ಮಂಡ್ಯ [ಜು.15] : ಶಾಲೆಯಲ್ಲಿ ಬಳಕೆ ಮಾಡುವ ವಾಟರ್ ಟ್ಯಾಂಕ್ ಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು, ಇದರಿಂದ ನೀರು ಕುಡಿದ ಶಾಲೆಯ 11 ಮಕ್ಕಳು ಅಸ್ವಸ್ಥರಾಗಿದ್ದಾರೆ. 

ಮಂಡ್ಯ ತಾಲೂಕಿನ ಹುಲ್ಕೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಷದ ನೀರು ಸೇವನೆಯಿಂದ ಅಸ್ವಸ್ಥರಾದ ಮಕ್ಕಳನ್ನು ಇಲ್ಲಿನ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.   

ಇಂದು ಶಾಲೆಗೆ ಆಗಮಿಸಿದ ಬಳಿಕ ನೀರು ಕುಡಿದ ಮಕ್ಕಳಾದ ದರ್ಶನ್, ಧನುಷ್ ,ಶಿವಲಿಂಗ, ಯಶವಂತ್,ಮಯೂರ್,ಚಂದು,ಸೋಮಶೇಖರ್, ನಿಶಾ,ಪ್ರಜ್ವಲ್ ,ತೇಜು ಅಸ್ವಸ್ಥರಾಗಿದ್ದಾರೆ. 

ಮಂಡ್ಯದ  ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.