ಚಿಕ್ಕಮಗಳೂರು: ಪತಿ ಸಾವಿನಿಂದ ನೊಂದ ನವವಿವಾಹಿತೆ ಆತ್ಮಹತ್ಯೆ

Woman Commits Suicide After Husband death at Chikmagalur
Highlights

ಮದುವೆಯಾದ ಒಂದೇ ತಿಂಗಳಿಗೆ ಸರಕಾರಿ ಕೆಲಸದಲ್ಲಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮನನೊಂದಿದ್ದ ಹೆಂಡತಿಸಹ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಚಿಕ್ಕಮಗಳೂರು(ಜು.11] ಪತಿ ಆತ್ಮಹತ್ಯೆಯಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಂಬಿಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿದ್ದು  21 ವರ್ಷದ ಚಾಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಂದಿನಿ ಪತಿ ಪೊಲೀಸ್ ಪೇದೆ ಅನಿಲ್  ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮನನೊಂದಿದ್ದ ಪತ್ನಿ ಖಿನ್ನತೆಗೆ ಒಳಗಾಗಿದ್ದರು.  ಮದುವೆಯಾಗಿ ಕೇವಲ ಒಂದು ತಿಂಗಳು ಮಾತ್ರವಾಗಿತ್ತು. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader