Asianet Suvarna News Asianet Suvarna News

ದಾನ, ಧರ್ಮ, ಸಾಮಾಜಿಕ ಸೇವೆಗೆ ಕೈ ಜೋಡಿಸಿ: ಸಿದ್ಧೇಶ್ವರ ಸ್ವಾಮೀಜಿ

ಕರುಣೆಯ ಗೋಡೆ ಲೋಕಾರ್ಪಣೆಯಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅಭಿನುಡಿ|ದೇವರು ನಮಗೆ ಮಳೆ, ಗಾಳಿ, ನೀರು ಕೊಟ್ಟಿದ್ದಾನೆ| ದೇವರಿಗೆ ನಾನು ಕೊಟ್ಟೇ ಎಂಬ ಭಾವ ಇರಲ್ಲ| ಮೌನವಾಗಿ ಕೊಡುತ್ತಲೇ ಇರುತ್ತಾನೆ| ನಾವೆಲ್ಲ ಪಡೆಯುತ್ತಲೇ ಇರುತ್ತೇವೆ. ಪಡೆದ ನಾವೆಲ್ಲ ಒಂದಷ್ಟು ದಾನ-ಧರ್ಮ ಮಾಡಬೇಕು|

Siddeshwara Swamiji Talks Over Social service
Author
Bengaluru, First Published Feb 10, 2020, 12:35 PM IST

ಬಾಗಲಕೋಟೆ(ಫೆ.10): ಕರುಣೆಯ ಗೋಡೆ ಹೆಸರಿನಲ್ಲಿ ಬಡವರ ಸೇವೆಗೆ ಮುಂದಾಗಿರುವುದು ದಾನ-ಧರ್ಮ-ಸಾಮಾಜಿಕ ಸೇವೆಗೆ ಹೊಸ ಪರಂಪರೆಯಾಗಿದೆ. ಇದು ಇನ್ನೂ ಹೆಮ್ಮರವಾಗಿ ಬೆಳೆಯಬೇಕು. ಬಡವರು ತಮಗೆ ಬೇಕಾದ ವಸ್ತುಗಳನ್ನು ಯಾವ ಸಂಕೋಚವಿಲ್ಲದೇ ಇಲ್ಲಿಗೆ ಬಂದು ಪಡೆಯಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನುಡಿದ್ದಾರೆ. 

ನಗರದ ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಕರುಣೆಯ ಗೋಡೆ (ನಿಮಗೆ ಬೇಡವಾದ ವಸ್ತುಗಳನ್ನು ಇಡಿ,ಬಿಡಿ. ಅಗತ್ಯವಿದ್ದರೆ ತೆಗೆದುಕೊಳ್ಳಿ) ನೂತನ ಸೇವೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

ಶ್ರೀಮಂತರು, ಬಡವರು ಎನ್ನದೇ ತಾವು ಬಳಸಿ, ಇಲ್ಲವೇ ಬೇಡವಾದ ವಸ್ತುಗಳನ್ನು ಇಲ್ಲಿಟ್ಟು, ಬೇಕಾಗುವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಒಂದು ಒಳ್ಳೆಯ ಸಾಮಾಜಿಕ ಸೇವೆ. ತಮಗೆ ಬೇಡವಾದ ವಸ್ತುಗಳನ್ನು ತಮ್ಮ ಮನೆಯ ಎದುರಿನ ರಸ್ತೆಯ ಬದಿಗೆ ಇಟ್ಟಿರುತ್ತಾರೆ. ಆ ವಸ್ತುಗಳನ್ನು ಬೇಕಾದವರು ತೆಗೆದುಕೊಂಡು ಹೋಗುತ್ತಾರೆ. ಇಂತಹ ದಾನದ ಸೇವೆ ವಿದೇಶದಲ್ಲಿ ನೋಡಿದ್ದೆ. ನಮ್ಮಲ್ಲಿ ಇರಲಿಲ್ಲ. ಬಾಗಲಕೋಟೆಯಲ್ಲಿ ದಾನ-ಸೇವೆಯ ಹೊಸ ಪರಂಪರೆ ಆರಂಭಿಸಿರುವುದು ಬಹಳ ಸಂತೋಷ ಇದು. ಎಲ್ಲ ಬಡವರ ಪಾಲಿನ ಬದುಕಿನ ಗೋಡೆಯಾಗಬೇಕು ಎಂದು ಹಾರೈಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವರು ನಮಗೆ ಮಳೆ, ಗಾಳಿ, ನೀರು ಕೊಟ್ಟಿದ್ದಾನೆ. ದೇವರಿಗೆ ನಾನು ಕೊಟ್ಟೇ ಎಂಬ ಭಾವ ಇರಲ್ಲ. ಮೌನವಾಗಿ ಕೊಡುತ್ತಲೇ ಇರುತ್ತಾನೆ. ನಾವೆಲ್ಲ ಪಡೆಯುತ್ತಲೇ ಇರುತ್ತೇವೆ. ಪಡೆದ ನಾವೆಲ್ಲ ಒಂದಷ್ಟು ದಾನ-ಧರ್ಮ ಮಾಡಬೇಕು ಎಂದರು. 

