ದುಡ್ಡು ಕೊಟ್ಟು ಆಕ್ಸಿಜನ್ ಸೇವಿಸೋ ಕಾಲ ದೂರವಿಲ್ಲ
ಪರಿಸರದ ವಿನಾಶಕ್ಕೆ ಮಾನವನ ದುರಾಸೆಯೇ ಕಾರಣವಾಗಿದ್ದು ಹೀಗೆಯೆ ಪ್ರಕೃತಿಯ ಮೇಲೆ ಮನುಷ್ಯ ದಬ್ಬಾಳಿಕೆ ಮಾಡುತ್ತಾ ಹೋದರೆ ಮುಂದೊಂದು ದಿನ ಆಮ್ಲಜನಕದ ಬೂತುಗಳನ್ನು ತೆರೆದು ದುಡ್ಡುಕೊಟ್ಟು ಆಮ್ಲಜನಕ ಸೇವಿಸುವ ಕಾಲ ಬರಲಿದೆ.
ತಿಪಟೂರು : ಪರಿಸರದ ವಿನಾಶಕ್ಕೆ ಮಾನವನ ದುರಾಸೆಯೇ ಕಾರಣವಾಗಿದ್ದು ಹೀಗೆಯೆ ಪ್ರಕೃತಿಯ ಮೇಲೆ ಮನುಷ್ಯ ದಬ್ಬಾಳಿಕೆ ಮಾಡುತ್ತಾ ಹೋದರೆ ಮುಂದೊಂದು ದಿನ ಆಮ್ಲಜನಕದ ಬೂತುಗಳನ್ನು ತೆರೆದು ದುಡ್ಡುಕೊಟ್ಟು ಆಮ್ಲಜನಕ ಸೇವಿಸುವ ಕಾಲ ಬರಲಿದೆ. ಈಗಲಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕೆಂದು ನಾಗರಿಕ ಜಾಗೃತಿ ಮತ್ತು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ ತಿಳಿಸಿದರು.
ನಗರದ ತಾಲೂಕು ನಿವೃತ್ತ ನೌಕರರ ಸಂಘದಲ್ಲಿ ಸಂಘದ ಮಾಸಿಕ ಸಭೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು, ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವರಾಶಿಗಳಿಗೂ ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧವಿದೆ. ಶುದ್ಧವಾದ ಆಮ್ಲಜನಕವನ್ನು ನೀಡುವ ಹಾಗೂ ವಾತಾವರಣದಲ್ಲಿ ತಾಪಮಾನದ ಸಮತೋಲನವನ್ನು ಕಾಪಾಡಿಕೊಳ್ಳುವ ಮತ್ತು ಸಮೃದ್ಧವಾಗಿ ಮಳೆಯನ್ನು ಸುರಿಸುವ ಗಿಡ-ಮರಗಳ ಅವಶ್ಯಕತೆ ಇದೆ. ಈಗಾಗಲೇ ಪ್ರಕೃತಿ ವಿಕೋಪಗಳಿಂದ ಅಲ್ಲಲ್ಲಿ ಕಾಡು ನಾಶವಾಗುತ್ತಿದ್ದು ಜನರಲ್ಲಿ ಆತಂಕ ಸೃಷ್ಠಿಗೆ ಕಾರಣವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರು ನಿಸರ್ಗದತ್ತವಾಗಿರುವ ಗುಡ್ಡ, ಬೆಟ್ಟ, ಮರ-ಗಿಡಗಳನ್ನು ಸಂರಕ್ಷಿಸುವುದರ ಜೊತೆಗೆ ಆಯಕಟ್ಟಿನ ತಾಣಗಳಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಜಿ.ಟಿ.ಶಂಕರೇಗೌಡ ಮಾತನಾಡಿ, ಮನುಷ್ಯರಾಗಿ ಹುಟ್ಟಿದ ಮೇಲೆ ಈ ಭೂಮಿಯ ಮೇಲಿನ ಎಲ್ಲಾ ಸಂಪನ್ಮೂಲಗಳನ್ನು ಉಚಿತವಾಗಿ ಬಳಸಿಕೊಂಡಿದ್ದೇವೆ. ನಮ್ಮ ಉಸಿರು ನಿಂತ ಮೇಲೆ ಏನನ್ನೂ ಮಾಡಲಾಗುವುದಿಲ್ಲ. ಆದ್ದರಿಂದ ನಾವು ಬದುಕಿರುವಾಗ ಏನನ್ನಾದರೂ ಉಳಿಸಬೇಕೆಂದರೆ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿರಿ ಎಂದು ಕರೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಸರವನ್ನು ಸಂರಕ್ಷಿಸಿ, ಗಿಡಮರಗಳನ್ನು ಬೆಳಿಸಿದಾಗ ಮಾತ್ರ ಭೂಮಿಯ ಮೇಲಿನ ಜೀವ ಸಂಕುಲ ನೆಮ್ಮದಿಯಿಂದ ಬದುಕಲು ಸಾಧ್ಯವಿರುವುದರಿಂದ ಗಿಡ ಮರ ನೆಡುವ ಕೆಲಸವನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಚಂದ್ರರಾಜ ಅರಸ್, ನಂಜುಂಡಸ್ವಾಮಿ ಮತ್ತಿತರರಿದ್ದರು.
