ಒಂದೂವರೆ ವರ್ಷದಿಂದ ಉದ್ಘಾಟನೆಗೊಳ್ಳದ ಶೌಚಗೃಹ!

ಶಿಕ್ಷಣ ಸಚಿವರ ತವರೂರಿನನಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಇಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಓದುತ್ತಿದ್ದು, ಶೌಚಾಲಯಗಳ ಕೊರತೆಯಿಂದ ನಿತ್ಯ ಪರದಾಡುವಂತಾಗಿರುವುದು

The toilet has not been opened for one and a half years snr

 ರಂಗಸ್ವಾಮಿ ಬಿ.

 ತಿಪಟೂರು:  ಸರ್ಕಾರ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಜೊತೆಗೆ ಇತರೆ ಅಭಿವೃದ್ಧಿಗೆ ಕೋಟ್ಯಂತರ ರು. ಅನುದಾನ ನೀಡುತ್ತಿದ್ದರೂ ಸರಿಯಾದ ಬಳಕೆ ಮಾಡಿಕೊಳ್ಳದೆ ಒಂದಲ್ಲೊಂದು ಸಮಸ್ಯೆಗಳು ಜೀವಂತವಾಗಿರುವುದಕ್ಕೆ ಉದಾಹರಣೆ ಎಂದರೇ, ಶಿಕ್ಷಣ ಸಚಿವರ ತವರೂರಿನನಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಇಲ್ಲಿ 3500ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಓದುತ್ತಿದ್ದು, ಶೌಚಾಲಯಗಳ ಕೊರತೆಯಿಂದ ನಿತ್ಯ ಪರದಾಡುವಂತಾಗಿರುವುದು ವಿದ್ಯಾರ್ಥಿಗಳ ಪಾಲಿಗೆ ಒಂದು ರೀತಿಯ ಸಂಕಟ ಪಡುವಂತಹ ಪರಿಸ್ಥಿತಿಯಾಗಿದೆ.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಖಲಾತಿಯಲ್ಲಿ ರಾಜ್ಯದಲ್ಲಿಯೇ ನಂ.1 ಕಾಲೇಜಾಗಿದ್ದು, 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು, ಇದರಲ್ಲಿ 2500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. 150ಕ್ಕೂ ಹೆಚ್ಚು ಉಪನ್ಯಾಸಕರಿದ್ದಾರೆ. ಗ್ರಾಮೀಣ, ನಗರ ಮತ್ತು ವಿವಿಧ ತಾಲೂಕು ಹಾಗೂ ದೂರದ ಊರುಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ ಈ ಕಾಲೇಜಿನಲ್ಲಿ ಸಮರ್ಪಕ ಶೌಚಾಲಯಗಳ ವ್ಯವಸ್ಥೆ ಇಲ್ಲ. ಸದ್ಯ ಕಾಲೇಜಿನಲ್ಲಿ ಒಟ್ಟು 4 ಶೌಚಾಲಯಗಳಿದ್ದು, ಒಂದರಲ್ಲಿ ನೀರು ಬಂದರೆ ಇನ್ನೊಂದರಲ್ಲಿ ನೀರಿಲ್ಲದ ಸ್ಥಿತಿಯಲ್ಲಿವೆ. 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೇರಿಕೊಂಡು ಮಹಿಳಾ ಉಪನ್ಯಾಸಕಿಯರಿಗೆ ಒಂದೇ ಒಂದು ಶೌಚಾಲಯ ಮತ್ತು ಹುಡುಗರಿಗೆ, ಪುರುಷ ಉಪನ್ಯಾಸಕರಿಗೆ ಸೇರಿ 3 ಶೌಚಾಲಯಗಳು ಮಾತ್ರ ಇವೆ. ಲಕ್ಷಾಂತರ ರು. ವೆಚ್ಚದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದರೂ, ಈವರೆಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಸಂಬಂಧಪಟ್ಟವರನ್ನು ಕೇಳಿದರೆ ಶಿಕ್ಷಣ ಸಚಿವರಿಂದಲೇ ಉದ್ಘಾಟನೆಗೊಳ್ಳಬೇಕಾಗಿದ್ದು, ಅವರು ಇನ್ನೂ ಸಮಯ ನಿಗದಿ ಮಾಡಿಲ್ಲ ಎಂದು ಸಬೂಬು ಹೇಳುತ್ತಲೇ ಬರುತ್ತಿದ್ದಾರೆಂದು ಹೇಳುತ್ತಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿಯರು ಪರಿಚಿತರ ಮನೆ ಅಥವಾ ಹೋಟೆಲ್‌ಗಳ ಹುಡುಕುವಂತಾಗಿದ್ದು, ಮಾನಸಿಕವಾಗಿ ನೊಂದು ಹೋಗಿದ್ದಾರೆ. ಹಾಗಾಗಿ ನಮ್ಮ ಕಾಲೇಜು ಪಕ್ಕದಲ್ಲೇ ಇರುವ ಸಚಿವರು ಈಗಲಾದರೂ ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ಬಳಕೆಗೆ ಸಿದ್ಧವಾಗಿರುವ ಶೌಚ ಗೃಹಗಳನ್ನು ಕೂಡಲೆ ಬಳಕೆಗೆ ನೀಡಬೇಕೆಂದು ವಿದ್ಯಾರ್ಥಿಗಳ ಪರವಾಗಿ ಪೋಷಕರೂ ಸಹ ಒತ್ತಾಯಿಸಿದ್ದಾರೆ.

