Asianet Suvarna News Asianet Suvarna News

ಅರ್ಧದಷ್ಟು ಮಹಿಳೆಯರಿಗೆ ಅವರ ಗುಪ್ತಾಂಗವೆಲ್ಲಿದೆ ಎಂಬುವುದೇ ಗೊತ್ತಿಲ್ಲ!

ಮನುಷ್ಯನ ದೇಹ ಬಹಳ ಅದ್ಭುತವಾದುದು. ಅದೆಷ್ಟೊಂದು ಸಂಕೀರ್ಣವಾದ ಸಂಪರ್ಕಗಳನ್ನು, ಅಂಗಾಂಗಗಳನ್ನು ಹೊಂದಿದೆ ಎಂಬುದರ ಆಳ ಅಧ್ಯಯನ ಮಾಡಿದರೆ, ಇಂಥದೊಂದು ಅದ್ಭುತವನ್ನು ಸೃಷ್ಟಿಸಲಾದರೂ ದೇವರಿರಲೇಬೇಕು ಎಂದು ನಾಸ್ತಿಕನೂ ನಂಬಬೇಕು! ಅಂದ ಹಾಗೆ, ಮಹಿಳೆಯರ ದೇಹದ ಕುರಿತ ಕೆಲ ಆಶ್ಚರ್ಯಕರ ವಿಷಯಗಳು ಇಲ್ಲಿವೆ ಓದಿ...

6 Shocking facts about female body
Author
Bangalore, First Published Sep 18, 2019, 2:50 PM IST

ಮನುಷ್ಯನ ದೇಹ ಅದೆಷ್ಟು ಸಂಕೀರ್ಣ ರಚನೆಯೋ ಅಷ್ಟೇ ಕುತೂಹಲಕಾರಿ ಕೂಡಾ. ಆದರೆ, ನಾವೆಂಥ ದಡ್ಡರೆಂದರೆ ಏನೇನೋ ಓದಿ ಡಬಲ್ ಡಿಗ್ರಿ ಪಡೆದುಕೊಳ್ಳುತ್ತೇವೆ. ಆದರೆ, ನಮ್ಮದೇ ದೇಹದ ಕುರಿತ ವಿಷಯಗಳು ನಮಗೆ ತಿಳಿದಿರುವುದೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಂಗಾಂಗಗಳ ಪರಿಚಯವೇ ನಮಗಿಲ್ಲ ಎಂದರೆ, ಆರೋಗ್ಯದ ದೃಷ್ಟಿಯಿಂದ ಕೂಡಾ ಇದು ಒಳ್ಳೆಯದಲ್ಲ. 

1. ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಅಳುತ್ತಾರೆ.

ಇದು ಎಲ್ಲರಿಗೂ ಗೊತ್ತಿರುವುದೇ. ಈ ಬಗ್ಗೆ ನೆದರ್‌ಲ್ಯಾಂಡ್ಸ್‌ನ ಟಿಲ್ಬರ್ಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲಲ್ಲಿ ಮಹಿಳೆಯರು ತಿಂಗಳಲ್ಲಿ ಸರಾಸರಿ 2ರಿಂದ 5 ಬಾರಿ ಅಳುತ್ತಾರೆ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲ, ಪುರುಷರಿಗಿಂತ 3ರಿಂದ 5 ಪಟ್ಟು ಹೆಚ್ಚು ಬಾರಿ ಅಳುತ್ತಾರೆ. ಹಾಗಂತ ಮಹಿಳೆಯರೇನು ಚಟಕ್ಕೆ ಅಳುವುದಿಲ್ಲ. ಅವರ ದೇಹದ ವಿಜ್ಞಾನ ರೂಪಿತವಾಗಿರುವುದೇ ಹಾಗೆ.

ಮಗಳಿಗೆ ಮಾತ್ರವಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಮಹಿಳೆಯರ ರಿಪ್ರೊಡಕ್ಟಿವ್ ಹಾರ್ಮೋನ್ ಅವರು ಸಣ್ಣಪುಟ್ಟ ಕಾರಣಗಳಿಗೂ ಬೇಗ ಅಳುವಂತೆ ಮಾಡುತ್ತದೆ. ಪುರುಷರಲ್ಲಿ ಹೆಚ್ಚಾಗಿರುವ ಟೆಸ್ಟೆಸ್ಟೆರೋನ್ ಹಾರ್ಮೋನ್ ಅವರನ್ನು ಹೆಚ್ಚಾಗಿ ಅಳದಂತೆ ನಿಯಂತ್ರಿಸುತ್ತದೆ. ಇದೇ ಅಲ್ಲದೆ, ಮಹಿಳೆಯರು ಅತಿಯಾದ ಭಾವನೆಗಳನ್ನು ಹೊರಡಿಸುವಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕೂಡಾ ಹೆಚ್ಚು. ಉದಾಹರಣೆಗೆ ಪುರುಷರು ಕ್ರಿಕೆಟ್ ಮತ್ತಿತರೆ ಕ್ರೀಡೆ ನೋಡಿದರೆ ಮಹಿಳೆಯರು ಒಂದು ದುಃಖದ ಚಿತ್ರವನ್ನು ನೋಡಲು ಹೆಚ್ಚು ಇಷ್ಟ ಪಡುತ್ತಾರೆ. 

