ಬೆಂಗಳೂರು(ಫೆ.18): ವಿಜಯನಗರದ ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ವರನಟ ಡಾ| ರಾಜ್‌ಕುಮಾರ್ ಪ್ರತಿಮೆ, ಅವರ ಹೆಸರಿನ ಉದ್ಯಾನ ಹಾಗೂ ರಸ್ತೆಯನ್ನು ನಟ ಪುನೀತ್‌ರಾಜ್‌ಕುಮಾರ್ ಲೋಕಾರ್ಪಣೆ ಮಾಡಿದರು.

ಈ ವೇಳೆ ಪುನೀತ್‌ರಾಜ್‌ಕುಮಾರ್ ಮಾತನಾಡಿ, ಡಾ| ರಾಜ್‌ಕುಮಾರ್ ನಮ್ಮ ತಂದೆ ಎನ್ನುವುದೇ ನಮಗೆ ಗೌರವದ ವಿಚಾರ. ಅವರ ನಟನೆ ನಮಗೆ ಸದಾ ಸ್ಪೂರ್ತಿ. ತಂದೆಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇವೆ.

ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ ಬಸ್ ಸ್ಥಗಿತ!

ಅವರ ವ್ಯಕ್ತಿತ್ವ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಲಾದಷ್ಟು ಸಮಾಜ ಸೇವೆ ಮಾಡುತ್ತೇವೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ರೂಪಿಸಿಕೊಂಡರೆ ಎಲ್ಲರೂ ನಮ್ಮನ್ನೂ ಪ್ರೀತಿಸುತ್ತಾರೆ ಎಂದು ತಿಳಿಸಿದರು. ಈ ವೇಳೆ ಪಾಲಿಕೆ ಸದಸ್ಯ ಎನ್.ಆರ್. ರಮೇಶ್ ಹಾಗೂ ರಾಜು ಉಪಸ್ಥಿತರಿದ್ದರು.