ಬೆಂಗಳೂರು  [ಡಿ.19]:  ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಅಪರಾಧಿಗೆ ನಗರದ 71ನೇ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ 10 ವರ್ಷಗಳ ಕಾಲ ಶಿಕ್ಷೆ ಮತ್ತು 13 ಸಾವಿರ ರು. ದಂಡ ವಿಧಿಸಿದೆ.

ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೋಹನ ಪ್ರಭು ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಬಸವೇಶ್ವರ ಪೊಲೀಸ್‌ ಠಾಣಾ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಮಂಜುನಾಥ ನಗರದಲ್ಲಿ ವಾಸಿಯಾಗಿದ್ದ ಬಾಲಕಿಯ ಮನೆಗೆ 2017ರ ಆಗಸ್ಟ್‌ 27ರಂದು ಟಿವಿ ನೋಡುವುದಾಗಿ ನುಗ್ಗಿದ್ದ ಅಪರಾಧಿ ಶ್ರೀನಿವಾಸ್‌, ಬಾಲಕಿಗೆ ಲೈಂಗಿಕ ದೌಜನ್ಯವೆಸಗಿದ್ದ.

ಬೆಂಗಳೂರಿನಲ್ಲಿ ಚೆಂದ ವಸೂಲಿ IPS ವೇಷಧಾರಿ ಅಂದರ್...

ಘಟನೆ ಸಂಬಂಧ ಅಪ್ರಾಪ್ತೆಯ ಪೋಷಕರು ಬಸವೇಶ್ವರನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಪರಾಧಿಯನ್ನು ಬಂಧಿಸಿ, ತನಿಖೆ ನಡೆಸಿ ಸೂಕ್ತ ಪುರಾವೆಗಳೊಂದಿಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣ ಸಂಬಂಧ ಸರ್ಕಾರದ ಪರವಾಗಿ ಮೀನಾಕುಮಾರಿ ವಾದ ಮಂಡಿಸಿದ್ದರು.