Asianet Suvarna News Asianet Suvarna News

ಸ್ವದೇಶಿ ಲಘು ಯುದ್ಧ ಕಾಪ್ಟರ್‌ ಘಟಕ ಲೋಕಾರ್ಪಣೆಗೆ ಸಜ್ಜು

ಭಾರತೀಯ ಸೇನೆಗೆ ಬಲ ತುಂಬುವ, ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್‌ ಘಟಕ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ ಬಳಿ ನಿರ್ಮಾಣವಾಗಿದ್ದು ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

Swadeshi Light Combat Copter Unit Geared up for Inauguration snr
Author
First Published Feb 1, 2023, 5:22 AM IST

ಉಗಮ ಶ್ರೀನಿವಾಸ್‌

 ತುಮಕೂರು :  ಭಾರತೀಯ ಸೇನೆಗೆ ಬಲ ತುಂಬುವ, ಸಂಪೂರ್ಣ ಸ್ವದೇಶಿ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್‌ ಘಟಕ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ ಬಳಿ ನಿರ್ಮಾಣವಾಗಿದ್ದು ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

ಭರ್ತಿ 6400 ಕೋಟಿ ರು. ವೆಚ್ಚದಲ್ಲಿ 614 ಎಕರೆ ವಿಶಾಲ ಜಾಗದಲ್ಲಿ 3 ಸಾವಿರ ಕೆಜಿ ತೂಕದ ಲೈಚ್‌ ಯುಟಿಲಿಟಿ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಸಂಪೂರ್ಣವಾಗಿ ಸಜ್ಜಾಗಿದ್ದು ದೇಶಕ್ಕೆ ಸಮರ್ಪಣೆಗೊಳ್ಳಲಿದೆ. ಈ ಎಚ್‌ಎಎಲ್‌ ಘಟಕವನ್ನು ದೇಶಕ್ಕೆ ಸಮರ್ಪಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಇದೇ 6ರಂದು ಕಲ್ಪತರು ಜಿಲ್ಲೆಗೆ ಆಗಮಿಸಲಿದ್ದಾರೆ.

ಬಿದರೆಹಳ್ಳಿ ಕಾವಲ್‌ ಬಳಿ ನಿರ್ಮಾಣವಾಗಲಿರುವ 5 ರಿಂದ 6 ಮಂದಿ ಕುಳಿತುಕೊಳ್ಳುವ ಈ ಕಾಪ್ಟರ್‌ಗಳು ಭೂ ಸೇನೆ, ವಾಯುಸೇನೆಗೆ ಬಳಕೆಯಾಗಲಿದೆ. 2016ರ ಜನವರಿ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆಗೆ ಚಾಲನೆ ನೀಡಿ ಹೋಗಿದ್ದರು. 614 ಎಕರೆ ಜಾಗದ ಪೈಕಿ 529 ಎಕರೆ ಜಾಗದಲ್ಲಿ ಹೆಲಿಕ್ಯಾಪ್ಟರ್‌ ಬಿಡಿ ಭಾಗ ತಯಾರಿಸುವ, ಜೋಡಿಸುವ ಕಟ್ಟಡಗಳ ಘಟಕಗಳ ನಿರ್ಮಾಣವಾಗಿದೆ. ಈ ಘಟಕದಲ್ಲಿ ರನ್‌ವೇ, ಆಸ್ಪತ್ರೆ, ಆಡಳಿತ ವಿಭಾಗ ಸೇರಿದಂತೆ ಇನ್ನಿತರೆ ಕಚೇರಿಗಳನ್ನು ಒಳಗೊಂಡಿದೆ. ಅಧಿಕೃತವಾಗಿ ಫೆಬ್ರವರಿ 6ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದರೊಂದಿಗೆ ಈ ಘಟಕ ಸ್ಥಾಪನೆ ತುಮಕೂರು ಜಿಲ್ಲೆಯ ಪಾಲಿಗೆ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ.