2. ಕೆಲ ಮಹಿಳೆಯರಲ್ಲಿ ಎರಡು ಗರ್ಭಕೋಶಗಳಿರುತ್ತವೆ. 

ನೀವು ಮಹಿಳೆಯಾಗಿದ್ದರೆ, ಒಂದು ಗರ್ಭಕೋಶವೇ ನಿಮ್ಮನ್ನು ಸಾಕು ಬಡಿಸಿರುತ್ತದೆ. ಇನ್ನು ಎರಡೆರಡು ಇದ್ದರೆ? ಆದರೆ, ಕೆಲ ಮಹಿಳೆಯರಿಗೆ ಎರಡು ಗರ್ಭಕೋಶಗಳು ಮಾತ್ರವಲ್ಲ ಎರಡೆರಡು ಯೋನಿಗಳು ಕೂಡಾ ಇರುತ್ತವೆ! ವಿಷಯವೆಂದರೆ ಎಲ್ಲ ಹೆಣ್ಣುಮಗು ಹುಟ್ಟುವಾಗ ಎರಡು ಗರ್ಭಕೋಶ, ಎರಡು ಯೋನಿ, ಎರಡು ಸರ್ವಿಕ್ಸ್ ಇರುತ್ತದೆ.

'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್‌ಗೆ ಸಡ್ಡು ಹೊಡೆದ ಅಕ್ಷಯಾ

ಇವುಗಳ ಮಧ್ಯೆ ಒಂದು ತಾತ್ಕಾಲಿಕ ಗೋಡೆ ಇರುತ್ತದೆ. ಬೆಳೆಯುತ್ತಾ ಹೋದಂತೆಲ್ಲ ಆ ಗೋಡೆ ಹೋಗಿ ಇವರೆಡು ಸೇರಿ ಒಂದಾಗುತ್ತವೆ. ಆದರೆ, ಶೇ.3ರಷ್ಟು ಹೆಣ್ಣುಮಕ್ಕಳಲ್ಲಿ ಮಾತ್ರ ಈ ಗೋಡೆ ಗಟ್ಟಿಯಾಗಿ ನಿಂತುಬಿಡುತ್ತದೆ. ಹೀಗೆ ಎರಡೆರಡು ಯೋನಿಯಿದ್ದ ಮಹಿಳೆಯು ಲೈಂಗಿಕ ಕ್ರಿಯೆಗೆ ಕೂಡಾ ಬೇಕಾದ್ದನ್ನು ಬಳಸಿಕೊಳ್ಳಬಹುದು. 

3. ಮಹಿಳೆಯರಿಗೆ ಕೆಟ್ಟ ಕನಸುಗಳು ಜಾಸ್ತಿ

ವೆಸ್ಟ್ ಇಂಗ್ಲೆಂಡ್ ಯೂನಿವರ್ಸಿಟಿಯ ಡಾ. ಜೆನ್ನಿ ಪಾರ್ಕರ್ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಮಹಿಳೆಯರಲ್ಲಿ ಭಾವನೆಗಳು ಅಧಿಕವಾದ ಕಾರಣ, ಅವರಿಗೆ ಕೆಟ್ಟ ಕನಸುಗಳು ಬೀಳುವುದು ಕೂಡಾ ಹೆಚ್ಚು ಎಂದು ಪಾರ್ಕರ್ ತಿಳಿಸಿದ್ದಾರೆ. ಯಾರೋ ಬೆರೆಸಿಕೊಂಡು ಬಂದಂತೆ, ಜೀವಕ್ಕೆ ತೊಂದರೆಯಾದಂತೆ, ಪ್ರೀತಿಪಾತ್ರರನ್ನು ಕಳೆದುಕೊಂಡಂತೆ ಹಾಗೂ ಗೊಂದಲಮಯ ಕನಸುಗಳು ಮಹಿಳೆಯರಲ್ಲಿ ಜಾಸ್ತಿ. \

