ಮಂಡ್ಯ(ಜ.24): ಮಕರ ರಾಶಿಗೆ ಶನಿ ಪ್ರವೇಶ ಹಿನ್ನೆಲೆ ಎಲ್ಲಡೆ ವಿಶೇಷ ಪೂಜೆ, ಹವನಗಳು ನಡೆಯುತ್ತಿದೆ. ಮಂಡ್ಯದ ಶನೇಶ್ವರ ದೇವಾಲಯಗಳಲ್ಲಿ ಶನಿ ಶಾಂತಿ ಪೂಜೆ ನಡೆದಿದೆ. ಶನಿ ಶಾಂತಿಗಾಗಿ ರುದ್ರ ಹೋಮ ಹಾಗೂ ಕುಂಬಾಭಿಷೇಕವೂ ನೆರವೇರಿಸಲಾಗಿದೆ.

ಮಕರ ರಾಶಿ ಪ್ರವೇಶಿಸುತ್ತಿದ್ದಾನೆ ಶನಿ, ಯಾವ ರಾಶಿಗೇನು ಫಲ?

ಮಂಡ್ಯದ ಬನ್ನೂರು ರಸ್ತೆಯಲ್ಲಿರೊ ದೇವಾಲಯದಲ್ಲಿ ರುದ್ರ ಹೋಮಕ್ಕೆ ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ವಿಶೇಷ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮುಂಜಾನೆಯಿಂದಲೂ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಉಡುಪಿ ಸೇರಿದಂತೆ ರಾಜ್ಯದ ಹಲವು ಕಡೆ ಶನಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಶನೀಶ್ವರ ದೇವಾಲಯಗಳಲ್ಲಿ ಶಾಂತಿ ಪೂಜೆ ನಡೆದಿದೆ.