ತುಮಕೂರು(ಫೆ.18): ಅತ್ಯಾಚಾರ ಮಾಡಿ, ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ವ್ಯಕ್ತಿ 25 ವರ್ಷದ ನಂತರ ಸಿಕ್ಕಿಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ 25 ವರ್ಷದಲ್ಲಿ ಸಿದ್ದಹನುಮಯ್ಯ ಸಿರಾಜ್ ಆಗಿ ಬದಲಾಗಿದ್ದಾನೆ. ಇಷ್ಟೂ ಸಮಯ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.

25 ವರ್ಷಗಳ ಬಳಿಕ ಕೊಲೆ ಆರೋಪಿಯನ್ನು ಬಂಧಿಸಲಾಗಿದ್ದು, ಸಿದ್ದಹನುಮಯ್ಯ (67) ಬಂಧಿತ ಆರೋಪಿ. ಕೊರಟಗೆರೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. 1994 ಡಿಸೆಂಬರ್ ‌1 ರಂದು ಈರಮಲ್ಲಮ್ಮ ಎನ್ನುವ ಮಹಿಳೆಯ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ.ಕೊರಟಗೆರೆ ತಾಲೂಕಿನ ಕತಕಲಘಟ್ಟದಲ್ಲಿ ಘಟನೆ ನಡೆದಿತ್ತು. ಘಟನೆ ನಡೆದ ದಿನದಿಂದ ಸಿದ್ದಹನುಮಯ್ಯ ತಲೆ ಮರೆಸಿಕೊಂಡಿದ್ದ.

ಆಟೋ ಪಲ್ಟಿ: ಇಬ್ಬರು ಮಹಿಳೆಯರ ಸಾವು

ಮುಂಬೈ ಗೋವಾಗಳಲ್ಲಿ ಬೇರೆ ಬೇರೆ ಹೆಸರಿಟ್ಟು ಕೊಂಡು ಕೆಲಸ ಮಾಡುತಿದ್ದ ಆರೋಪಿ ಸಿರಾಜ್ ಎಂಬ ಹೆಸರಿಟ್ಟುಕೊಂಡು ಕೊಪ್ಪಳದ ಮುಸ್ಲಿಂ ಮಹಿಳೆಯೊಂದಿಗೆ ಮದುವೆಯಾಗಿದ್ದ. ಕೊಪ್ಪಳದಿಂದ ನೆಲಮಂಗಲದಲ್ಲಿ ಬಂದು ವಾಸಿಸುತ್ತಿದ್ದು, ಆಗಾಗ ಮೊದಲ ಪತ್ನಿ, ಮಕ್ಕಳು, ಸಂಬಂಧಿಕರ ಜೊತೆ ಫೋನ್ ಸಂಪರ್ಕದಲ್ಲಿದ್ದ. ಫೋನ್ ಕಾಲ್ ಸುಳಿವಿನ ಮೇಲೆ ಸಿದ್ದಹನುಮಯ್ಯನನ್ನು ಬಂಧಿಸಿದ್ದಾರೆ.