Asianet Suvarna News Asianet Suvarna News

ಹಾಸನ: ಪ್ರೀತಿಯ ಹೆಸರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ, ಮನನೊಂದು ಯುವತಿ ಆತ್ಮಹತ್ಯೆ

ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ| ಹಾಸನ ಜಿಲ್ಲೆಯ ಜಿಲ್ಲೆ ಅದ್ದಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ|  ಪ್ರೀತಿಯ ಹೆಸರಲ್ಲಿ 17 ವರ್ಷದ ಯುವತಿಯನ್ನ ನಂಬಿಸಿ ಅತ್ಯಾಚಾರವೆಸಗಿದ ಯುವಕ| ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು| 

Young Girl Committed Suicide in Hassan District
Author
Bengaluru, First Published Aug 23, 2020, 3:05 PM IST

ಹಾಸನ(ಆ.23): ಎದುರು ಮನೆಯ ಯುವಕನ ಕಿರುಕುಳಕ್ಕೆ ಬೇಸತ್ತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪವೊಂದು ಕೇಳಿ ಬಂದ ಘಟನೆ ಜಿಲ್ಲೆ ಅದ್ದಿಹಳ್ಳಿ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ.

ಗ್ರಾಮದ ಅರುಣ್(22) ಎಂಬ ಯುವಕ ಪ್ರೀತಿಯ ಹೆಸರಲ್ಲಿ 17 ವರ್ಷದ ಯುವತಿಯನ್ನ ನಂಬಿಸಿ ಅತ್ಯಾಚಾರವೆಸಗಿದ್ದಾನೆ ಎಮದು ಆರೋಪಿಸಲಾಗಿದೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮೃತ ಯುವತಿ ತನ್ನ ಸ್ನೇಹಿತನಿಗೆ ಫೋನ್ ಮಾಡಿ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. 

ಆನ್ಲೈನ್ ಕ್ಲಾಸ್ : ಮೊಬೈಲ್‌ ಕೊಳ್ಳಲಾಗದ್ದಕ್ಕೆ ಬಾಲಕಿ ಆತ್ಮಹತ್ಯೆ

ತನ್ನ ಮೇಲೆ ಅತ್ಯಾಚಾರವಾಗಿದ್ದರಿಂದ ತೀವ್ರವಾಗಿ ಮನನೊಂದಿದ್ದ ಯುವತಿ ಮನೆಯಲ್ಲಿ ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನ ಕಿರುಕುಳದಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮತೃ ಯುವತಿಯ ಕುಟುಂಬಸ್ಥರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

ದೂರು ಆಧರಿಸಿ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ. ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆನ ನಡೆಸುತ್ತಿದ್ದಾರೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios