ಸಕಲೇಶಪುರ (ಜ.29):  ಸಕಲೇಶಪುರ ಕೊಲೆ ಪ್ರಕರಣಕ್ಕೆ ಹೊಸದೊಂದು ತಿರುವು ಪಡೆದುಕೊಂಡಿದ್ದು, ಕೊಲೆ ಮಾಡಿದ ಬಳಿಕ ಆರೋಪಿ ಹೇಮಂತ್‌ ಸಿದ್ದಾಪುರ ಕೆರೆಗೆ ಹಾರಿದ್ದನು ಎಂದು ತಿಳಿದುಬಂದಿದೆ.

ಆದರೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಆರೋಪಿ ಹೇಮಂತನನ್ನ ಕೊಲೆಯಾದ ಯುವತಿಯ ಸಹೋದರನೇ ಕಾಪಾಡಿದ್ದಾನೆ.

ಮನೆಗೆ ಬಾರದ ಗಂಡ : ಇತ್ತ ಕೊನೆಯಾದ ಸುರಸುಂದರಿ ಹೆಂಡತಿ ಬದುಕು ..

ಆರೋಪಿಯನ್ನ ಕಾಪಾಡಿದ ಬಳಿಕ ತಂಗಿ ಕೊಲೆಯಾಗಿರುವ ವಿಚಾರವನ್ನು ಸಹೋದರನು ತಿಳಿದುಕೊಂಡಿದ್ದಾನೆ. 

ಕೇರಳದ ಮಂತ್ರವಾದಿಗಳಿಂದ ಇಡೀ ಕುಟುಂಬದ ಸರ್ವನಾಶ! ತಂಗಿಯನ್ನು ಕೊಂದ ಅಕ್ಕ! ..

ಕೊಲೆಯ ವಿಚಾರ ಕೇಳಿ ಆರೋಪಿಯನ್ನು ಸ್ಥಳದಲ್ಲೇ ಬಿಟ್ಟು ಸುಶ್ಮಿತಾಳ ಸಹೋದರ ಊರಿಗೆ ಹಿಂತಿರುಗಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಆರೋಪಿಯನ್ನು ಹಿಡಿಯಲು ಬಂದ ಗ್ರಾಮಸ್ಥರ ಕೈಗೆ ಸಿಗದೆ ಅಲ್ಲಿಂದ ಆರೋಪಿ ಪರಾರಿಯಾಗಿದ್ದಾನೆ. ಸಿದ್ದಾಪುರ ಬಾಳೆಗದ್ದೆ ಹಳ್ಳಿಗಳನ್ನು ಸೇರಿದಂತೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಪೊಲೀಸ್‌ ತಂಡ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದಾಪುರ ಕೆರೆಯಲ್ಲಿಯೂ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದಾರೆ.