ತಳ್ಳು ಗಾಡಿ ಮೇಲೆ ಕುಳಿತು ಮಾವು ಮಾರಾಟ ಮಾಡುತ್ತಿದೆ ಕೋತಿ: ವಿಡಿಯೋ ವೈರಲ್
ಕೋತಿಯೊಂದು ತಳ್ಳು ಗಾಡಿ ಮೇಲೆ ಕುಳಿತು ಮಾವು ಮಾರುತ್ತಿರುವ ವಿಡಿಯೋ ಮತ್ತು ಫೋಟೊ ಎಲ್ಲರ ಗಮನ ಸೆಳೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.
ರಬಕವಿ-ಬನಹಟ್ಟಿ (ಮೇ.23): ಕೋತಿಯೊಂದು ತಳ್ಳು ಗಾಡಿ ಮೇಲೆ ಕುಳಿತು ಮಾವು ಮಾರುತ್ತಿರುವ ವಿಡಿಯೋ ಮತ್ತು ಫೋಟೊ ಎಲ್ಲರ ಗಮನ ಸೆಳೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಮಾವು ಮಾರಾಟ ಮಾಡುವ ಮಾಲೀಕ ಹೊರಗಡೆ ಹೋದಾಗ ಕೋತಿಯೊಂದು ಬಂದು ಗಾಡಿಯ ಮೇಲೆ ಕುಳಿತು ಮಾವು ಮಾರಾಟ ಮಾಡುತ್ತಿರುವಂತೆ ಪೋಸ್ ನೀಡಿದೆ.
ಈ ಕೋತಿ ಮಾವು ಮಾರಾಟ ಮಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಮಂಗವೊಂದು ಮಾವು ತುಂಬಿದ ತಳ್ಳುವ ಗಾಡಿಯ ಮೇಲೆ ಕುಳಿತಿದ್ದು, ಕುತೂಹಲದಿಂದ ಅಲ್ಲಿಯೇ ಕುಳಿತು ಸುತ್ತಲೂ ನೋಡುತ್ತಿರುವದು ವಿಡಿಯೋದಲ್ಲಿ ಸೆರೆಯಾಗಿದೆ.
ನಿಮ್ಮ ಸುತ್ತಮುತ್ತ ಇರುವವರೆಲ್ಲಾ ಟೆರರಿಸ್ಟ್ಗಳು: ಡಿಕೆಶಿಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು
ಬೇಕಿದೆ ಸುಸಜ್ಜಿತ ಮಾವು ಮಾರುಕಟ್ಟೆ: ರಾಜ್ಯದ ಕೋಲಾರ, ರಾಮನಗರ ಹೊರತುಪಡಿಸಿದರೆ ಧಾರವಾಡದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಗೆ ಮಾವು ಆಯ್ಕೆಯಾಗಿದೆ. ಇಷ್ಟಾಗಿಯೂ ಧಾರವಾಡದಲ್ಲಿ ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಒಂದು ಸುಸಜ್ಜಿತ ಮಾರುಕಟ್ಟೆಯೇ ಇಲ್ಲ!
2017ರಲ್ಲಿ ಆಗಿನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರ ಸಲಹೆ ಮೇರೆಗೆ ಧಾರವಾಡ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಈ ಭಾಗದಲ್ಲಿ ಮಾವಿನ ಹಣ್ಣು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳ ಮಾರಾಟಕ್ಕಾಗಿ ಸಮಗ್ರ, ಸುಸಜ್ಜಿತ ಮಾರುಕಟ್ಟೆಯೊಂದನ್ನು ಸ್ಥಾಪಿಸುವ ಬಗ್ಗೆ ಮಾವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಏಳು ವರ್ಷಗಳು ಗತಿಸಿದರೂ ಈ ಪ್ರಸ್ತಾವನೆ ಸರ್ಕಾರದ ಕಪಾಟುಗಳಲ್ಲಿ ಧೂಳು ತಿನ್ನುತ್ತಿದ್ದು ಸರ್ಕಾರದ ನಿರಾಸಕ್ತಿಯಿಂದಾಗಿ ಮಾರುಕಟ್ಟೆ ಸ್ಥಾಪನೆ ಮರೀಚಿಕೆಯಾಗಿ ಉಳಿದಿದೆ.
ಕಾಂಗ್ರೆಸ್ ಪಿಕ್ ಪಾಕೆಟ್ ಸರ್ಕಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ
ಒಂದು ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಮತ್ತು ಶಿತಾಗಾರ ಇಲ್ಲದಿರುವುದರಿಂದಾಗಿ ಮಾವು ಬೆಳೆಗಾರರು ಸೇರಿದಂತೆ ತೋಟಗಾರಿಕೆ ಬೆಳೆಗಾರರು ಬಹಳ ದಿನ ತಮ್ಮ ಉತ್ಪನ್ನವನ್ನು ಸಂರಕ್ಷಿಸಿ ಇಡಲಾಗಿದೆ ಕೈಗೆ ಬಂದ ಬೆಲೆಗೆ ಮಧ್ಯವರ್ತಿಗಳಿಗೆ ಮಾರುತ್ತಿದ್ದಾರೆ. ಇದರಿಂದಾಗಿ ಬೆಳೆಗಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದ್ದು, ಮಧ್ಯವರ್ತಿಗಳು ದುಂಡಗಾಗುತ್ತಿದ್ದಾರೆ. ಸದ್ಯ ಧಾರವಾಡದಲ್ಲಿ ಮಾವಿನ ಹಣ್ಣಿನ ಸುಗ್ಗಿ. ಬೆಳೆಗಾರರಿಗೆ ಸರಿಯಾದ ಮಾರುಕಟ್ಟೆ ಇಲ್ಲದೇ ಎಲ್ಲೆಂದರಲ್ಲಿ ಮಾರಾಟ ಮಾಡುವಂತಾಗಿದೆ. ತೋಟಗಾರಿಕೆ ಇಲಾಖೆ ನಾಲ್ಕೈದು ವರ್ಷಗಳಿಗೊಮ್ಮೆ ಮಾವು ಮೇಳ ಮಾಡುತ್ತಿದ್ದು ಕೆಲವೇ ದಿನಗಳಿಗೆ ಸೀಮಿತ ಇರುವುದರಿಂದ ಬೆಳೆಗಾರರು ಸರಿಯಾಗಿ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.