ್ನೀಶಿಯಂ ಹೇರಳವಾಗಿದ್ದು, ಫ್ಲೇವೋನ್, ನರಿಂಜೆನಿನ್‌‌ಗಳು ದೇಹದಿಂದ ಟಾಕ್ಸಿನ್ಸ್ ಹೊರ ಹಾಕಿ ಉಸಿರಾಟ ಪ್ರಕ್ರಿಯೆ ಸುಲಭವಾಗಿ ನಡೆಯುವಂತೆ ಮಾಡುತ್ತದೆ. 

ಅರಿಶಿನ

ಅರಿಶಿನವನ್ನು ಬಹಳ ಹಿಂದಿನಿಂದಲೂ ಹಲವಾರು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತಲೇ ಇದೆ. ಇದರಲ್ಲಿರುವ ಕರ್ಕುಮಿನ್ ಇದರೆಲ್ಲ ಒಳ್ಳೆಯ ಗುಣಗಳಿಗೆ ಕಾರಣ. ಇದು ಬೊಜ್ಜು, ಕ್ಯಾನ್ಸರ್ ಹಾಗೂ ಅಲರ್ಜಿಕ್ ಸಮಸ್ಯೆಗಳ ವಿರುದ್ಧ ಹೋರೀಡುತ್ತದೆ. ಅಡಿಗೆಯಲ್ಲಿ, ಹಾಲಿನಲ್ಲಿ ಅರಿಶಿನ ಹೆಚ್ಚಾಗಿ ಬಳಸಿ. 

ಬೆಣ್ಣೆ ಹಣ್ಣು

ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್‌ನಿಂದ ತುಂಬಿರುವ ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಇ, ಕೆ, ಬಿ6, ರೈಬೋಫ್ಲೇವವಿನ್, ಪ್ಯಾಂಟೋತೆನಿಕ್ ಆ್ಯಸಿಡ್ ಹಾಗೂ ನಿಯಾಸಿನ್ ಅಧಿಕವಾಗಿರುತ್ತವೆ. ಈ ವಿಟಮಿನ್‌ಗಳು ಶ್ವಾಸಕೋಶದ ಆರೋಗ್ಯ ಕಾಪಾಡಲು ಸಹಾಯಕ. ಆರ್ಥ್ರೈಟಿಸ್‌ ಕಡಿಮೆ ಮಾಡುವ ತಾಕತ್ತು ಕೂಡಾ ಇದಕ್ಕಿದೆ.