ಕೇಸರಟ್ಟಿಯ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂಬಂತೆ ಕರುಣೆಯ ಗೋಡೆ, ಸಾಮಾಜಿಕ ಸೇವೆಗೆ ಸಜ್ಜಾಗಿದೆ. ಬಡವರು, ಹಿಂದುಳಿದವರಿಗೆ ಇದು ಸಹಕಾರಿಯಾಗಲಿದೆ. ಇದ್ದವರು, ಬೇಡವಾದ ವಸ್ತುಗಳನ್ನು ಬೀಸಾಡುವ ಬದಲು ಇಲ್ಲಿಡಿ. ಅದನ್ನು ಬಡವರು ಪಡೆಯುತ್ತಾರೆ. ಬಡವರ ಬದುಕಿನ ಗೋಡೆಯಾಗಿ ಇದು ಪರಿವರ್ತನೆಯಾಗಲಿದೆ. ಎಲ್ಲರಲ್ಲೂ ದಾನ ಮಾಡುವ ಸ್ವಭಾವ ಬೆಳೆಯಬೇಕು. ಆಶೆ ಇಲ್ಲದ ಸೇವೆ ಇರಬೇಕು ಎಂದರು. 

ತುಳಸಿ ಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ.ಬಾಬುರಾಜೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿ ಎಷ್ಟೋ ವಸ್ತುಗಳನ್ನು ಬಳಸದೇ ಹಾಗೆ ಇಡುತ್ತೇವೆ. ಕೆಲವರು ಎಸೆಯುತ್ತಾರೆ. ಅಂತಹ ವಸ್ತುಗಳು ಬಡವರ ಮನೆ ಸೇರಬೇಕು. ಅವರಿಗೆ ನಿತ್ಯ ಬಳಕೆಗೆ ಬರುವ ವಸ್ತುಗಳು ದೊರೆಯಬೇಕು. ಅದಕ್ಕಾಗಿ ಕರುಣೆಯ ಗೋಡೆ ಎಂಬ ಹೊಸ ಪರಿಕಲ್ಪ ನೆಯ ಸೇವೆ ಆರಂಭಿಸಲಾಗಿದೆ ಎಂದರು. 

ಇದೇ ಸಂ ದರ್ಭದಲ್ಲಿ ಶಂಕರಲಿಂಗೇಶ್ವರ ದಿನದರ್ಶಿಕೆ ಬಿಡುಗಡೆ ಗೊಳಿಸಲಾಯಿತು. ಕರುಣೆಯ ಗೋಡೆ ಎಂಬ ಸೇವಾ ಕಾರ್ಯ ಆರಂಭಿಸಿದ ಡಾ.ಬಾಬುರಾಜೇಂದ್ರ ನಾಯಕ ಮತ್ತು ಡಾ.ಶೀತಲ ನಾಯಕ ಅವರನ್ನು ಶ್ರೀಸಿದ್ಧೇಶ್ವರ ಸ್ವಾಮೀಜಿ ಸನ್ಮಾನಿಸಿದರು. ಡಾ.ಸಂದೀಪ ಹುಯಿಲಗೋಳ, ಬಿಎಸ್ಡ್‌ಬ್ಲು ಸದಸ್ಯ ಪ್ರದೀಪ ಕುಲಕರ್ಣಿ, ಬಸವರಾಜ ಭಗವತಿ, ಅಮರೇಶ ಕೊಳ್ಳಿ, ಮಂಜುಳಾ ಮಿಸ್ಕಿನ್, ಮಾಲಪಾನಿ, ರಾಜಕುಮಾರ ಚವ್ಹಾಣ, ಪ್ರಕಾಶ ನಾಯಕ, ಬಾಲಗಂಗಾಧರ ನಾಯಕ, ಸುನೀಲ ನಾಯಕ ಮುಂತಾದವರು ಉಪಸ್ಥಿತರಿದ್ದರು.

