ಹಿಂದೂಗಳ ರಕ್ತ ಭೂಮಿಗೆ ಬೀಳದಂತೆ ಕಟ್ಟೆಚ್ಚರ: ಸಂಸದ ಘೋಷ​ಣೆ

  • ಹಿಂದೂಗಳ ರಕ್ತ ಭೂಮಿಗೆ ಬೀಳದಂತೆ ಕಟ್ಟೆಚ್ಚರ: ಸಂಸದ ಘೋಷ​ಣೆ
  • ಮುಸ್ಲಿಂ ಗೂಂಡಾಗಳಿಗೆ ತಕ್ಕ ಪಾಠ ಕಲಿಸಬೇಕು: ಶಾಸಕ ಈಶ್ವರಪ್ಪ ಗುಡುಗು
  • ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಭಾರಿ ಪ್ರತಿಭಟನೆ
Strict precautions to prevent the blood of Hindus falling on the ground: MP rav

 ಶಿವಮೊಗ್ಗ (ಜು.30) : ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಗೋಪಿವೃತ್ತದಲ್ಲಿ ಹಿಂದೂಪರ ಸಂಘಟನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಂತಹ ಹೇಯ ಕೃತ್ಯ ಎಸಗುವವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಸರ್ಕಾರ ಸುಮ್ಮನಿರದೆ ಮತಾಂಧ ಮನಸ್ಸುಗಳಿಗೆ ಕಠಿಣ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ಮತ್ತೆಂದೂ ಹಿಂದೂಗಳ ರಕ್ತ ಹತ್ಯೆಯ ರೂಪದಲ್ಲಿ ಈ ಭೂಮಿಗೆ ಬೀಳದಂತೆ ಎಚ್ಚರ ವಹಿಸುತ್ತೇÊಣೆ ಉತ್ತರ ಪ್ರದೇಶದಲ್ಲಿ ಇರುವಂತೆ ‘ಬುಲ್ಡೋಜರ್‌ ಆಪರೇಷನ್‌’ ಕರ್ನಾಟಕದಲ್ಲೂ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ

ಹತ್ಯೆಯಾದ ಪ್ರವೀಣ್‌ ನೆಟ್ಟಾರು ಕುಟುಂಬದ ಕಣ್ಣೀರನ್ನು ನಾವು ಒರೆಸುತ್ತೇವೆ. ಹಿಂದೂ ಸಮಾಜ ಕೊಟ್ಟಆಶೀರ್ವಾದದಿಂದಲೇ ಅಧಿಕಾರಕ್ಕೆ ಬಂದಿದ್ದೇವೆ. ಯಾರೂ ಭಯಪಡಬೇಕಾಗಿಲ್ಲ. ರಾಜಕಾರಣಕ್ಕಿಂತ ಹಿಂದುತ್ವ ದೊಡ್ಡದು ಎಂಬುದು ಬಿಜೆಪಿಗೆ ಗೊತ್ತಿದೆ. ಬಿಜೆಪಿ ಸರ್ಕಾರಕ್ಕೆ ಹಿಂದೂಗಳ ರಕ್ಷಣೆ ಒಂದು ಸವಾಲಾಗಿದೆ. ಅದನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ. ಒಂದು ಸಮುದಾಯವನ್ನು ಓಲೈಸುವವರಿಂದ ಇಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಇದೆಲ್ಲ ಹಿಂದಿನ ಸರ್ಕಾರಗಳು ಕೊಟ್ಟಶಾಪ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಗೂಂಡಾಗಳಿಗೆ ತಕ್ಕ ಪಾಠ- ಈಶ್ವರಪ್ಪ ಗುಡುಗು:

ಮಾಜಿ ಶಾಸಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಕೆಲವು ಮುಸ್ಲಿಂ ಗೂಂಡಾಗಳು ಹೇಯ ಕೃತ್ಯವನ್ನು ನಡೆಸುತ್ತಿದ್ದಾರೆ. ಅವರಿಗೆ ಸಮಾಜದಲ್ಲಿ ಶಾಂತಿ ನೆಲೆಸುವುದು ಬೇಡಾವಾಗಿದೆ. ದೇಶದ್ರೋಹಿಗಳು ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಕೈಯಲ್ಲಿ ಆಗುತ್ತಿಲ್ಲ - ಈಶ್ವರಪ್ಪ

ಹಿಂದೂ ಸಮಾಜದ ಮುಖಂಡ ಯಾದವ ಕೃಷ್ಣ ಮಾತನಾಡಿ, ಹಿಂದೂ ಸಮಾಜ ಬಿಜೆಪಿಯನ್ನು ಗೆಲ್ಲಿಸಿರುವುದು ಪಕ್ಷದ ನಾಯಕರನ್ನು ಕಾರುಗಳಲ್ಲಿ ಓಡಾಡಿಸುವ ಸಲುವಾಗಿ ಅಲ್ಲ ಎಂಬುದು ಮನವರಿಕೆ ಆಗಬೇಕು. ಅವರಿಗೆ ಹಿಂದೂ ಸಮಾಜ ರಕ್ಷಣೆ ಮಾಡಲು ಆಗದಿದ್ದರೆ ಹೇಳಲಿ. ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ನಾವೇ ಮಾಡಿಕೊಳ್ಳುತ್ತೇವೆ. ಕರಾವಳಿ ಭಾಗದಲ್ಲಿ ಬಿಜೆಪಿಯೇ ಗೆದ್ದಿದೆ. ಆರು ಸಲ ಗೆದ್ದು ಶಾಸಕರಾದವರು ಅಲ್ಲಿದ್ದಾರೆ. ಹಿಂದೂ ಸಮಾಜ ಬಿಜೆಪಿ ನಾಯಕರನ್ನು ಗೆಲ್ಲಿಸಿರುವುದು ಅವರನ್ನು ಕಾರ್‌ಗಳಲ್ಲಿ ಓಡಾಡಿಸಲು ಅಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇದು ನಮ್ಮ ಕೊನೆ ಎಚ್ಚರಿಕೆ. ಇನ್ನು ನಾವು ಬಿಜೆಪಿ ನಾಯಕರ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಅದನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖಂಡ ಪಟ್ಟಾಭಿರಾಂ, ವಿಧಾನ ಪರಿಷತ್ತು ಸದಸ್ಯರಾದ ಡಿ.ಎಸ್‌. ಅರುಣ್‌, ಎಸ್‌.ರುದ್ರೇಗೌಡ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್‌, ಮಹಾನಗರ ಪಾಲಿಕೆ ಮೇಯರ್‌ ಸುನಿತಾ ಅಣ್ಣಪ್ಪ, ಪಾಲಿಕೆ ಸದಸ್ಯ ಎಸ್‌.ಎನ್‌. ಚನ್ನಬಸಪ್ಪ ಮೊದಲಾದವರಿದ್ದರು.]

Latest Videos
Follow Us:
Download App:
  • android
  • ios