ಮಹಿಳೆಯರ  ವಾರ್ಡ್ ರೋಬನ್ನು ಟ್ರೆಷರ್ ಹಂಟ್ ಎನ್ನಬಹುದು. ಹಳೇ ಬ್ರಾದಿಂದ ಹಿಡಿದು ತುಂಡಾದ ಜುವೆಲ್ಲರಿಯವರೆಗೆ ಎಲ್ಲವೂ ಅದರಲ್ಲಿರುತ್ತದೆ. ಬಳಸದ ವಸ್ತುಗಳೇ ವಾರ್ಡ್ ರೋಬಿನಲ್ಲಿ ಹೆಚ್ಚು ಜಾಗ ತಿಂದಿರುತ್ತದೆ. ಅಂಥ ವಸ್ತುಗಳನ್ನು ಹೊರ ಹಾಕಿದರೆ, ವಾರ್ಡ್ ರೋಬ್ ಕ್ಲೀನ್ ಇಟ್ಟುಕೊಳ್ಳಬಹುದು, ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಬಳಸದ ಯಾವುದೇ ವಸ್ತುವಾದರೂ ಸರಿ ಎಸೆಯುವುದು ಒಳ್ಳೆ ಅಭ್ಯಾಸ.

ಹಳೆ ಚಪ್ಪಲ್ 

ಮಹಿಳೆಯರ ವಾರ್ಡ್ ರೋಬ್‌ನಲ್ಲಿ ಹತ್ತಾರು ಚಪ್ಪಲ್ ಇರುತ್ತವೆ. ಯಾವ ಫುಟ್ ವೇರ್ ನಿಮಗೆ ಸರಿ ಆಗುವುದಿಲ್ಲವೋ ಅಥವಾ ಕೆಲವು ಚಪ್ಪಲ್ ಹಾಕಿದಾಗ ಗಾಯವಾಗುತ್ತದೆಯೋ ಅದನ್ನು ಬಿಸಾಡಿ. ಜೊತೆಗೆ ಫ್ಯಾಷನ್‌ನಲ್ಲಿ ಇಲ್ಲದ ಹಳೆ ಶೂ, ಫುಟ್ ವೇರ್ ಬೇಡವೇ ಬೇಡ. 

ಡ್ರೆಸ್ ಇಷ್ಟಿದ್ದರೆ ಟ್ರೆಂಡ್ ಫಾಲೋ ಮಾಡೋದು ಸುಲಭ...

ಹಳೆ ಡ್ರೆಸ್‌ಗಳು

ಯಾವತ್ತೋ ತಂದ ಡ್ರೆಸ್ ನಿಮಗೆ ಫಿಟ್ ಆಗದಿರಬಹುದು. ಆದರೆ ಆ ಡ್ರೆಸ್ ಇಷ್ಟವೆಂದು ಹಾಗೆ ಇಡೋದು ಸರೀನಾ? ನಿಮಗೆ ಫಿಟ್ ಆಗದ ಡ್ರೆಸ್ಸನ್ನು ಬಿಸಾಕಿ. ಅಥವಾ ಯಾರಿಗಾದರೂ ಕೊಡಿ. ಅದರ ಬದಲಿಗೆ ಹೊಸ ಡ್ರೆಸ್ ಖರೀದಿಸಿ. 

ಲೂಸ್ ಆಗಿರೋ ಬ್ರಾ

ಲೂಸ್ ಬ್ರಾ ಧರಿಸುವುದು ಕೇವಲ ನಿಮ್ಮ ದೇಹದ ಶೇಪ್ ಹಾಳು ಮಾಡುವುದು ಮಾತ್ರವಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಅದರ ಸ್ಟ್ರಿಪ್ ಅಲ್ಲಿ ಇಲ್ಲಿ ಇಣುಕಿದರೆ ನಿಮ್ಮ ವ್ಯಕ್ತಿತ್ವಕ್ಕೇ ಕುತ್ತು. ಇಂಥ ಒಳ ಉಡುಪನ್ನು ಇಟ್ಟು ಕೊಳ್ಳಲೇ ಬೇಡಿ. 

ಜೊತೆ ಇಲ್ಲದ ಸಾಕ್ಸ್ 

ಒಂಟಿಯಾಗಿ ಆ ಸಾಕ್ಸ್ ಸಹ ಎಷ್ಟು ದಿನವೆಂದು ನಿಮ್ಮ ಜತೆ ಇರಬೇಕು ಹೇಳಿ? ಅದಕ್ಕೂ ಮುಕ್ತಿ ಕೊಡಿ. ಒಂದೇ ಒಂದು ಸಾಕ್ಸನ್ನೂ ಇಟ್ಟುಕೊಂಡು ಮಾಡುವುದಾದರೂ ಏನು? ಬಿಸಾಕಲೇಕೆ ಯೋಚಿಸುವುದು?

ವಿಶ್ವಾಸ ಹೆಚ್ಚಿಸೋ ಇಂಥ ಬ್ರಾ ಇರಲಿ ನಿಮ್ಮ ವಾಡ್ರೋಬಿನಲ್ಲಿ!

ಎಕ್ಸ್ ಪೈರ್ ಆದ ಮೇಕಪ್

ಮಸ್ಕರಾ ಮೂರು ತಿಂಗಳಲ್ಲಿ ಎಕ್ಸ್‌ಪೈರ್ ಆಗುತ್ತದೆ. ಕನ್ಸಿಲರ್ ಮತ್ತು ಲಿಕ್ವಿಡ್ ಫೌಂಡೇಶನ್ ಉತ್ಪಾದನೆಯಾದ ಆರು ತಿಂಗಳಲ್ಲಿ ಬಳಸಬೇಕು.  ಆದುದರಿಂದ ನೀವು ಯಾವುದೇ ಮೇಕಪ್ ವಸ್ತುಗಳನ್ನೂ ಬಳಸುವಾಗಲೂ  ಮೊದಲಿಗೆ ಅದರ ಎಕ್ಸ್‌ಪೈರ್ ಡೇಟ್ ಚೆಕ್ ಮಾಡಿ. ಇಲ್ಲವಾದರೆ ತ್ವಚಾ ಸಮಸ್ಯೆ ಕಾಡುತ್ತದೆ.