4. ಮಹಿಳೆಯರು ಸೂಪರ್ ಫ್ಲೆಕ್ಸಿಬಲ್

ಯಾಗ ನಿಮ್ಮನ್ನು ಬೇಕಾದಂತೆ ಬೆಂಡ್ ಮಾಡುವಂತೆ ರೂಪಿಸುತ್ತದೆ ಎಂದುಕೊಳ್ಳಬೇಡಿ. ಮಹಿಳೆಯರ ಹುಟ್ಟು ವ್ಯವಸ್ಥೆಯೇ ಹಾಗಿದೆ. ಮಹಿಳೆಯರ ಕೆಳಭಾಗ ಪುರುಷರಿಗಿಂತ ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಈ ಕೆಳಭಾಗ ಫ್ಲೆಕ್ಸಿಬಲ್ ಆಗಿರದಿದ್ದರೆ ಮಗುವಂಥ ದೊಡ್ಡದೊಂದು ಜೀವವನ್ನು ಹೊಟ್ಟೆಯಲಲ್ಲಿಟ್ಟುಕೊಂಡು ನಾರ್ಮಲ್ ಕೆಲಸಕಾರ್ಯಗಳನ್ನು ಮಾಡಿಕೊಂಡಿರುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಎವಲ್ಯೂಶನ್‌ನ ನಿರಂತರ ಪ್ರಕ್ರಿಯೆಯಲ್ಲಿ ಸೊಂಟ ಬಳಕುವ ಬಳ್ಳಿಯಾಗಿದೆ. 

ಗರ್ಭಿಣಿಯರಲ್ಲಿ ಮೂತ್ರನಾಳ ಸೋಂಕು; ಏನು, ಹೇಗೆ, ಪರಿಹಾರವೇನು?

5. ಮಹಿಳೆಯರ ಇಂದ್ರಿಯಗಳು ಹೆಚ್ಚು ಶಾರ್ಪ್

ಪುರುಷರು ಮಹಿಳೆಯರಿಗಿಂತಲೂ ಎಲ್ಲದರಲ್ಲೂ ಒಂದು ಕೈ ಮೇಲೆ ಎಂದು ಮುಂಚಿನಿಂದ ನಂಬಿ ಬರಲಾಗಿದೆ. ಆದರೆ, ಇಂದ್ರಿಯಗಳ ವಿಷಯಕ್ಕೆ ಬಂದರೆ ವಿಜ್ಞಾನ ಕೂಡಾ ಮಹಿಳೆಯರ ಕಡೆಗೆ ನಿಲ್ಲುತ್ತದೆ. ವಯಸ್ಸಾದಂತೆಲ್ಲ ಪುರುಷರು ಮಹಿಳೆಯರಿಗಿಂತ ಐದೂವರೆ ಪಟ್ಟು ಹೆಚ್ಚು ಸುಲಭವಾಗಿ ಕಲರ್ ಬ್ಲೈಂಡ್‌ನೆಸ್ ಹಾಗೂ ಕಿವುಡುತನಕ್ಕೆ ಒಳಗಾಗುತ್ತಾರೆ. ಒಂದು ವೇಳೆ ನಿಮ್ಮ ಗಂಡ ನಿಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲವೆಂಬುದು ನಿಮ್ಮ ಅಳಲಾಗಿದ್ದರೆ ಅವರು ಈಗಾಗಲೇ ಕಿವುಡರಾಗಿರಬೇಕು ಪರೀಕ್ಷಿಸಿ ನೋಡಿ! ದೇಹದ ವಾಸನೆಯನ್ನು ಕೂಡಾ ಮಹಿಳೆಯರು ಹೆಚ್ಚು ಸುಲಭವಾಗಿ ಗ್ರಹಿಸಬಲ್ಲರು.

ಯುವಕರಷ್ಟೇ ಯುವತಿಯರಿಗೂ ಇಷ್ಟ ಪೋರ್ನ್: ಅಧ್ಯಯನ

6. ಮಹಿಳೆಯರಲ್ಲಿ ಅರ್ಧದಷ್ಟು ಜನರಿಗೆ ಅವರ ಗುಪ್ತಾಂಗಗಳು ಎಲ್ಲಿವೆ ಎಂಬುದೇ ಗೊತ್ತಿರುವುದಿಲ್ಲ!

ನಂಬಲಸಾಧ್ಯವಾದರೂ ಇದು ನಿಜ. ಅರ್ಧದಷ್ಟು ಮಹಿಳೆಯರಿಗೆ ಕೆಳಗೆ ಎರಡು ಹೋಲ್ ಇರುತ್ತದೆ ಎಂಬುದೇ ತಿಳಿದಿರುವುದಿಲ್ಲ. ಒಂದು ವೆಜೈನಾ ಮತ್ತೊಂದು ಮೂತ್ರ ಪಾಸ್ ಮಾಡಲು. ಅಷ್ಟೇ ಅಲ್ಲ, ಕೆಳಗಿನ 6 ಅಂಗಗಳನ್ನು ಕೇವಲ ಮೂರರಲ್ಲಿ ಒಬ್ಬರು ಮಾತ್ರ ಗುರುತಿಸಬಲ್ಲರು! 

Follow Us:
Download App:
  • android
  • ios