ಕೋಲಾರ (ಫೆ.27) :  ಕೋಲಾರ ಮೂಲದ ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಹಾಗೂ ಯೋಧರ ನಡುವೆ ನಡೆದ ಚಕಮಕಿಯಲ್ಲಿ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ.

ಕೋಲಾರ ಮೂಲದ ಯೋಧ ಜಮ್ಮುವಿನಲ್ಲಿ ಹುತಾತ್ಮರಾಗಿದ್ದು, ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಗ್ರಾಮದವರು. 17 ಮದ್ರಾಸ್ ರೆಜಿಮೆಂಟ್‌ನ ಪ್ರಾಶಾಂತ್ (25) ಹುತಾತ್ಮ ಯೋಧ.

ಸೇನಾ ಸಮವಸ್ತ್ರದಲ್ಲಿ ದೆಹಲಿ ಪೊಲೀಸ್: ಕ್ರಮ ಕೈಗೊಳ್ಳಲು ಮುಂದಾದ ಇಂಡಿಯನ್ ಆರ್ಮಿ!

ನಿನ್ನೆ ಸಂಜೆ ಜಮ್ಮು- ಕಾಶ್ಮೀರದಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮ‌ರಾಗಿದ್ದಾರೆ. ಹುತಾತ್ಮ ಯೋಧ ಪ್ರಾಶಂತ್ ಈಗಾಗಲೇ ತಂದೆಯನ್ನ ಕಳೆದುಕೊಂಡಿದ್ದರು. ನಾಳೆ ಬಂಗಾರಪೇಟೆಯ ಸ್ವಗ್ರಾಮ ಕಣಿಂಬೆಲೆಗೆ ಹುತಾತ್ಮ ಪ್ರಶಾಂತ್ ಪಾರ್ಥಿವ ಶರೀರ ತಲುಪಲಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"