ಮೈಸೂರು (ಸೆ.13): ಸ್ಕೂಟರ್‌ನಲ್ಲಿ ವೀಲಿಂಗ್ ಮಾಡಬೇಡಿ ಎಂದು ಹೇಳಿದ್ದಕ್ಕೆ 10 ಜನ ಸೇರಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ. 

ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ಸಿದ್ಧರಾಜು (26) ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ.  ಶನಿವಾರ ತಡರಾತ್ರಿ ವೇಳೆಗೆ ಸಿದ್ಧರಾಜುವನ್ನು ಹತ್ಯೆ ಮಾಡಲಾಗಿದೆ. 

ಗ್ರಾಮದ ಚಿಕ್ಕ ರಸ್ತೆಲ್ಲಿ ವೀಲಿಂಗ್ ಮಾಡುವುದು ಹಾಗೂ ಇತರೆ ಆಟಾಟೋಪ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದು, ಎರಡು ದಿನಗಳ ಹಿಂದಷ್ಟೆ ಈ ಸಂಬಂಧ ಗಲಾಟೆ ನಡೆದಿತ್ತು. ಅಲ್ಲದೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. 

ಇವರು ಬರೀ ಡ್ರಗ್ಸ್ ಪೆಡ್ಲರ್‌ಗಳಲ್ಲ, ಡ್ರಗ್ಸ್ ಟೆರರಿಸ್ಟ್‌ಗಳು; ಇವರ ಪ್ಲಾನ್ ಹೇಗಿತ್ತು ಗೊತ್ತಾ? ..

ದೂರು ನೀಡಿದ ಹಿನ್ನೆಲೆ ರೊಚ್ಚಿಗೆದ್ದ ಯುವಕರು ಗುಂಪುಕಟ್ಟಿಕೊಮಡು ಬಂದು ಏಕಾಏಕಿ ದಾಳಿ ನಡೆಸಿದ್ದಾರೆ. ಕಣ್ಣಿಗೆ ಕಾರದಪುಡಿ ಎರಚಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. 

ದಾಳಿಗೊಳಗಾದ ಸಿದ್ಧರಾಜು ಸ್ಥಳದಲ್ಲೇ ಮೃತಪಟ್ಟಿದ್ದು,  ಗಲಾಟೆ ತಪ್ಪಿಸಲು ಹೋದ ವ್ಯಕ್ತಿಗೂ ಈ ವೇಳೆ ಗಂಭೀರ ಗಾಯಗಳಾಗಿದೆ. 

ಇನ್ನು ಈ ಘಟನೆ ಬಳಿಕ ಹಲ್ಲೆ ಮಾಡಿದ್ದ ಯುವಕರ ಗುಂಪು ಸ್ಥಳದಿಂದ ಪರಾರಿಯಾಗಿದ್ದು, ಬನ್ನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.