ಹಾಸನ (ಮಾ.28):  ಆರು ವರ್ಷದ ಬಾಲಕಿ ಹೊತ್ತೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಕೃತ್ಯ ಹಾಸನದಲ್ಲಿ ನಡೆದಿದೆ.  

ಶನಿವಾರ(ಮಾ.27)  ರಾತ್ರಿ ಪೋಷಕರ‌ ಜೊತೆ ಮಲಗಿದ್ದ ವೇಳೆ ಬಾಲಕಿ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದಾರೆ.  ಹಾಸನದ ಮೈಸೂರು ರಸ್ತೆ ಯಲ್ಲಿರೊ ಹೊಸ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಈ ಕೃತ್ಯದ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. 

 ರಾಮನಗರ ಮೂಲದ ಅಲೆಮಾರಿ ಕುಟುಂಬ ಹಾಸನದಲ್ಲಿ ನೆಲೆಸಿದ್ದು, ಮಲಗಿದ್ದ ಬಾಲಕಿ ಎತ್ತಿಕೊಂಡು ಹೋಗಿರೋ ಅತ್ಯಾಚಾರ ನಡೆಸಿದ್ದಾರೆ.  ಬಾಲಕಿಯನ್ನ ಎತ್ತಿಕೊಂಡು ಹೋಗಿರುವ ವೀಡಿಯೋ ಬಸ್ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು; ಎಲ್ಲಾ ಅವಳಿಗಾಗಿ, ಸುಂದರಿಗಾಗಿ ಇಳಿಸಂಜೆ ಹೆಣ ಬಿತ್ತು!

ಇದೀಗ ಅತ್ಯಾಚಾರಕ್ಕೆ ಒಳಗಾದ ಪುಟ್ಟ ಬಾಲಕಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಾಗಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 

ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.