Asianet Suvarna News Asianet Suvarna News

ಉತ್ತರ ಕನ್ನಡದಲ್ಲಿ ದುರ್ವಾಸನೆ ಬೀರುವ ‘ವಿಚಿತ್ರ’ ಕೀಟಗಳ ದಾಳಿ!

  • ಕೀಟ ಕಾಟಕ್ಕೆ ಗ್ರಾಮಸ್ಥರು ಹೈರಾಣು, ಅಧಿಕಾರಿಗಳು ನಿದ್ದೆಯಲ್ಲಿ!
  • ಬಾಯಿ ಮೂಗು ಮುಚ್ಚಿಕೊಂಡಿರಬೇಕಾದ ಪರಿಸ್ಥಿತಿ 

ಉತ್ತರ ಕನ್ನಡದ ಜಿಲ್ಲೆಯ ಮುಂಡಗೋಡು ತಾಲೂಕಿನ ಕೂರ್ಲಿ ಗ್ರಾಮದಲ್ಲಿ ವಿಚಿತ್ರ ಕೀಟಗಳ ಕಾಟ ಆರಂಭವಾಗಿದೆ. ದುರ್ವಾಸನೆ ಬೀರುವ ಈ ಕೀಟಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಗ್ರಾಮಕ್ಕೆ ದಾಳಿ ಮಾಡಿದ್ದು, ಗ್ರಾಮಸ್ಥರು ಹೈರಾಣಾಗಿದ್ದಾರೆ.