ಗೂಗಲ್‌ ಲುಕ್‌ಔಟ್‌ ಅಸಿಸ್ಟೆಡ್‌ ತಂತ್ರಾಂಶದಲ್ಲಿ ಕನ್ನಡಕ್ಕೆ ಮಾನ್ಯತೆ..!

ದೃಷ್ಟಿ ಸವಾಲಿಗ, ಬೈಲಹೊಂಗಲ ತಾಲೂಕು ಪಂಚಾಯಿತಿ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿರುವ ಸಿದ್ದಲಿಂಗೇಶ್ವರ ಇಂಗಳಗಿ ಈ ತಂತ್ರಾಂಶದಲ್ಲಿ ಕನ್ನಡ ಭಾಷೆ ಸೇರ್ಪಡೆ ಮಾಡುವಂತೆ ಧ್ವನಿ ಎತ್ತಿದ್ದರು. ಗೂಗಲ್‌ ಸಂಸ್ಥೆಯ ಡಿಸೆಬಿಲಿಟಿ ಸಪೋರ್ಟ್‌ ಡಿಸೆಬಿಲಿಟಿ ಹೆಲ್ಪ್‌ಡೆಸ್ಕ್‌ಗೆ 2021ರಲ್ಲಿ ಈ ಮೇಲ್‌ ಮತ್ತು ಟ್ವಿಟರ್‌ ಮೂಲಕ ಮನವಿ ಮಾಡಿದ್ದರು. 

Recognition of Kannada in Google Lookout Assisted Software grg

ಶ್ರೀಶೈಲ ಮಠದ

ಬೆಳಗಾವಿ(ನ.05): ದೃಷ್ಟಿದೋಷವುಳ್ಳವರ ಅನುಕೂಲಕ್ಕಾಗಿ ಗೂಗಲ್‌ ಸಂಸ್ಥೆಯು ರೂಪಿಸಿರುವ ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶಕ್ಕೆ ಕನ್ನಡ ಭಾಷೆ ಸೇರ್ಪಡೆಯಾಗಿದೆ. ಈ ಮೂಲಕ ದೃಷ್ಟಿದೋಷ ಹೊಂದಿರುವವರು ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸುಲಭವಾಗಿ ಅರಿಯಬಹುದಾಗಿದೆ.

ದೃಷ್ಟಿ ಸವಾಲಿಗ, ಬೈಲಹೊಂಗಲ ತಾಲೂಕು ಪಂಚಾಯಿತಿ ಕಚೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿರುವ ಸಿದ್ದಲಿಂಗೇಶ್ವರ ಇಂಗಳಗಿ ಈ ತಂತ್ರಾಂಶದಲ್ಲಿ ಕನ್ನಡ ಭಾಷೆ ಸೇರ್ಪಡೆ ಮಾಡುವಂತೆ ಧ್ವನಿ ಎತ್ತಿದ್ದರು. ಗೂಗಲ್‌ ಸಂಸ್ಥೆಯ ಡಿಸೆಬಿಲಿಟಿ ಸಪೋರ್ಟ್‌ ಡಿಸೆಬಿಲಿಟಿ ಹೆಲ್ಪ್‌ಡೆಸ್ಕ್‌ಗೆ 2021ರಲ್ಲಿ ಈ ಮೇಲ್‌ ಮತ್ತು ಟ್ವಿಟರ್‌ ಮೂಲಕ ಮನವಿ ಮಾಡಿದ್ದರು. ಇಂಗಳಗಿ ಅವರ ಮನವಿಗೆ ಎರಡು ವರ್ಷಗಳ ಬಳಿಕ ಸ್ಪಂದಿಸಿರುವ ಗೂಗಲ್‌ ಕಳೆದ ಆಗಸ್ಟ್‌ 17 ರಂದು ಈ ತಂತ್ರಾಂಶಕ್ಕೆ ಕನ್ನಡ ಭಾಷೆಯನ್ನು ಸೇರ್ಪಡೆಗೊಳಿಸುವ ಮೂಲಕ ದೃಷ್ಟಿಹೀನರ ಬದುಕಿಗೆ ಬೆಳಕಾಗಿದೆ. ಈ ಮೂಲಕ ತಂತ್ರಾಂಶ ಜಾಗತಿಕವಾಗಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಾಗಿದೆ.

