Asianet Suvarna News Asianet Suvarna News

ಮೈಸೂರು ದಸರಾ ಪ್ರವಾಸಿಗರಿಗೆ ರೈಲ್ವೆಯಿಂದ ವಿಶೇಷ ಸೌಲಭ್ಯ

ಅ.16ರಿಂದ 19ರವರೆಗೆ ರೈಲು ಗಾಡಿ ಸಂಖ್ಯೆ 06207  ಮೈಸೂರಿನಿಂದ ರಾತ್ರಿ 9 ಗಂಟೆಗೆ ಹೊರಟು 10.50ಕ್ಕೆ ಚಾಮರಾಜನಗರಕ್ಕೆ ಆಗಮಿಸಲಿದೆ. ಪುನಃ ರಾತ್ರಿ 11.20ಕ್ಕೆ ಹೊರಟು 1.10ಕ್ಕೆ ಮೈಸೂರಿಗೆ ಆಗಮಿಸಲಿದೆ. 

Temporary Stoppage provided at Mysore Railway Station
Author
Bengaluru, First Published Oct 14, 2018, 4:04 PM IST

ಮೈಸೂರು(ಅ.14): ದಸರಾ ಮಹೋತ್ಸವದ ಅಂಗವಾಗಿ ಜನಸಾಧರಣ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ನಿಯೋಜಿಸಿದ್ದು, ಮೈಸೂರು- ಚಾಮರಾಜನಗರ ಮಾರ್ಗದ ಕೆಲವು ಕಡೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.

ಅ.16ರಿಂದ 19ರವರೆಗೆ ರೈಲು ಗಾಡಿ ಸಂಖ್ಯೆ 06207  ಮೈಸೂರಿನಿಂದ ರಾತ್ರಿ 9 ಗಂಟೆಗೆ ಹೊರಟು 10.50ಕ್ಕೆ ಚಾಮರಾಜನಗರಕ್ಕೆ ಆಗಮಿಸಲಿದೆ. ಪುನಃ ರಾತ್ರಿ 11.20ಕ್ಕೆ ಹೊರಟು 1.10ಕ್ಕೆ ಮೈಸೂರಿಗೆ ಆಗಮಿಸಲಿದೆ. ಚಾಮರಾಜಪುರ, ಅಶೋಕಪುರಂ, ಕಡಕೊಳ, ತಾಂಡವಪುರ,ಸುಜಾತಪುರಂ, ನಂಜನಗೂಡು,ಚಿನ್ನದಗುಡಿಹುಂಡಿ, ಬದನವಾಳು, ಕವಲಂದೆ, ಕಣ್ಣನೂರು, ಬದನಗುಪ್ಪೆ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ರೀತಿ ಅ.19ರಂದು ಧಾರವಾಡ- ಮೈಸೂರು ಎಕ್ಸ್‌ಪ್ರೆಸ್ ರೈಲು ಮಾನವಿನಕೆರೆ, ಅಕ್ಕಿಹೆಬ್ಬಾಳು, ಸಾಗರಕಟ್ಟೆ, ಬೆಳಗೊಳ ತಾತ್ಕಾಲಿಕ ನಿಲುಗಡೆ ನೀಡಲಿದೆ.

ದಸರಾ ರಜೆಗೆ 2500 ಹೆಚ್ಚುವರಿ ಬಸ್‌

ಅ.15ರಿಂದ 22ರವರೆಗೆ ಮೈಸೂರು- ತಾಳಗುಪ್ಪ ಫಾಸ್ಟ್ ಪ್ಯಾಸೆಂಜರ್ ರೈಲುಗಾಡಿಯು ಕೆ.ಆರ್. ನಗರ, ಕಲ್ಲೂರು ಯಡೆಹಳ್ಳಿ, ಡೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿಯಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಿದೆ. ಶಿವಮೊಗ್ಗ ಟೌನ್- ಮೈಸೂರು ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಗೊಳ, ಕೆ.ಆರ್.ಎಸ್, ಕಲ್ಲೂರು ಯಡೆಹಳ್ಳಿ, ಸಾಗರಕಟ್ಟೆ, ಡೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ, ಹೊಸ ಅಗ್ರಹಾರ, ಮಾನವಿಕೆರೆಯಲ್ಲಿ ನಿಲುಗಡೆ ನೀಡಲಿದೆ.

ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸುಧಾ ಮೂರ್ತಿ ಚಾಲನೆ

 

Follow Us:
Download App:
  • android
  • ios