Asianet Suvarna News Asianet Suvarna News

ಕೇಳಿದ್ದನ್ನೆಲ್ಲ ಕೊಟ್ಟರೂ ಪಕ್ಷ ಬಿಟ್ಟರು: ಸಿದ್ದರಾಮಯ್ಯ ಕಿಡಿ

ಪಕ್ಷದಲ್ಲಿ ಕಷ್ಟಪಟ್ಟು ಟಿಕೆಟ್‌ ಕೊಡಿಸಿದೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಾಡಿದೆ, ಕೇಳದಾಗಲೆಲ್ಲಾ ಅನುದಾನ ಕೊಟ್ಟು ಕ್ಷೇತ್ರ ಅಭಿವೃದ್ಧಿ ಮಾಡಿದ ಮೇಲೆ ಡಾ.ಸುಧಾಕರ್‌ ಪಕ್ಷವನ್ನು ತೊರೆದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

siddaramaiah taunts disqualified mla
Author
Bangalore, First Published Dec 3, 2019, 11:17 AM IST

ಚಿಕ್ಕಬಳ್ಳಾಪುರ(ಡಿ.03): ಪಕ್ಷದಲ್ಲಿ ಕಷ್ಟಪಟ್ಟು ಟಿಕೆಟ್‌ ಕೊಡಿಸಿದೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಾಡಿದೆ, ಕೇಳದಾಗಲೆಲ್ಲಾ ಅನುದಾನ ಕೊಟ್ಟು ಕ್ಷೇತ್ರ ಅಭಿವೃದ್ಧಿ ಮಾಡಿದ ಮೇಲೆ ಡಾ.ಸುಧಾಕರ್‌ ಪಕ್ಷವನ್ನು ತೊರೆದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಆಂಜಿನಪ್ಪ ಪರ ಕ್ಷೇತ್ರದಲ್ಲಿ ಸೋಮವಾರ ಮತಯಾಚನೆ ಮಾಡಿದ ವೇಳೆ ಮಾತನಾಡಿದ ಅವರು, ಜಿಲ್ಲೆಗೆ ಮೆಡಿಕಲ್‌ ಕಾಲೇಜು ಕೊಟ್ಟಿದ್ದು, ಬಜೆಟ್‌ನಲ್ಲಿ ಅನೌನ್ಸ್‌ ಮಾಡಿದ್ದು ನನ್ನ ಅಧಿಕಾರವಧಿಯಲ್ಲಿ. ಬಯಲು ಸೀಮೆಯ ನೀರಿನ ಬವಣೆ ನೀಗಿಸಲು 14 ಸಾವಿರ ಕೋಟಿ ಅನುದಾನ ಎತ್ತಿನಹೊಳೆ ಯೋಜನೆಗೆ, 2,200 ಕೋಟಿ ಕೆಸಿ ಮತ್ತು ಎಚ್‌ಎನ್‌ ವ್ಯಾಲಿ ಯೋಜನೆಗೆ ಮಂಜೂರು ಮಾಡಿದ್ದು ರೈತರ ಸ್ವಾಭಿಮಾನದ ಜೀವನಕ್ಕಾಗಿ ಎಂದರು.

ಕಾಂಗ್ರೆಸ್‌ಗೆ ಮತ ನೀಡಿ:

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪಕ್ಷಾಂತರ ಮಾಡಿದ 17 ಶಾಸಕರನ್ನು ಅನರ್ಹತೆ ಮಾಡಿರುವುದು ಕಾನೂನು ಬದ್ಧವಾಗಿರುವುದಿಂದ ನ್ಯಾಯಾಲಯವೂ ಇವರನ್ನು ನಾಲಾಯಕ್‌ ಎಂದು ತೀರ್ಮಾನ ಮಾಡಿದೆ. ಆದ್ದರಿಂದ ಡಿ.5 ರಂದು ಇವರನ್ನು ನೀವು ಶಾಶ್ವತವಾಗಿ ನಾಲಾಯಕ್‌ ಮಾಡಬೇಕು. ಕಾಂಗ್ರೆಸ್‌ಗೆ ಮತ ನೀಡಬೇಕೆಂದು ಮನವಿ ಮಾಡಿದ್ದಾರೆ.