ಸಚಿವರ ನಿರ್ಲಕ್ಷ್ಯ:

ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಈ ಸರ್ಕಾರಿ ಕಾಲೇಜಿನಲ್ಲಿ ಶೌಚಾಲಯಗಳÜ ಅವಶ್ಯಕತೆ ಹೆಚ್ಚಿದೆ. ಆದರೆ ಲಕ್ಷಾಂತರ ರು.ವೆಚ್ಚದಲ್ಲಿ ಶೌಚಾಲಯಗಳು ನಿರ್ಮಾಣವಾಗಿದ್ದರೂ ಸಚಿವರು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ವಿದ್ಯಾರ್ಥಿನಿಯರಿಗೆ ಆರೋಗ್ಯ ಸೇರಿದಂತೆ ವೈಯಕ್ತಿಕ ಸಮಸ್ಯೆಗಳಿರುತ್ತವೆ. ಸ್ವಚ್ಛ ಭಾರತ, ನೈರ್ಮಲ್ಯ ಎಂದು ಹೇಳುವ ಇವರು ಶೌಚ ಗೃಹಗಳ ಬಗ್ಗೆ ಉದಾಸೀನ ತೋರುತ್ತಿರುವುದು ನೋಡಿದರೆ, ನಗರದ ಅಭಿವೃದ್ಧಿ ಎತ್ತ ಸಾಗುತ್ತಿದೆ ಎಂಬುದನ್ನು ಜನರೇ ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ಪೋಷಕ ಪರಮೇಶ್ವರಯ್ಯ.

ಕೋಟ್‌ 1 :

ವಿದ್ಯಾರ್ಥಿಗಳಿಗೆ ಶೌಚಾಲಯವಿಲ್ಲದೆ ಹೆಚ್ಚು ಅನಾನುಕೂÇವಾಗಿರುವುದು ನಿಜ. ಹೊಸ ಕಟ್ಟಡಗಳು ಪೂರ್ತಿಯಾಗಿದ್ದು ಸಂಬಂಧಿಸಿದವರು ಬಳಕೆಗೆ ನಮಗೆ ನೀಡಿದ ತಕ್ಷಣ ವಿದ್ಯಾರ್ಥಿಗಳ ಬಳಕೆಗೆ ಸೂಚಿಸಲಾಗುವುದು.

ಡಾ. ಕೆ.ಬಿ. ಸರಸ್ವತಿ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು.

ಕೋಟ್‌ 2 :

ನಾವು ದೂರದ ಊರುಗಳಿಗೆ ಕಾಲೇಜಿಗೆ ಬೆಳಗ್ಗೆ 8 ಗಂಟೆಗೆ ಬರುತ್ತೇವೆ ಮತ್ತೆ ಕಾಲೇಜು ಮುಗಿಸಿ ಮನೆಗೆ ತಲುಪುದು ಸಂಜೆ 5 ಗಂಟೆಗೆ. ಆದರೆ ನಮಗೆ ಶೌಚಾಲಯಗಳಿಲ್ಲದಿರುವುದರಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಶೌಚಾಲಯಕ್ಕೆ ಹೋಗುವಂತಿಲ್ಲ. ಸಚಿವರು ವಿದ್ಯಾರ್ಥಿನಿಯರ ನಮ್ಮ ಈ ಕಷ್ಟವನ್ನು ಈಗಲಾದರೂ ಅರ್ಥಮಾಡಿಕೊಂಡು ಕೂಡಲೆ ಶೌಚಗೃಹಗಳನ್ನು ಬಳಕೆಗೆ ಮುಕ್ತಗೊಳಿಸಬೇಕಾಗಿದೆ.

- ಹೆಸರೇಳಲಿಚ್ಚಿಸದ ವಿದ್ಯಾರ್ಥಿನಿಯರು.

ಫೋಟೋ 16-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಘಾಟನೆಗೊಳ್ಳದ ಶೌಚಗೃಹ.

Latest Videos
Follow Us:
Download App:
  • android
  • ios