ವಿಜಯಪುರ [ಮಾ.17]: ರಾಜ್ಯ ಹಾಗೂ ಕೇಂದ್ರ ಸರಕಾರವು ಮಹಿಳೆಯರ ಶಿಕ್ಷಣ, ಸ್ವ ಉದ್ಯೋಗಕ್ಕಾಗಿ ಆರಂಭಿಸಿ ರುವ ಹಲವು ಯೋಜನೆಗಳನ್ನು ಸದುಪಯೋಗಪಡಿಸಿ ಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಬಲರಾಗಬೇಕು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೂದಿಗೆರೆ ನಾಗವೇಣಿ ತಿಳಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಮಹಿಳೆಯರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌಟುಂಬಿಕ  ನಿರ್ವಹಣೆಯಲ್ಲಿ ಮಹಿಳೆಯರು ತಾಳ್ಮೆಯಿಂದ ವರ್ತಿಸ ಬೇಕಿದೆ. ಮಹಿಳೆಯರಿಗೆ ಕಾನೂನು ಅರಿವಿನ ಅಗತ್ಯ ವಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ಶೋಷಣೆ, ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ.

ರಾಮನಗರದಲ್ಲಿ ನಾಲ್ವರಿಗೆ ಕೊರೋನಾ ಶಂಕೆ : ಬೆಂಗಳೂರಲ್ಲಿ ಟೆಸ್ಟ್...

ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಬೇಕು ಎಂದರು. ವಿವಿಧ ಪಕ್ಷಗಳನ್ನು ತೊರೆದು ಪಟ್ಟಣದ ಕೆಲ ವಾರ್ಡ್‌ಗಳ ಮಹಿಳೆಯರು ಬಿಜೆಪಿ ಪಕ್ಕಕ್ಕೆ ಸೇರ್ಪಡೆಗೊಂಡರು.