ವಿರಾಜಜೇಟೆ(ಏ.07): ತಿತಿಮತಿಯ ಸ್ವಾತಿ ಮೆಡಿಕಲ್ಸ್‌ನ ಮಾಲೀಕರಾದ ಫಿಲೋಮಿನಾ ಅವರ ವಿಶೇಷಚೇತನ ಮಗಳು ಸ್ವಾತಿ, ತನ್ನ ಸ್ವಂತ ಉಳಿತಾಯದ ಹಣದಲ್ಲಿ 50 ಸಾವಿರ ರುಪಾಯಿನ್ನು ಕೋವಿಡ್‌-19 ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

50 ಸಾವಿರ ರು. ಮೊತ್ತದ ಚೆಕ್‌ನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಸೋಮವಾರ ಹಸ್ತಾಂತರಿಸಿದರು. ಎಲ್ಲ ಸೌಕರ್ಯಗಳಿದ್ದರೂ ಸಹಾಯ ಮಾಡುವ ಮನೋಭಾವವಿಲ್ಲದ ಇಂದಿನ ಪರಿಸ್ಥಿತಿಯಲ್ಲಿಯೂ ಸಾಮಾನ್ಯ ಮನುಷ್ಯರಂತೆ ಬದುಕುವ ಸ್ಥಿತಿಯನ್ನು ಕಳೆದುಕೊಂಡ ವಿಶೇಷಚೇತನ ಹೊಂದಿರುವ ಸ್ವಾತಿ ಸಮಾಜದ ನೋವಿಗೆ ಮಿಡಿದು ಕಂಬನಿ ಮಿಡಿದು ಸಹಾಯ ಮಾಡುವ ಮನೋಭಾವ ಬಳಸಿಕೊಂಡಿರುವುದು ಬಹಳ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಶಾಸಕ ಬೋಪಯ್ಯ ಶ್ಲಾಘಿಸಿದರು.

ಗುಡ್ಡದಲ್ಲಿ ಅಡಗಿದ್ದ ಶಂಕಿತ ತಬ್ಲಿಘಿಗಗಳು ಪರಾರಿ.!

ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ನೋಡಿ ಜನರ ಸಂಕಷ್ಟಕ್ಕೆ ಕಣ್ಣೀರು ಸುರಿಸಿ ಏನಾದರೂ ಒಂದು ಸಹಾಯ ಸಮಾಜಕ್ಕೆ ಆಗಬೇಕೆಂಬ ಮನೋಭಾವವನ್ನು ಹೊಂದಿ ತನ್ನ ಉಳಿತಾಯದ ಹಣವನ್ನು ನೊಂದ ಜನರಿಗೆ ನೀಡಲು ಮುಂದಾಗಿದ್ದಾಳೆ ಎಂದು ಸ್ವಾತಿಯ ತಾಯಿ ಫಿಲೋಮಿನಾ ತಿಳಿಸಿದರು.

ನಾಲ್ಕು ಜನ ಕೊರೋನಾ ಸೋಂಕಿತರು ಗುಣಮುಖ, ಹೊಸ ಪ್ರಕರಣವಿಲ್ಲ

ಬಿಜೆಪಿ ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ ಗಣಪತಿ, ಆರ್‌ಎಂಸಿ ಸದಸ್ಯ ಗುಮ್ಮಟಿರ ಕಿಲನ್‌ ಗಣಪತಿ, ತಿತಿಮತಿ ಸ್ಥಾನೀಯ ಸಮಿತಿ ಅಧ್ಯಕ್ಷ ಎನ್‌.ಎನ್‌. ಅನುಪ್‌, ಪ್ರಮುಖರಾದ ಅಪ್ಪಿ, ಗಣೇಶ್‌, ಚೆಪ್ಪುಡಿರ ಮಾಚಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಸಹಾಯಕ ನರಸಿಂಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.