ಈ ಎಚ್‌ಎಎಲ್‌ ಘಟಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ಕನಸಿನ ಕೂಸು ಎಂದೇ ಬಿಂಬಿತವಾಗಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್‌ ಪಹರೆಯನ್ನೇ ಹಾಕಲಾಗಿದೆ. ಮಹತ್ವ ಯೋಜನೆಯನ್ನು ಫೆಬ್ರವರಿ 6 ರಂದು ಲೋಕಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ಅಭಿವೃದ್ಧಿಯ ಸಂಚಲ ಮೂಡಿಸುತ್ತಿದ್ದಾರೆ. ಈ ವೇಳೆ ಜಿಲ್ಲೆಯ 11 ಕ್ಷೇತ್ರ ಒಳಗೊಂಡಂತೆ 50 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಪಕ್ಷ ಸ್ಥಾಪನೆಯಾಗಿ ಇಲ್ಲಿವರೆಗೂ ಖಾತೆಯೇ ತೆರೆಯದ ಪಾವಗಡ, ಮಧುಗಿರಿ, ಕುಣಿಗಲ…, ಕೊರಟಗೆರೆ, ಗುಬ್ಬಿ ಕ್ಷೇತ್ರದಲ್ಲಿ ಪಕ್ಷ ಸದೃಢ ಹಾಗೂ ಗೆಲುವಿಗೆ ಮೋದಿ ಭೇಟಿ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಘಟಕಕ್ಕೆ ವಿಶೇಷ ಭದ್ರತೆ:

624 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಎಚ್‌ಎಎಲ್‌ ಘಟಕ ಕಟ್ಟಡ ಸುತ್ತಲೂ ಎತ್ತರದ ಗೋಡೆ ನಿರ್ಮಿಸಿ ಕಾಂಪೌಂಡ್‌ ನಿರ್ಮಿಸಿ ಭದ್ರತೆ ನೀಡಲಾಗಿದೆ. ಈ ಎಚ್‌ಎಎಲ್‌ ಉತ್ಪಾದನಾ ಘಟಕದೊಳಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅನುಮತಿ ಪಡೆದ ವ್ಯಕ್ತಿಗಳಿಗೆ ಮಾತ್ರ ಘಟಕದೊಳಗೆ ಪ್ರವೇಶ ಕಲ್ಪಿಸಲಾಗಿದೆ.

4 ವರ್ಷ ತಡವಾಗಿ ಕಾರ್ಯಾರಂಭ:

2016ರ ಜನವರಿ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದಾಗ ಎರಡೇ ವರ್ಷದಲ್ಲಿ ಈ ಘಟಕ ಪೂರ್ಣಗೊಂಡು ಇಲ್ಲಿಂದಲೇ ಮೊದಲ ಹೆಲಿಕಾಪ್ಟರ್‌ ಹಾರಲಿದೆ ಎಂದಿದ್ದರು. ಆದರೆ ನಾಲ್ಕು ವರ್ಷಗಳ ತಡವಾಗಿ ಈ ಕನಸು ನನಸಾಗುತ್ತಿದೆ. ಶಂಕುಸ್ಥಾಪನೆ ನೆರವೇರಿಸಿದ 7 ವರ್ಷಗಳ ಬಳಿಕ ಸರ್ಕಾರಿ ಸ್ವಾಮ್ಯದ ಈ ಬೃಹತ್‌ ಉದ್ಯಮಕ್ಕೆ ಖುದ್ದು ಪ್ರಧಾನಿಗಳೇ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

 ಸ್ವದೇಶಿ ಲಘು ಯುದ್ಧ ಕಾಪ್ಟರ್‌ ಘಟಕ ಲೋಕಾರ್ಪಣೆಗೆ ಸಜ್ಜು

ಸ್ವದೇಶಿ ಲಘು ಯುದ್ಧ ಕಾಪ್ಟರ್‌ ಘಟಕ ಲೋಕಾರ್ಪಣೆಗೆ ಸಜ್ಜು

6ರಂದು ಪ್ರಧಾನಿ ಮೋದಿ ಅವರಿಂದ ದೇಶಕ್ಕೆ ಸಮರ್ಪಣೆ

.6400 ಕೋಟಿ ವೆಚ್ಚದ 614 ಎಕರೆಯಲ್ಲಿ ಕ್ಯಾಪ್ಟರ್‌ ನಿರ್ಮಾಣ ಘಟಕ

Follow Us:
Download App:
  • android
  • ios