Asianet Suvarna News Asianet Suvarna News

ದಾನದಲ್ಲಿಯೇ ಖುಷಿಕಾಣುವ ಗದಗದ ಅಶೋಕ ಸಮಾಜಕ್ಕೆ ಮಾದರಿ

ಇತ್ತೀಚೆಗೆ ಮಾನವೀಯತೆ ಮರೆತು ಹಣ ಗಳಿಕೆಗೆ ಮುಂದಾಗುವವರೇ ಹೆಚ್ಚು. ಆದರೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಉದ್ಯಮಿ ಅಶೋಕ ಭಾಗಮಾರ ಕುಟುಂಬ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆ ಮಾತಿನಂತೆ ತಾವು ವರ್ಷಪೂರ್ತಿ ದುಡಿದ ಹಣವನ್ನು ಬಚ್ಚಿಡದೇ ತಮ್ಮ ಸುತ್ತಲಿರುವ ಬಡ ಜನರಿಗೆ ಅನೇಕ ವಿಧದಲ್ಲಿ ದಾನ ಮಾಡಿ ಮಾದರಿಯಾಗಿದ್ದಾರೆ. ಹೌದು ಅಶೋಕ ಭಾಗಮಾರ ಕುಟುಂಬ ಕಳೆದ 8-10 ವರ್ಷಗಳಿಂದ ಹೆತ್ತವರಾದ ತಂದೆ ದೇವರಾಜ್ ಭಾಗಮಾರ ಹಾಗೂ ತಾಯಿ ಶಾಂತಾಬಾಯಿ ಭಾಗಮಾರ ಸ್ಮರಣಾರ್ಥ ಪ್ರತೀ ವರ್ಷ ಗಜೇಂದ್ರಗಡ ಪಟ್ಟಣದಲ್ಲಿನ ಬಡವರ ಬಾಳಲ್ಲಿ ಕೊಂಚ ಉಸಿರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿಯಾಗಿ ಈ ವರ್ಷವೂ ಕೂಡ ಸುಮಾರು  4 ಲಕ್ಷ ರೂ. ವೆಚ್ಚದಲ್ಲಿ ನಗರದ 1300ಕ್ಕೂ ಹೆಚ್ಚು ಕಡು ಬಡವರನ್ನ ಗುರುತಿಸಿ ಅವರಿಗೆ ಒಂದೊತ್ತಿನ ಊಟ, ಉಡಲು ಬಟ್ಟೆ, ಬೆಡ್‌ಶೀಟ್, ಚಾಪೆ, ರಗ್ಗು ಹಾಗೂ ಅಡುಗೆ ಮನೆಗೆ ಬೇಕಾಗುವಂತ ಅನೇಕ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಅಲ್ಲದೇ ಈ ರೀತಿ ತಮ್ಮ ಶ್ರಮದ ಹಣವನ್ನ ಬಡವರಿಗೆ ಹಂಚುವ ಮೂಲಕ ಅವರ ಸಂತೋಷದಲ್ಲಿ ನಮ್ಮ ತಂದೆ-ತಾಯಿಯನ್ನ ಕಾಣುತ್ತಿರುವೆ. ಸಮಾಜದಲ್ಲಿನ ನಿರ್ಗತಿಕರಿಗೆ, ಬಡವರಿಗೆ ಹಾಗೂ ಅಸಹಾಯಕತೆಯಿಂದ ಬಳಲುವವರಿಗೆ ಸಹಾಯ ಮಾಡುವುದೇ ನಿಜವಾದ ಸೇವೆ. ಹೀಗಾಗಿ ಈ ಸೇವೆಯಿಂದ ತಾವು ಹಾಗೂ ತಮ್ಮ ಕುಟುಂಬ ಸಂತಸದಿಂದಿದೆ ಎಂದು ಅಶೋಕ ಭಾಗಮಾರ ಖುಷಿ ಹಂಚಿಕೊಳ್ಳುತ್ತಾರೆ.

Video Top Stories