ಆಮ್ಲಜನಕದಷ್ಟೇ ಪೋಷಕಾಂಶವೂ ಮುಖ್ಯ
2022ರ ವಿಶ್ವ ಆಹಾರ ದಿನವನ್ನು (world food day) ಪ್ರತಿ ವರ್ಷ ಅಕ್ಟೋಬರ್ 16ರಂದು ಆಚರಿಸಲಾಗುತ್ತೆ. ಜಗತ್ತಿನಲ್ಲಿ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ 12 ನಂತಹ ಅನೇಕ ಪೋಷಕಾಂಶಗಳು ದೇಹಕ್ಕೆ ಬಹಳ ಮುಖ್ಯ. ಈ ಪೋಷಕಾಂಶಗಳು ಅಪೌಷ್ಟಿಕತೆಯಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಇದರೊಂದಿಗೆ, ಮಧುಮೇಹ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಯೂರಿಕ್ ಆಮ್ಲದಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತೆ . ಆದರೆ ದೇಹಕ್ಕೆ ಅತ್ಯಂತ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯಲು ಏನು ತಿನ್ನಬೇಕು? ಅನ್ನೋದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ, ಆದರೆ ಅದಕ್ಕೂ ಮೊದಲು 2022 ರ ವಿಶ್ವ ಆಹಾರ ದಿನವನ್ನು ಆಚರಿಸಲು ಕಾರಣವೇನೆಂದು ತಿಳಿಯೋಣ.
ವಿಶ್ವ ಆಹಾರ ದಿನ ಆಚರಣೆ ಮಾಡೋದು ಯಾಕೆ? ಮತ್ತು 2022 ರ ಥೀಮ್ ಏನು?
ವಿಶ್ವಸಂಸ್ಥೆಯ ಪ್ರಕಾರ, ವಿಶ್ವದ ಲಕ್ಷಾಂತರ ಜನರು ಆರೋಗ್ಯಕರ ಆಹಾರ ಮತ್ತು ಅಗತ್ಯ ಪೌಷ್ಟಿಕಾಂಶವನ್ನು ಪಡೆಯುತ್ತಿಲ್ಲ. ಈ ಸಮಸ್ಯೆಯನ್ನು ಬೇರುಸಹಿತ ಕಿತ್ತೊಗೆಯಲು, ವಿಶ್ವಸಂಸ್ಥೆಯು ಅಕ್ಟೋಬರ್ 16, 1945 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಅಂದಿನಿಂದ, ಈ ದಿನವನ್ನು ವಿಶ್ವ ಆಹಾರ ದಿನವಾಗಿ ಅಂದರೆ ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತದೆ. 2022 ರ ವಿಶ್ವ ಆಹಾರ ದಿನದ ಥೀಮ್ ‘ಲೀವ್ ನೋ ಒನ್ ಬಿಹೈಂಡ್’ (leave no one behind). ಇದರರ್ಥ 'ಯಾರನ್ನೂ ಹಿಂದೆ ಉಳಿಯಲು ಬಿಡಬಾರದು'.