ಕಲಬುರಗಿ(ಮಾ.15):  ಮಾ.13 ರಿಂದ ಮಾರ್ಚ್ 31 ರವರೆಗೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದ ಇಲಾಖೆ ಇನ್ನೂ ಕೆಲ ರೈಲುಗಳ ಮಾರ್ಗ ರದ್ದುಗೊಳಿಸಲಾಗಿದೆ. 

ವಾಡಿ-ಸೊಲ್ಲಾಪುರ (71306) ಪ್ಯಾಸೆಂಜರ್ ರೈಲನ್ನು ಇದೇ 14 ರಿಂದ 31 ರವರೆಗೆ, ಕಲಬುರಗಿ-ಸೊಲ್ಲಾಪುರ (57628) ಪ್ಯಾಸೆಂಜರ್ ರೈಲನ್ನು ಇದೇ 13ರಿಂದ 30ರವರೆಗೆ, ಕಲಬುರಗಿ-ವಾಡಿ ಡೆಮು ರೈಲನ್ನು 13ರಿಂದ 30ರವರೆಗೆ ರದ್ದುಗೊಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಜಯಪುರ-ರಾಯಚೂರು (57133) ಪ್ಯಾಸೆಂಜರ್ ರೈಲು ಸೊಲ್ಲಾಪುರದವರೆಗೆ ಮಾತ್ರ ಸಂಚರಿಸಲಿದೆ. ರಾಯಚೂರು-ವಿಜಯಪುರ ಪ್ಯಾಸೆಂಜರ್ ರೈಲು ಸೊಲ್ಲಾಪುರದಿಂದ ವಿಜಯಪುರದವರೆಗೆ ಮಾತ್ರ ಸಂಚರಿಸಲಿದೆ. ಸೊಲ್ಲಾಪುರ-ಗುಂತಕಲ್ ಡೆಮು ರೈಲು ಮಾರ್ಚ್ 14ರಿಂದ 31ರವರೆಗೆ ಸೊಲ್ಲಾಪುರದ ಬದಲು ಕಲಬುರಗಿ-ಗುಂತಕಲ್ ಮಧ್ಯೆ ಮಾತ್ರ ಸಂಚರಿಸಲಿದೆ. ಸೊಲ್ಲಾಪುರ ಫಲಕನಮಾ ಪ್ಯಾಸೆಂಜರ್ ರೈಲು ಮಾ 13ರಿಂದ 30ರವರೆಗೆ ಕಲಬುರಗಿಯಿಂದ ಫಲಕನಮಾ ಮಧ್ಯೆ ಸಂಚರಿಸಲಿದೆ.