ಸಿಎಂ ಉಪಹಾರ ಸಭೆಗೆ ಆಹ್ವಾನವಿತ್ತು, ಹೋಗಿರಲಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದೃಷ್ಟಿದೋಷವುಳ್ಳವರ ಅನುಕೂಲಕ್ಕಾಗಿ ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶಕ್ಕೆ ಕನ್ನಡ ಭಾಷೆ ಸೇರ್ಪಡೆ ಮಾಡುವಂತೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಹೋರಾಟ ಮಾಡುತ್ತ ಬಂದಿದ್ದೆ. ಕೊನೆಗೂ ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದು ಸಿದ್ದಲಿಂಗೇಶ್ವರ ಇಂಗಳಗಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಏನೇನು ಮಾಡಬಹುದು?:

ಈ ತಂತ್ರಾಂಶದ ಮೂಲಕ ದೃಷ್ಟಿಹೀನರು ತಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸುಲಭವಾಗಿ ಗುರುತಿಸಬಹುದು. ಪಠ್ಯ, ಪುಸ್ತಕ ಓದಬಹುದು. ದಿನಪತ್ರಿಕೆಗಳನ್ನು ಓದಬಹುದು. ಫೋನ್‌ನ ಹಿಂಭಾಗದ ಕ್ಯಾಮೆರಾ ಬಳಸಿ ವಿವಿಧ ಸಂಗತಿಯನ್ನು ತಿಳಿಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಪ್ಲೆ ಸ್ಟೋರ್‌ ಆ್ಯಪ್‌ಗೆ ಹೋಗಿ, ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶ ಡೌನ್ ಲೋಡ್‌ ಮಾಡಿಕೊಳ್ಳಬೇಕು. ಇದರಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ಸ್‌, ಎಕ್ಸಪ್ಲೋರ್‌, ಕರೆನ್ಸಿ, ಫುಡ್‌ಲೇಬಲ್ಸ್‌, ಇಮೇಜಸ್‌ ಎಂಬ 6 ವಿಧಾನಗಳಿವೆ. ಕನ್ನಡ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಫೋನ್‌ನ ಹಿಂಭಾಗದ ಕ್ಯಾಮೆರಾ ಬಳಸಿ ವಿವಿಧ ಸಂಗತಿ ತಿಳಿಯಬಹುದು.

ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ: ಸಚಿವ ಶರಣ ಪ್ರಕಾಶ ಪಾಟೀಲ

ಟೆಕ್ಸ್ಟ್ ವಿಧಾನವು ಕನ್ನಡ ಭಾಷೆಯಲ್ಲಿರುವ ಪಠ್ಯ ಗುರುತಿಸಿ, ಗಟ್ಟಿಯಾಗಿ ಓದಿ ಹೇಳುತ್ತದೆ. ಇದರಿಂದ ವಿವಿಧ ಪುಸ್ತಕ, ದಾಖಲೆಗಳು ಹಾಗೂ ದಿನಪತ್ರಿಕೆಗಳಲ್ಲಿ ಮಾಹಿತಿ ತಿಳಿಯಬಹುದು. ಡಾಕ್ಯುಮೆಂಟ್ಸ್‌ ವಿಧಾನದಲ್ಲಿ ಪುಸ್ತಕ ಇಡೀ ಪುಟದಲ್ಲಿರುವ ವಿಷಯವು ಸ್ಕ್ಯಾನ್‌ ಆಗಿ ಟೆಕ್ಸ್ಟ್ ಆಗಿ ಪರಿವರ್ತನೆಯಾಗುತ್ತದೆ. ನಂತರ ಯಥಾವತ್ತಾಗಿ ಕನ್ನಡ ಭಾಷೆಯಲ್ಲಿ ಓದಿ ಹೇಳುತ್ತದೆ. ಎಕ್ಸಪ್ಲೋರ್‌ (ಬೇಟಾ) ವಿಧಾನ ನಾವು ಕುಳಿತಿರುವ ಸ್ಥಳದ ಅಕ್ಕಪಕ್ಕದಲ್ಲಿರುವ ವಸ್ತುಗಳನ್ನು ಗುರುತಿಸಿ ತಿಳಿಸುತ್ತದೆ. ಕರೆನ್ಸಿ ವಿಧಾನದಿಂದ ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ತಿಳಿಯಬಹುದಾಗಿದೆ.

ದೃಷ್ಟಿದೋಷವುಳ್ಳವರ ಅನುಕೂಲಕ್ಕಾಗಿ ಕಳೆದ ಎರಡು ವರ್ಷಗಳಿಂದ ನಾನು ಮಾಡಿದ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಇದು ಹೆಮ್ಮೆಯ ವಿಚಾರ. ಗೂಗಲ್‌ ಸಂಸ್ಥೆಯವರು ರೂಪಿಸಿದ ಲುಕ್‌ಔಟ್‌ ಅಸಿಸ್ಟೆಡ್‌ ವಿಷನ್‌ ತಂತ್ರಾಂಶಕ್ಕೆ ಕನ್ನಡ ಭಾಷೆ ಸೇರ್ಪಡೆ ಮಾಡಿರುವುದರಿಂದ ದೃಷ್ಟಿದೋಷವುಳ್ಳವರಿಗೆ ತುಂಬಾ ಅನುಕೂಲವಾಗಿದೆ ಎಂದು ಸಿದ್ದಲಿಂಗೇಶ್ವರ ಇಂಗಳಗಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios