Asianet Suvarna News Asianet Suvarna News

ಕಾಲಿಗೆ ಸರಪಳಿ ಕಟ್ಟಿ ನದೀಲಿ 3 ಗಂಟೆ ಈಜಿದ ಯುವಕ

ಕಾಲಿಗೆ ಸರಪಳಿಕಟ್ಟಿಕೊಂಡು ಯುವಕನೋರ್ವ ಮೂರು ಗಂಟೆ ನದಿಯಲ್ಲಿ ಈಜಿ ಅಪರೂಪದ ಸಾಧನೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

Youth Swim 25 kilometer in 3 hours in Kundapura
Author
Bengaluru, First Published Dec 2, 2019, 10:09 AM IST

ಕುಂದಾಪುರ [ನ.02]:  ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಸಂಪತ್‌ ಡಿ. ಖಾರ್ವಿ ಕಾಲಿಗೆ ಸರಪಳಿ ಕಟ್ಟಿಕೊಂಡು 25 ಕಿ.ಮೀ. ನದಿ​ಯಲ್ಲಿ ಈಜಿ ಸಾಧನೆ ಮಾಡಿದ್ದಾರೆ. 

ಪಂಚ ಗಂಗಾ​ವಳಿ ನದಿಯಲ್ಲಿ ಬಸ್ರೂರು ರೈಲು ಸೇತುವೆ ಬಳಿಯಿಂದ ಗಂಗೊಳ್ಳಿ ಬಂದರುವರೆಗೆ 3 ಗಂಟೆ 5 ನಿಮಿಷ ನಿರಂತರವಾಗಿ 25 ಕಿ.ಮೀ. ಕ್ರಮಿಸಿ ಎದೆಗಾರಿಕೆ ಮೆರೆದಿದ್ದಾರೆ.

ಸಂಪತ್‌ ಜತೆಗೆ ಈಜುಗಾರರಾದ ಸಂಪತ್‌ ತಂದೆ ದೇವರಾಯ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ, ರಂಜಿತ್‌ ಖಾರ್ವಿ, ಹರೀಶ ಖಾರ್ವಿ ಇದ್ದರು. ಸಂಪತ್‌ ತಂದೆ ದೇವರಾಯ ಖಾರ್ವಿ ಮೀನುಗಾರರಾಗಿದ್ದು, ಸಂಪತ್‌ಗೆ ಏಳನೇ ತರಗತಿಯಲ್ಲಿರುವಾಗಲೇ ಪಂಚಗಂಗಾವಳಿ ನದಿಯಲ್ಲಿ ಈಜು ತರಬೇತಿ ನೀಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಂಪತ್‌ ಚಿಕ್ಕಪ್ಪ ದಯಾನಂದ ಖಾರ್ವಿಯೂ ಕೂಡ ಬೆಂಗಳೂರಿನಲ್ಲಿ ಖ್ಯಾತ ಈಜು ತರಬೇತುದಾರರಾಗಿದ್ದಾರೆ. ಇವರು ಕುಂದಾಪುರ ಸಮೀಪದ ಈಸ್ಟ್‌ವೆಸ್ಟ್‌ ಈಜುಕೊಳದಲ್ಲಿ ತರಬೇತಿ ನೀಡುತ್ತಿದ್ದು, ಇದರಲ್ಲಿ ಸಂಪತ್‌ ಪುಟ್ಟಮಕ್ಕಳಿಗೆ ಈಜು ತರಬೇತಿ ನೀಡುತ್ತಿದ್ದಾರೆ.

Follow Us:
Download App:
  • android
  • ios