ಯಾದಗಿರಿ(ಫೆ.25): ಸುರಪುರ ಶಾಸಕ ರಾಜುಗೌಡ ಅಖಾಡಕ್ಕಿಳಿದು ತೊಡೆತಟ್ಟಿ ಕಬಡಿ ಆಡಿದ್ದಾರೆ. ಯುವಕರನ್ನು ನಾಚಿಸುವಂತೆ ಕಬಡಿ ಆಡಿದ ಶಾಸಕರ ವಿಡಿಯೋ ಎಲ್ಲೆಡೆ ಹರಿದಾಡ್ತಿದೆ.

ಸುರಪುರ ಶಾಸಕ ರಾಜುಗೌಡ ಅಪ್ಪಟ ಕಬಡ್ಡಿ ಕ್ರೀಡಾಪಟುವಾಗಿ ಅಖಾಡದಲ್ಲಿ ತೊಡೆತಟ್ಟಿದ್ರು. ರಾಜಕೀಯ ಜಂಜಾಟ ಮರೆತು ಯುವಕರೊಂದಿಗೆ ಸೇರಿ ಕಬಡ್ಡಿ ಆಟವಾಡಿ ರಿಲ್ಯಾಕ್ಸ್ ಆಗಿದ್ದಾರೆ.

ಫೋಟೋಗ್ರಾಫರ್‌ಗಳೇ ಹುಷಾರ್..! ಫೋಟೋಶೂಟ್ ಅಂತ ಕರೆಸಿ ಹೀಗೆ ಮಾಡ್ತಾರೆ

ಕಬಡ್ಡಿ‌ ಅಖಾಡದಲ್ಲಿ ತೊಡೆತಟ್ಟಿದ ಸುರಪುರ ಶಾಸಕ ರಾಜುಗೌಡ, ಯಾದಗಿರಿ ಜಿಲ್ಲೆ ಸುರಪುರ ಪಟ್ಟಣದಲ್ಲಿ ನಡೆದ ಹೊನಲು ಬೆಳಕಿನ ಕಬ್ಬಡಿ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಕುಂಬಾರಪೇಟೆ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಕಬ್ಬಡಿ ಪಂದ್ಯಾವಳಿ ನಡೆದಿತ್ತು.

ದೇವಸ್ಥಾನ ಮಂಡಳಿ ಕಬ್ಬಡಿ ಪಂದ್ಯ ಹಮ್ಮಿಕೊಂಡಿದ್ದು, ಶಾಸಕ ರಾಜುಗೌಡ ಪಂದ್ಯಾಟಗಳ ಉದ್ಘಾಟನೆಗೆ ತೆರಳಿದ್ದರು. ನಂತರ ಅಭಿಮಾನಿಗಳ ಒತ್ತಾಯಕ್ಕೆ ಕಬ್ಬಡಿ ಆಡಿದ್ದಾರೆ.