ಈ ಕರುಣೆಯ ಗೋಡೆ ಮೇಲೆ ಎಲ್ಲರೂ ಒಂದಷ್ಟು ವಸ್ತುಗಳನ್ನು ಇಡೋಣ. ದಾನದ ಹೊಸ ಪದ್ಧತಿ ಇದು. ಸತ್ಯಂ ವಧ-ಧಮರ್ಂ ಚರ ಎಂಬಂತೆ ಪ್ರಾಮಾಣಿಕತೆ ಹಾಗೂ ಸುಂದರ ಕಾರ್ಯ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಇದೊಂದು ಸಮಾಧಾನದ ಕಾರ್ಯ. ಇಟ್ಟವರು, ಪಡೆದವರ ಇಬ್ಬರಲ್ಲೂ ದೇವರ ಭಾವನೆ ಶುರುವಾಗುತ್ತದೆ. ಇಡಲು ಈ ಗೋಡೆ ಸಾಲಬಾರದು. ಮೌನವಾ ಗಿ ಮಾಡಿದ ದಾನ, ಮೌನವಾಗಿ ಸ್ವೀಕಾರ ಮಾ ಡಬೇಕು. ಹಾಗೆ ನಡೆದರೆ ಬಡವರು ಅನ್ನೋರು ಉಳಿಯಲ್ಲ. ಇದೊಂದು ಒಳ್ಳೆಯ ಸಂಸ್ಕೃತಿ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನುಡಿದಿದ್ದಾರೆ. 

ನಗರದ ಜನರು, ತಮಗೆ ಬೇಡವಾದ, ಬಳಸಲು ಅಗತ್ಯವಾಗುವ ವಸ್ತುಗಳನ್ನು ಇಲ್ಲಿಗೆ ತಂದು ಇಡಬೇಕು. ಯಾರಿಗೇ ಯಾವುದೇ ವಸ್ತು ಬೇಕಾದರೂ ಅದನ್ನು ತೆಗೆದುಕೊಂಡು ಹೋಗಬಹುದು. ಇಂತಹವೊಂದು ಸಾಮಾಜಿಕ ಕಾರ್ಯಕ್ಕೆ ಶ್ರೀತುಳಸಿಗಿರೀಶ ಪ್ರತಿಷ್ಠಾನ, ರಾಷ್ಟ್ರೀಯ ಸೇವಾ ವೈದ್ಯರ ಸಂಘ, ವಿಜಯಪುರದ ಮೆಡ್ ಮಂಥನ ಹೆಲ್ತಕೇರ್ ಪ್ರೇವೈಟ್ ಲಿ, ಸಂತ ಸೇವಾಲಾಲ ಬಂಜಾರಾ ಪತ್ತಿನ ಸಹಕಾರ ಸಂಘ, ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತರ ತಂಡ ಸಹಕಾರ ನೀಡಿವೆ. ಬಾಗಲಕೋಟೆಯಲ್ಲಿ ಪ್ರಥಮ ಬಾರಿಗೆ ಆರಂಭವಾದ ಈ ಕರುಣೆಯ ಗೋಡೆಗೆ ಎಲ್ಲರ ಸಹಕಾರ ಇರಲಿ ಎಂದು  ತುಳಸಿಗಿರೀಶ ಮಧುಮೇಹ ಆಸ್ಪತ್ರೆ ಮತ್ತು ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ.ಬಾಬುರಾಜೇಂದ್ರ ನಾಯಕ ತಿಳಿಸಿದ್ದಾರೆ. 

Follow Us:
Download App:
  • android
  • ios