ಬಹಿರಂಗ ಪ್ರಚಾರ ಕೊನೆ ದಿನ: ಕೆ.ಆರ್‌. ಪೇಟೆಯಲ್ಲಿ ಕಾಂಗ್ರೆಸ್ ಸಭೆ

ಕೇಂದ್ರ ಸರ್ಕಾರ ದೇಶವನ್ನು ಹಾಳು ಮಾಡುತ್ತಿದೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ತೊಲಗಿದರೆ ಉತ್ತಮವಾಗಿದೆ. ಪಕ್ಷಾಂತರಿಗಳಿಗೆ ವಿರುದ್ಧ ಅಲೆಯಿದೆ. 15 ಕ್ಷೇತ್ರಗಳಲ್ಲಿಯೂ ಪಕ್ಷಾಂತರಿಗಳು ಸೋಲಲಿದ್ದಾರೆ. ಇವರು ಗೆದ್ದರೆ ರಾಜ್ಯದ ರಾಜಕೀಯ ಹಾಗೂ ಪ್ರಜಾಪ್ರಭುತ್ವ ಹಾಳಾಗುತ್ತದೆ. ಅಂಬೇಡ್ಕರ್‌ರವರ ಸಂವಿಧಾನ ಹಾಳಾಗುತ್ತದೆ ಎಂದು ಹೇಳಿದ್ದಾರೆ.

ಭಸ್ಮಾಸುರನ ಅಪರಾವತಾರ

ಕಾಂಗ್ರೆಸ್‌ ತತ್ವ, ನೀತಿ ಒಪ್ಪಿ, ಪಕ್ಷದ ಚಿಹ್ನೆಯಡಿ ಗೆಲುವು ಪಡೆದ ನಂತರ ಎಲ್ಲವನ್ನೂ ಕಡೆಗಣಿಸಿ ದ್ರೋಹ ಬಗೆದ ಸುಧಾಕರ್‌ ಭಸ್ಮಾಸುರನ ಅಪರಾವತಾರವಾಗಿದ್ದು, ಬೆಳೆಯಲು ಕಾರಣರಾದ ಸಿದ್ದರಾಮಯ್ಯ ಅವರ ತಲೆ ಮೇಲೆಯೇ ಕೈ ಇಡಲು ಮುಂದಾಗಿದ್ದಾರೆ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು: ಸಿದ್ದರಾಮಯ್ಯ

ಭಸ್ಮಾಸುರನನ್ನು ಹುಟ್ಟಿಸಿದವರೇ ತಕ್ಕ ಶಾಸ್ತಿ ಪಡಬೇಕಿದೆ. ಬೆಳೆಸಿದ ಸಿದ್ದರಾಮಯ್ಯರಿಗೆ ಏನು ಮಾಡಬೇಕೆಂಬುದು ಗೊತ್ತಿದೆ. ಇವರಿಗೆ ಮತ ನೀಡಿ ಗೆಲ್ಲಿಸಿದ ಮತದಾರರೂ ಪಕ್ಷಾಂತರಿಯನ್ನು ಮಟ್ಟಹಾಕಬೇಕಿದೆ. ಆಂಜಿನಪ್ಪರಿಗೆ ಮತ ನೀಡಬೇಕು ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಗೌರಿಬಿದನೂರು ಶಾಸಕ ಎನ್‌.ಎಚ್‌. ಶಿವಶಂಕರರೆಡ್ಡಿ, ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಶಾಸಕರಾದ ವಿ. ಮುನಿಯಪ್ಪ, ಸುಬ್ಬಾರೆಡ್ಡಿ, ಮಾಜಿ ಶಾಸಕ ಎನ್‌. ಸಂಪಂಗಿ, ಅಭ್ಯರ್ಥಿ ಎಂ. ಆಂಜನಪ್ಪ, ನವೀನ್‌ಕಿರಣ್‌, ಜಿ.ಎಚ್‌. ನಾಗರಾಜ್‌, ಯಲುವಹಳ್ಳಿ ರಮೇಶ್‌, ಗಂಗರೇಕಾಲುವೆ ನಾರಾಯಣಸ್ವಾಮಿ, ಮುನೇಗೌಡ ಸೇರಿದಂತೆ ಇತರರು ಇದ್ದರು.

ವಿದ್ಯಾರ್ಥಿ ವೇತನ: ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ

Follow Us:
Download App:
  • android
  • ios