ಮೈಸೂರು (ಮಾ.07): ಗೃಹಿಣಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. 

ಮೈಸೂರು ಜಿಲ್ಲೆ ಎಚ್‌ ಡಿ ಕೋಟೆ ತಾಲೂಕಿನ ಕೈಲಾಸಪುರದ ಬಿಂದು (24) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. 

ಡೆಡ್ಲಿ ಮನೋಜ.. ರುಂಡ-ಮುಂಡ ಬೇರೆಯಾಗುವವರೆಗೂ ಕೊಚ್ಚುತ್ತಲೇ ಇದ್ದ!

ನೆಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಬಿಂದು ಶವ ಪತ್ತೆಯಾಗಿದೆ. ಪತ್ನಿ ಸಾವಿನ ಬಗ್ಗೆ ಪತಿ ಚೇನತ್ ಪೊಲೀಸರಿಗೆ ಮಾಹಿತಿ ನೀಡಿದ್ದು,  ಆಕೆಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. 

ಪತಿ ಚೇತನ್‌ ಕೊಲೆ ಮಾಡಿ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗಿದ್ದು ಈ ಸಂಬಂಧ ಎಚ್.ಡಿ ಕೋಟೆ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.